ಮಹಲಿಂಗಪುರ

ಮಹಾಲಿಂಗಪುರ,ತೇರದಾಳ ವಲಯ ಘಟಕಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

ಮಹಾಲಿಂಗಪುರ,ತೇರದಾಳ ವಲಯ ಘಟಕಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

ಮಹಾಲಿಂಗಪುರ : ಕನ್ನಡ ಸಾಹಿತ್ಯ ಪರಿಷತ್ತು ರಬಕವಿ-ಬನಹಟ್ಟಿ ತಾಲೂಕು, ಮಹಾಲಿಂಗಪುರ ಹಾಗೂ ತೇರದಾಳ ವಲಯಗಳ ಕಾರ್ಯಚಟುವಟಿ ಘಟಕಗಳ ಉಧ್ಘಾಟನಾ ಸಮಾರಂಭವು ಫೆ.27ರಂದು ಮುಂಜಾನೆ 10 ಗಂ.ಗೆ ಪಟ್ಟಣದ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಜರುಗುವುದು. 

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಬಕವಿಯ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿಧ್ಧೇಶ್ವರ ಸ್ವಾಮಿಗಳು ವಹಿಸಿ, ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ, ಅಧಿಕಾರ ಪತ್ರ ವಿತರಣೆ ಮಾಜಿ ಸಚಿವೆ ಉಮಾಶ್ರೀ ಮಾಡುವರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಪಿ.ಕೆ.ಪಿ.ಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ, ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಆರಿ, ಮುಖ್ಯಾಧಿಕಾರಿ ಎಚ್‌.ಎಸ್ ಚಿತ್ತರಗಿ, ಪ್ರಾಚಾರ್ಯ ಎಸ್‌. ಐ ಕುಂದಗೋಳ, ಜಿಲ್ಲಾ ಕಸಾಪ ಸದಸ್ಯೆ ದ್ರಾಕ್ಷಾಯಣಿ ಮಂಡಿ ಆಗಮಿಸುವರು.  

ಕಸಾಪ ತಾಲೂಕಾ ನಿಕಟಪೂರ್ವ ಅಧ್ಯಕ್ಷ ವಿರೇಶ ಆಸಂಗಿ ತಾಲೂಕಾ ನೂತನ ಅಧ್ಯಕ್ಷ ಮೃ.ಕೃ ಮೇಗಾಡಿಯವರಿಗೆ ಅಧಿಕಾರ ಹಸ್ತಾಂತರ ಮಾಡುವರು. ಆದ್ದರಿಂದ ತಾಲೂಕಿನ ಹಾಗೂ ಮಹಾಲಿಂಗಪುರ ಮತ್ತು ತೇರದಾಳ ಪಟ್ಟಣಗಳ ಅದೇ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ಕಸಾಪ ತಾಲೂಕಾ ಕಾರ್ಯದರ್ಶಿ ಮಹೇಶ ಮನ್ನಯ್ಯನವರಮಠ ಪತ್ರಿಕೆಗೆ ತಿಳಿಸಿದ್ದಾರೆ. 


ಸುದ್ದಿ ಓದಿ