ನಿಲ್ಲದ ಮಳೆ ಅನಾಹುತ: ಭೂ ಕುಸಿತ, ಮನೆಗಳ ಕುಸಿತ, ಜನಜೀವನ ಬಾಧಿತ

ನಿಲ್ಲದ ಮಳೆ ಅನಾಹುತ:  ಭೂ ಕುಸಿತ,  ಮನೆಗಳ  ಕುಸಿತ,  ಜನಜೀವನ  ಬಾಧಿತ

ಬೆಂಗಳೂರು , ಜುಲೈ24   ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ  ಮುಂದುವರೆದಿದ್ದು, ಹಲವೆಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಭೂ ಕುಸಿತ, ಸೇತುವೆ , ಮನೆಗಳ  ಕುಸಿತ  ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ  ಬಾಧಿತವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ನಾಳೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.  ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಹಾನಿಯ ಬಗ್ಗೆ ಪರಿಶೀಲಿಸಲಿದ್ದಾರೆ.
 
ಇಂದು ಸಹ ಮುಖ್ಯಮಂತ್ರಿಯವರು  ಮಳೆ ಹಾನಿಗೊಳಗಾದ   ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಕರೆ ಮಾಡಿ ಭಾರಿ ಅನಾಹುತಗಳ ಸಿಎಂ  ಮಾಹಿತಿ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ  ಜಿಲ್ಲೆಯಲ್ಲಿಯೇ ಮೊಕ್ಕಂ  ಹೂಡಿ,  ಜನರ ಕಷ್ಟ ಆಲಿಸುವಂತೆ  ಸೂಚನೆ ಕೊಟ್ಟಿದ್ದಾರೆ.

ಸುದ್ದಿ ಓದಿ