ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ, ವೆಟ್ ಲಿಫ್ಟರ್ ಮಿರಾಬಾಯಿ ಚಾನುಗೆ ಬೆಳ್ಳಿ

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ, ವೆಟ್ ಲಿಫ್ಟರ್ ಮಿರಾಬಾಯಿ ಚಾನುಗೆ ಬೆಳ್ಳಿ

ಟೋಕಿಯೊ, ಜು.24 - ಮಹಿಳೆಯರ 49 ಕೆ.ಜಿ ವೆಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮಿರಾಬಾಯಿ ಚಾನು ಅವರು ಬೆಳ್ಳಿ ಗೆದ್ದು, ಇತಿಹಾಸ ನಿರ್ಮಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾ ಕೂಟದ ಎರಡನೇ ದಿನದಂದೇ ಭಾರತದ ಪದಕದ ಖಾತೆ ತೆರೆದಿದೆ. ಮಹಿಳಾ ವಿಭಾಗದಲ್ಲಿ ಮಿರಾಬಾಯಿ ಭರ್ಜರಿ ಪ್ರದರ್ಶನ ನೀಡಿ ರಜತ ತಮ್ಮದಾಗಿಸಿಕೊಂಡರು. 21 ವರ್ಷಗಳ ಬಳಿಕ ಮೀರಾಬಾಯಿ ಚಾನು ಮಹಿಳಾ ವಿಭಾಗದ ವೆಟ್ ಲಿಫ್ಟಿಂಗ್ ನಲ್ಲಿ ಪದಕ ಗೆದ್ದು ಕೊಂಡಿದ್ದಾರೆ. ಇದಕ್ಕೂ ಮೊದಲು 2000ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಪಡೆದಿದ್ದರು.
ಈ ವಿಭಾಗದ ಬಂಗಾರದ ಪದಕ ಚೀನಾದ ಹು ಜಿಹುಯಿ ಪಡೆದರೆ, ಇಂಡೋನೇಷ್ಯಾದ ವಿಂಡಿ ಐಸಾ ಕಂಚು ತಮ್ಮದಾಗಿಸಿಕೊಂಡಿದ್ದಾರೆ.

ಸುದ್ದಿ ಓದಿ