ಕುಕನೂರ್

ಕುದರಿಮೋತಿಯಲ್ಲಿ ಬೀದಿ ದೀಪ ಉದ್ಘಾಟನೆ

ಕುದರಿಮೋತಿಯಲ್ಲಿ ಬೀದಿ ದೀಪ ಉದ್ಘಾಟನೆ


ಲೋಕದರ್ಶನ ವರದಿ 

ಕುಕನೂರು 22: ತಾಲೂಕಿನ ಕುದರಿಮೋತಿಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಬೀದಿ ದೀಪ ಉದ್ಘಾಟನೆ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗದುಕೊಳ್ಳಬೇಕು ಎಂದು ಮುಖಂಡ ಮಂಜುನಾಥ ಗಟ್ಟೆಪ್ಪನವರ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕುದರಿಮೋತಿಯಲ್ಲಿ ಸಚಿವರ ಹಾಲಪ್ಪ ಆಚಾರ್ ಅವರು ಗ್ರಾಮದ ಮುಖ್ಯರಸ್ತೆ ಅಗಲೀಕರಣ ಹಾಗು ರಸ್ತೆಗೆ ಬೀದಿ ದೀಪವನ್ನು ಲೋಕೋಪಯೋಗಿ ಇಲಾಖೆಯಿಂದ 5054 ಅಪೆಂಡಿಕ್ಸ್‌ ಯೋಜನೆಯಲ್ಲಿ 1ಕೋಟಿ ವೆಚ್ಚದಲ್ಲಿ ಮಂಜೂರು ಮಾಡಿಸಿದ್ದರು. ಕಾಮಗಾರಿ ಪೂರ್ಣಗೊಂಡು ಇನ್ನು ಗುತ್ತಿಗೆದಾರರಿಂದ ಇಲಾಖೆಗೆ ಹಸ್ತಾಂತರ ಸಹ ಆಗಿಲ್ಲ. ಆದರೆ ಸೆ 17ರಂದು ಗ್ರಾಮದ ಗ್ರಾಪಂ ಅಧ್ಯಕ್ಷೆ ದುರುಗಮ್ಮ ದೂಪಂ, ಗ್ರಾಪಂ ಸದಸ್ಯೆ ಫರೀಧಾ ತಂಬಾಕದಾರ ಹಾಗು ಆಕೆಯ ಪತಿ ಹುಸೇನ ಬಾಷಾ ಮತ್ತು ಸಂಗಡಿಗರು ಬೀದಿ ದೀಪದ ಸ್ವೀಚ್ ಬೋರ್ಡನ ಕೀ ಒಡೆದು ಬೀದಿ ದೀಪಗಳ ಕಾಮಗಾರಿಯನ್ನು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮ ಬಗ್ಗೆ ಅನುದಾನ ನೀಡಿದ ಸಚಿವರಿಗೆ, ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಾಗು ಜನಪ್ರತಿನಿಧೀಗಳ ಗಮನಕ್ಕೆ ತಂದಿರುವುದಿಲ್ಲ. ಶಿಷ್ಟಾಚಾರ ಉಲ್ಲಂಘಿಸಿ ದೀಪ ದೀಪಗಳ ಉದ್ಘಾಟನೆ ಮಾಡಿದ್ದಾರೆ. ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಪತ್ರದಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ