2022ಕ್ಕೆ 75 ವರ್ಷಗಳ ಸ್ವಾತಂತ್ರ್ಯ ಪೂರೈಸಲಿರುವ ಭಾರತ; ಆಧುನಿಕ ಸಂಸತ್ ಕಟ್ಟಡಕ್ಕೆ ಬಿರ್ಲಾ ಒತ್ತಾಯ

2022ಕ್ಕೆ 75 ವರ್ಷಗಳ ಸ್ವಾತಂತ್ರ್ಯ ಪೂರೈಸಲಿರುವ ಭಾರತ; ಆಧುನಿಕ ಸಂಸತ್ ಕಟ್ಟಡಕ್ಕೆ ಬಿರ್ಲಾ  ಒತ್ತಾಯ

ನವದೆಹಲಿ, ಆಗಸ್ಟ್ 5 ಭಾರತ ಸ್ವತಂತ್ರ್ಯಗೊಂಡು 2022ಕ್ಕೆ 75 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ 'ನವ ಭಾರತ'ದ ಜೊತೆಗೆ ಆಧುನಿಕ ಸಂಸತ್ತಿನ ಕಟ್ಟಡಕ್ಕಾಗಿ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಸೋಮವಾರ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ, ಭಾರತೀಯ ಸಂಸತ್ತು 75 ವರ್ಷಗಳನ್ನು ಪೂರೈಸಿದೆ ಎಂದು ಬಿರ್ಲಾ ಹೇಳಿದರು. ಪ್ರಜಾಪ್ರಭುತ್ವದ ಈ ದೇವಾಲಯದಲ್ಲಿ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ, ಹಾಗೂ ಸಮಯ ಕಳೆದಂತೆ ಜವಾಬ್ದಾರಿಗಳೂ ಸಹ ಹೆಚ್ಚಾಗಿವೆ ಎಂದು ಸ್ಪೀಕರ್ ತಿಳಿಸಿದರು. ಭಾರತ ವಿಶ್ವದ ಅತಿದೊಡ್ಡ ಗಣರಾಜ್ಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವದ ಹೊಂದಿದ್ದು, ಸಂಸತ್ತಿನ ಕಟ್ಟಡವನ್ನು ಭವ್ಯ ಮತ್ತು ಆಕರ್ಷಕವಾಗಿ ಮಾಡಬೇಕೆಂಬುದು ನಮ್ಮ ನಿರೀಕ್ಷೆಯಾಗಿದೆ. ಇದಕ್ಕಾಗಿ, 2022 ರ ವೇಳೆಗೆ ಭಾರತ 75 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸುತ್ತಿದ್ದು, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸಂಸತ್ತಿನ ಕಟ್ಟಡಕ್ಕಾಗಿ ತಾವು ಪ್ರಧಾನಿಯವರನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

ಸುದ್ದಿ ಓದಿ