ಸಂಚಾರಿ ಹಣ್ಣಿನ ಮಳಿಗೆಗಳ ಸತೀಶ ಜಾರಕಿಹೊಳಿ ಉದ್ಘಾಟನೆ

ಸಂಚಾರಿ ಹಣ್ಣಿನ ಮಳಿಗೆಗಳ ಸತೀಶ ಜಾರಕಿಹೊಳಿ ಉದ್ಘಾಟನೆ

ಲೋಕದರ್ಶನ ವರದಿ

ಸಂಚಾರಿ ಹಣ್ಣಿನ ಮಳಿಗೆಗಳ ಸತೀಶ ಜಾರಕಿಹೊಳಿ ಉದ್ಘಾಟನೆ

ಉಳ್ಳಾಗಡ್ಡಿ-ಖಾನಾಪೂರ 03: ರಸ್ತೆ ಬದಿಯಲ್ಲಿ ನಿತ್ಯ ರೈತರು ಬೆಳೆದ ವಿವಿಧ ಹಣ್ಣುಗಳನ್ನು ತಂದು ಮಾರಾಟಮಾಡಿ ಜೀವನೋಪಾಯ ನಡೆಸುತ್ತಿರುವ ಹಣ್ಣಿನ ವ್ಯಾಪಾರಸ್ಥರ ಕುಟುಂಬಗಳಿಗೆ ತೋಟಗಾರಿಕೆ ಇಲಾಖೆಯ ಎನ್‍ಎಮ್‍ಎಚ್ ಯೋಜನೆಯಡಿಯಲ್ಲಿ ಸುಮಾರು 23 ಹಣ್ಣಿನ ತಳ್ಳುಗಾಡಿಗಳನ್ನು ವಿತರಿಸಲಾಗಿದೆ, ಇದರಲ್ಲಿ 8 ಗಾಡಿಗಳು ಸಂಚಾರಕ್ಕೆ ಅನೂಕೂಲವಾಗುವಂತೆ ನಿರ್ಮಿಸಲಾಗಿದೆ, ರಸ್ತೆ ಬದಿಯಲ್ಲಿ ನಿತ್ಯವೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರ ಅನೂಕೂಲಕ್ಕಾಗಿ ಈ ಸಂಚಾರಿ ಮಾರಾಟಗಾಡಿಗಳನ್ನು ನೀಡಲಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಇಂಥ ವ್ಯಾಪಾರಸ್ಥರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ಚರ್ಚಿಸಿ ಇಂಥ ವಿನೂತನ ಪ್ರಯತ್ನ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

 ಅವರು ಶನಿವಾರ ದಿ, 3 ರಂದು ಹಿಡಕಲ್ ಡ್ಯಾಂ ರಸ್ತೆಯ ಜಿನರಾಳ ಕ್ರಾಸ್ ಬಳಿ ಈ ಸಂಚಾರಿ ಮಳಿಗೆ ಉದ್ಠಾಟಿಸಿ ಮಾತನಾಡುತ್ತ, ವ್ಯಾಪಾರsಸ್ಥರಿಗೆ ಶಾಸ್ವತ ಪರಿಹಾರ ಒದಗಿಸುವ ದಿಸೆಯಲ್ಲಿ ಈ ವ್ಯವಸ್ಥೆ ಮಾಡಿದ್ದು ಮುಂಬರುವ ದಿನಗಳಲ್ಲಿ ಈ ವಲಯದಲ್ಲಿನ ಭೂಮಿಯಲ್ಲಿ ರುಚಿಯಾದ ಹಣ್ಣು-ಹಂಪಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದ ರೈತರು ಇಂಥ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಮುಂದೆ ಬಂದರೆ ತೋಟಗಾರಿಕಾ ಇಲಾಖೆಯಿಂದ ಸಹಕಾರ ನೀಡಲಾಗುವುದು,

ಯಮಕನಮರಡಿ ಹಾಗೂ ಗ್ರಾಮೀಣ ಪ್ರದೇಶದ ರೈತರು ಹಣ್ಣುಗಳನ್ನು ಶೇಖರಿಸಿಡಲು ಶೈತ್ಯಾಗಾರ [ಕೋಲ್ಡ್ ಸ್ಟೋರೇಜ್] ಘಟಕದ ಬೇಡಿಕೆಯಿದ್ದು ಮುಂಬರುವ ದಿನಗಳಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಘಟಕವನ್ನು ಸ್ಥಾಪಿಸಲಾಗುವುದು ಎಂದರು,

ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ರಸ್ತೆ ಬದಿಯಲ್ಲಿ ಕುಳಿತು ಹಣ್ಣುಗಳನ್ನು ಮಾರುತ್ತಿದ್ದ ನಮಗೆ ಸಂಚಾರಿ ಹಣ್ಣಿನ ಗಾಡಿಗಳನ್ನು ನೀಡಿ ಜೀವನಕ್ಕೆ ಮತ್ತಷ್ಟು ಆಸರೆಯಾಗಿದ್ದಕ್ಕೆ ಧನ್ಯತಾಭಾವದಿಂದ ತಳ್ಳುಗಾಡಿಯ ಅಜ್ಜಿಯೋರ್ವಳು ನಮ್ಮ ಸತೀಶ ಸಾಹುಕಾರರನ್ನು ದೇವರ ಚೆನ್ನಾಗಿಡ್ಲಿ ಎಂದು ಹಾರ‍್ಯಸಿದಳು,

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ರವಿಂದ್ರ ಹಕಾಟೆ, ತಹಸಿಲ್ದಾರ ಡಿ,ಎಚ್,ಹೋಗಾರ, ಹುಕ್ಕೇರಿ ಕಾರ್ಯನಿರ್ವಾಹಕಾಧಿಕಾರಿಗಳಾದ ಉಮೇಶ ಸಿದ್ನಾಳ, ಹುಕ್ಕೇರಿಯ ತೋಟಗಾರಿಕಾ ಇಲಾಖೆಯ ತಾತ್ಯಾಸಾಬ ನಾಂದಣಿ, ಜಿ,ಪಂ,ಸದಸ್ಯರಾದ ಮಂಜುನಾಥ ಪಾಟೀಲ, ಮಹಾಂತೇಶ ಮಗದುಮ್ಮ, ತಾ,ಪಂ,ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಕಿರಣ ರಜಪೂತ, ಪ್ರಕಾಶ ಬಸ್ಸಾಪೂರಿ, ಸುರೇಶ ಬೆಣ್ಣಿ, ಹಾಗೂ ಯಮಕನಮರಡಿ ವಲಯದ ಗ್ರಾಮ ಪಂಚಾಯತ ಸದಸ್ಯರು ಹಾಗೂ ಕಾಂಗ್ರೆಸ್ಸ್ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

ಸುದ್ದಿ ಓದಿ