ಅಂತರರಾಷ್ಟ್ರೀಯ

ಕೋವಿಡ್‌ ಹೆಚ್ಚಳ; ಆಸ್ಟ್ರೇಲಿಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ ವಿಸ್ತರಣೆ

ಕೋವಿಡ್‌ ಹೆಚ್ಚಳ; ಆಸ್ಟ್ರೇಲಿಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ ವಿಸ್ತರಣೆ

ಕ್ಯಾನ್‌ಬೆರಾ, ಆ 31  ಆಸ್ಟ್ರೇಲಿಯಾದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಧಾನಿ ಕ್ಯಾನ್‌ಬೆರಾದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ ಅನ್ನು ಎರಡು ವಾರಗಳ ಕಾಲ ವಿಸ್ತರಿಸಲಾಗಿದೆ.
  ಮಂಗಳವಾರ ಆಸ್ಟ್ರೇಲಿಯಾದಲ್ಲಿ 1,253 ಹೊಸ ಪ್ರಕರಣಗಳು ವರದಿಯಾಗಿವೆ.
 ಕ್ಯಾನ್ಬೆರಾದ ಕಟ್ಟುನಿಟ್ಟಾದ ಲಾಕ್‌ಡೌನ್ ಗುರುವಾರ ಕೊನೆಗೊಳ್ಳಲಿದ್ದು, ಅದನ್ನು  ಸೆಪ್ಟೆಂಬರ್ 17ರವರೆಗೆ ವಿಸ್ತರಿಸಲಾಗಿದೆ.
ಆದರೆ, ಇದರಲ್ಲಿ ಕೆಲ ವಿನಾಯಿತಿ ನೀಡಲಾಗಿದ್ದು, ಹೊರಾಂಗಣದಲ್ಲಿ ಹೆಚ್ಚಾಗಿ ಕೆಲಸ ಮಾಡುವವರಿಗೆ  ಕೆಲಸಕ್ಕೆ ಮರಳಲು ಅನುಮತಿಸಲಾಗಿದೆ. ದೈನಂದಿನ ಹೊರಾಂಗಣ ವ್ಯಾಯಾಮದ ಮಿತಿಯನ್ನು ಒಂದರಿಂದ ಎರಡು ಗಂಟೆಗಳವರೆಗೆ ಹೆಚ್ಚಿಸಲಾಗಿದೆ.

ಸುದ್ದಿ ಓದಿ