ಮಹಲಿಂಗಪುರ

ಭಾರತದ ಸಂಸ್ಕೃತಿ ಜನಪದ ಕಲೆಯಲ್ಲಿ ಅಡಗಿದೆ: ಸಿದ್ಧರಾಮ ಶಿವಯೋಗಿ ಶ್ರೀ

ಭಾರತದ ಸಂಸ್ಕೃತಿ ಜನಪದ ಕಲೆಯಲ್ಲಿ ಅಡಗಿದೆ: ಸಿದ್ಧರಾಮ ಶಿವಯೋಗಿ ಶ್ರೀ

ಮಹಾಲಿಂಗಪುರ 27: ಭಾರತದ ಸಂಸ್ಕೃತಿ ಜನಪದ ಕಲೆಯಲ್ಲಿ ಅಡಗಿದೆ, ಎಲೆ ಮರೆ ಕಾಯಂತಿರುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಪ್ರತಿ ತಿಂಗಳು ಸನ್ಮಾನಿಸುತ್ತಾ ಬರುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿನ ಸ್ಥಳೀಯ ಎಲ್ಲಾ ಸದಸ್ಯರ ಕಾರ್ಯ ಶ್ಲಾಘನೀಯ ಎಂದು ಶಿವಯೋಗಾಶ್ರಮ ಸಿದ್ಧರಾಮ ಶಿವಯೋಗಿ ಶ್ರೀ ಹೇಳಿದರು.  

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಪರಿಷತ್ತುಗಳ ಆಶ್ರಯದಲ್ಲಿ ಸಮೀಪದ ರನ್ನಬೆಳಗಲಿಯ ಅಮೃತೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಜರುಗಿದ ತಿಂಗಳ ಕಲಾವಿದರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  

ಕಜಾಪ ತಾಲೂಕ ಅಧ್ಯಕ್ಷರಾದ ರಮೇಶ್ ಅರಿಕೇರಿ ಉದ್ಘಾಟಿಸಿ ಮಾತನಾಡಿ, ಜನಪದ ಕಲೆ ಮತ್ತು ಜನಪದ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಆ ಕಲೆಗಳನ್ನು ಬೆಳೆಸಿ ಉಳಿಸುವುದು ಹಿರಿಯ ಕಲಾವಿದರ ಜವಾಬ್ದಾರಿಯಾಗಿದೆ, ಕಲೆಯನ್ನು ಉಳಿಸಿ ಬೆಳೆಸಲು ಶ್ರಮಪಡುತ್ತಿರುವ ಕಲಾವಿದರನ್ನು ನಮ್ಮ ಸಂಘ ಗುರುತಿಸಿ ಗೌರವಿಸುತ್ತಿದೆ. ಇದರಲ್ಲಿ ರನ್ನ ಬೆಳಗಲಿ ಸದಾ ಮುಂದು ಎಂದರು.  

ಸ್ಥಳೀಯ ಕಲಾವಿದರಾದ ಶಂಕ್ರ​‍್ಪ ಬಾಳಪ್ಪ ಚವಲದ, ಶಿವಪುತ್ರ​‍್ಪ ವಿರೂಪಾಕ್ಷಪ್ಪ ಕೊಣ್ಣೂರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಘವೇಂದ್ರ ನೀಲನ್ನವರ ಅಧ್ಯಕ್ಷತೆ ವಹಿಸಿದ್ದರು,  

ಮಹಾಂತೇಶ ಕುಂಬಾರ ಸ್ವಾಗತಿಸಿ, ಕಲಾವಿದರ ಪರಿಚಯ ಮಾಡಿದರು. ಕೆ.ಎ.ದಢೂತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಹಣಮಂತ ಮಲಾವಡಿ ವಂದಿಸಿ, ನಾಗರಾಜ ಬಟಾಟೆಪ್ಪಗೋಳ ನಿರೂಪಸಿದರು.ಎ.ಎಂ.ಕಂಬಾರ, ಯಮನಪ್ಪ ಆಲಗೂರ,ರುದ್ರಯ್ಯ ಸಾಲಿಮಠ, ಬಸವರಾಜ ಹೂಗಾರ,ಸಿದ್ದು ಗುರವ,ಮಲ್ಲಿಕಾರ್ಜುನ ಬನಹಟ್ಟಿ,ಚೌಲದ ಮತ್ತು ಕೊಣ್ಣೂರ ಕುಟುಂಬದವರು ಉಪಸ್ಥಿತರಿದ್ದರು. 


ಸುದ್ದಿ ಓದಿ