25 ಮೀ ರಾಪಿಡ್ ಫೈರ್ನಲ್ಲಿ ಬೆಳ್ಳಿ ಗೆದ್ದ ಭಾರತದ ಪುರುಷ ಆಟಗಾರರು
ಕೈರೋ: ಮಾರ್ಚ್ 07: ಭಾರತೀಯ ಪುರುಷರ 25 ಮೀ ಪಿಸ್ತೂಲ್ ತಂಡ ಅನೀಶ್ ಭನ್ವಾಲಾ, ಗುರುಪ್ರೀತ್ ಸಿಂಗ್ ಮತ್ತು ಭವೇಶ್ ಶೇಖಾವತ್ ಅವರು ಸೋಮವಾರ ನಡೆದ ರಾಪಿಡ್ ಫೈರ್ ರೈಫಲ್ ಟೀಮ್ ಈವೆಂಟ್ ನಲ್ಲಿ ಐಎಸ್ ಎಸ್ಎಫ್ ಶೂಟಿಂಗ್ ವರ್ಲ್ಡ್ನಲ್ಲಿ ಜರ್ಮನಿ ವಿರುದ್ಧ 7-17 ಪಡೆದು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು.
ಇಂಡೋನೇಷ್ಯಾ ವಿರುದ್ಧ 16-0 ಅಂತರದ ಮೇಲುಗೈ ಸಾಧಿಸಿದ ನಂತರ ಜೆಕ್ ಗಣರಾಜ್ಯ ಕಂಚಿನ ಪದಕವನ್ನು ಗೆದ್ದುಕೊಂಡಿತು. ಎರಡನೇ ಅರ್ಹತಾ ಹಂತದಲ್ಲಿ, ಭಾರತ 568 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು ಜರ್ಮನಿ 567 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮೊದಲ ಅರ್ಹತಾ ಹಂತದಲ್ಲಿ ಜರ್ಮನಿ 881 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 862 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಮೂರು ಚಿನ್ನ, 1 ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿರುವ ನಾರ್ವೆ ಬದಲಿಗೆ ಭಾರತವು 3 ಚಿನ್ನ, 2 ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು ಆರು ಪದಕಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.