ಆಸಂಗಿಯಲ್ಲಿ ಸ್ವಾತಂತ್ರ್ಯ ದಿನೋತ್ಸವ
ರಬಕವಿ-ಬನಹಟ್ಟಿ : ಸಮೀಪದ ಆಸಂಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಲಾಯಿತು.
ಶಾಲಾ ಸುಧಾರಣಾ ಸಮೀತಿಯ ಅಧ್ಯಕ್ಷ ಶಿವಯ್ಯ ಎನ್. ಮಠದ ಧ್ವಜಾರೋಹಣ ನೆರವೇರಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಯಶೋಧಾ ಮದನಮಟ್ಟಿ, ಸದಸ್ಯರಾದ ಕುಮಾರ ಪೂಜಾರಿ, ಪರಶುರಾಮ ತೇಲಿ, ರಮೇಶ ಘಟ್ನಟ್ಟಿ, ಶಂಕರ ಸಾಲ್ಗುಡೆ, ಗೋಪಾಲ ಜಾನಪ್ಪಗೋಳ, ಲಕ್ಷ್ಮೀ ಕೊಕಟನೂರ, ಸಾವಿತ್ರಿ ತೇಲಿ, ಜ್ಯೋತಿ ನಾವಿ, ಪಾರ್ವತಿ ಹೊಡಗೆ, ಆನಂದ ಚಲವಾದಿ, ಸಂಜು ಹರಿಜನ, ಬಾಹುಬಲಿ ಶಿರಹಟ್ಟಿ ಸೇರಿದಂತೆ ನ್ಯಾಯವಾದಿ ಹರ್ಷವರ್ಧನ ಪಟವರ್ಧನ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಕೆ.ಎನ್.ತೆಲಗಾಂವ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಶಾಲಾ ಮಕ್ಕಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.