ವಿಶ್ವದ ನಂಬರ್ 1 ಚೆಸ್ ಆಟಗಾರನನ್ನ ಸೋಲಿಸಿದ ಭಾರತದ 16 ವರ್ಷದ ಯುವ ಆಟಗಾರ
ಚನ್ನೈ: ಫೆಬ್ರವರಿ 22: ಆನ್ ಲೈನ್ ರ್ಯಾಪಿಡ್ ಚೆಸ್ ಟೂರ್ನಿಯ ಏರ್ ಥಿಂಗ್ಸ್ ನಲ್ಲಿ ವಿಶ್ವದ ನಂ.1, ನಾರ್ವೆ ಗ್ರ್ಯಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ ಸನ್ ಗೆ ಶಾಕ್ ನೀಡಿದ 16 ವರ್ಷದ ಭಾರತೀಯ ಯುವ ಗ್ರ್ಯಾಂಡ್ ಮಾಸ್ಟರ್ ರಮೇಶ್ ಬಾಬು ಪ್ರಜ್ಞಾನಂದ.
ಅವರು ಕೇವಲ 39 ಮೂವ್ಗಳೊಂದಿಗೆ ಕಾರ್ಲ್ಸೆನ್ ಅವರನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಪ್ರಜ್ಞಾನಂದ ಅವರು ಕಾರ್ಲ್ಸೆನ್ಗೆ ಮೋಡಿ ಮಾಡಿ ಈ ಗೆಲುವಿನೊಂದಿಗೆ 8 ಅಂಕ ಗಳಿಸಿದ ಪ್ರಜ್ಞಾನಂದ 12ನೇ ರ್ಯಾಂಕ್ಗೆ ಏರಿದರು.
ಮೂಲತಃ ತಮಿಳುನಾಡಿನವರಾದ ಪ್ರಜ್ಞಾನಂದ ಅವರು 12ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಗೆಲ್ಲುವ ಮೂಲಕ ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರ ದಾಖಲೆಯನ್ನು ಮುರಿದಿದ್ದಾರೆ. ವಿಶ್ವನಾಥನ್ ಆನಂದ್ 18 ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಆದರು, ಆದರೆ ಪ್ರಜ್ಞಾನಂದ 12 ನೇ ವಯಸ್ಸಿನಲ್ಲಿ ದಾಖಲೆಯನ್ನು ಮುರಿದರು.ಈ ಸರಣಿಯಲ್ಲಿ ಗ್ರ್ಯಾಂಡ್ ಮಾಸ್ಟರ್ ಆದ ಐದನೇ ಅತಿ ಕಿರಿಯ ವ್ಯಕ್ತಿ ಎಂಬ ವಿಶ್ವ ದಾಖಲೆಯನ್ನು ಅವರು ಹೊಂದಿದ್ದಾರೆ.