ಕ್ರೀಡೆ

ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ಭಾರತದ ನಿಖತ್ ಝರೀನ್

ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ಭಾರತದ ನಿಖತ್ ಝರೀನ್

ಹೈದರಬಾದ್ : ಫೆಬ್ರವರಿ: ಸ್ಟ್ರಾಂಡ್ಜಾ ಸ್ಮಾರಕ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತೆಲಂಗಾಣ ಬಾಕ್ಸರ್ ನಿಖತ್ ಜರೀನ್ ಚಿನ್ನದ ಪದಕ ಗೆದ್ದಿದ್ದಾರೆ. ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ನಿಜಾಮಾಬಾದ್ ಜಿಲ್ಲೆಯ ನಿಖತ್ 52ಕೆ.ಜಿ. ವಿಭಾಗದ ಫೈನಲ್‌ನಲ್ಲಿ ನಿಖತ್ 4–1ರಲ್ಲಿ ಟೆಟಿಯಾನಾ ಕೊಬೆ (ಉಕ್ರೇನ್‌) ಬಾಕ್ಸರ್ ರನ್ನ ಮಣಿಸಿ. 73 ವರ್ಷದ ಇತಿಹಾಸವಿರುವ ಸ್ಟ್ರಾಂಡ್ಜಾ ಪಂದ್ಯಾವಳಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎನಿಸಿಕೊಂಡರು.

2019ರಲ್ಲಿ ನಿಖತ್ ಚಿನ್ನದ ಪದಕವನ್ನೂ ಗೆದ್ದಿದ್ದರು. ಇದೇ ಟೂರ್ನಿಯಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತವೂ ಚಿನ್ನದ ಪದಕ ಗೆದ್ದಿತ್ತು. ಹರಿಯಾಣದ ನೀತು 5–0ರಲ್ಲಿ ಎರಿಕಾ ಪ್ರಿಸ್ಕಂಡ್ರೊ (ಇಟಲಿ) ಅವರನ್ನು ಸೋಲಿಸಿದರು. ಚಿನ್ನದ ಪದಕ ಗೆದ್ದ ನಿಖತ್ ಮತ್ತು ನೀತು 4,000 ಡಾಲರ್ (3 ಲಕ್ಷ ರೂ.) ಬಹುಮಾನ ಪಡೆದರು. ತೆಲಂಗಾಣ ರಾಜ್ಯ ಕ್ರೀಡಾ ಪ್ರಾಧಿಕಾರದ (ಎಸ್‌ಎಟಿಎಸ್) ಅಧ್ಯಕ್ಷ ಅಲ್ಲಿಪುರಂ ವೆಂಕಟೇಶ್ವರ ರೆಡ್ಡಿ ಅವರು ಚಿನ್ನ ಗೆದ್ದಿರುವ ನಿಖತ್ ಅವರನ್ನು ಅಭಿನಂದಿಸಿದ್ದಾರೆ.

ಎರಡನೇ ಬಾರಿ ಚಿನ್ನ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗಿದೆ. ಈ ಬಾರಿಯ ಚಿನ್ನದ ಪದಕ ನನ್ನ ಪಾಲಿಗೆ ವಿಶೇಷ. ಏಕೆಂದರೆ ಪ್ರಶಸ್ತಿ ಗೆಲ್ಲುವ ಸಲುವಾಗಿ ನಾನು ಸೆಮಿಫೈನಲ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬುಸೆನಾಜ್ ಸಕಿರೊಗ್ಲು (ಟರ್ಕಿ) ಅವರನ್ನು ಸೋಲಿಸಿದೆ. ಈ ವರ್ಷದ ಮೂರು ಪ್ರಮುಖ ಘಟನೆಗಳೆಂದರೆ ವಿಶ್ವ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್. ಇತ್ತೀಚಿನ ಯಶಸ್ಸು ಈ ಮೆಗಾ ಈವೆಂಟ್‌ಗಳ ನನ್ನ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ ನಿಖತ್ ಜರೀನ್

ಸುದ್ದಿ ಓದಿ