ಡಿಸೆಂಬರದಲ್ಲಿ 5ಕೋಟಿ ವೆಚ್ಚದ ಮಿನಿವಿಧಾನ ಸೌಧ ಉದ್ಘಾಟನೆ: ಕಾರಜೋಳ
ಮುಧೋಳ : 2017 ಚದರ ಅಡಿಯಲ್ಲಿ ನಿರ್ಮಾಣವಾದ ಆರು ನೂರು ಆಸನಗಳನ್ನು ಹೊಂದಿರುವ 3.50ಕೋಟಿ ವೆಚ್ಚದ ಅತ್ಯಾಧುನಿಕ ವ್ಯವಸ್ಥಿತ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಭವನದ ನಿರ್ವಹಣೆ ಉತ್ತಮವಾಗಿರಲಿ ಸ್ವಚ್ಚ, ಸುಂದರವಾಗಿ ಇಟ್ಟುಕೊಳ್ಳಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಭವನ ಪರೀಶೀಲನೆ ಮಾಡಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಈ ನಿಟ್ಟಿನಲ್ಲಿ ಈ ಭವನದ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಿರ್ಣಯ ಮಾಡಲಾಗುವದು ಇಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಮದುವೆ ಉತ್ಸವಗಳಿಗೆ ಕನಿಷ್ಠ ದರ ನಿಗದಿ ಮಾಡಲಾಗಿದೆ ಆರು ನೂರು ಆಸನಗಳ ಜೊತೆಗೆ ಸಾವಿರ ಜನರು ಕುಳಿತುಕೊಳ್ಳಬಹುದಾದ ಸಭಾಂಗಣ, ಸುಸಜ್ಜಿತ ನಾಲ್ಕು ಗೆಸ್ಟ್ ರೂ ಇದ್ದು ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿದೆ. ಕಾರ್ಯಾಲಯ, ವಿದ್ಯುತ್, ನೀರು ಸಹಿತ ಅಡುಗೆ ಮನೆ,ಊಟದ ಹಾಲುಗ್ರಾಣ ಕೊಠಡಿ, ಸ್ನಾನ ಗೃಹಗಳು ಪ್ರತ್ಯೇಕ ಶೌಚಾಲಯ ಸಭಾಮಂಟಪ ಸಹಿತ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ.
ಇನ್ನು ಮಿನಿ ವಿಧಾನಸೌದವು ನಗರದ ಹಳೆ ತಹಸೀಲ್ದಾರ ಕಚೇರಿಯಲ್ಲಿ 15ಕೋಟಿ ರೂ ವೆಚ್ಚದಲ್ಲಿ 80 ಸಾವಿರ ಚದರ ಅಡಿಯಲ್ಲಿ ಮೂರು ಮಹಡಿಯ ಕಟ್ಟಡ ನಿರ್ಮಾಣವಾಗಲಿದ್ದು ಡಿಶಂಬರದಲ್ಲಿ ಇದು ಮುಕ್ತಾಯವಾಗುತ್ತದೆ ಇಲ್ಲಿ ನೊಂದಣಿ,ತಹಸೀದಾರ,ಮಕ್ಕಳ ಕಲ್ಯಾಣ ಇಲಾಖೆ,ಅಬಕಾರಿ ಸೇರಿದಂತೆ ಎಲ್ಲ ಕಟ್ಟಡಗಳನ್ನು ಒಂದೇ ಸ್ಥಳದಲ್ಲಿ ಇರುವಂತೆ ಮಾಡಲಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ,ಜಿ.ಪಂ ಮಾಜಿ ಸದಸ್ಯ ಭೀಮನಗೌಡ ಪಾಟೀಲ,ಶ್ರೀಕಾಂತ ಗುಜ್ಜನವರ,ಸದಾ ಜಾದವ, ಅನಂತ ಘೋರೆ್ಡ,ಪಿ.ಡಬ್ಲೂ.ಡಿ ಎಇಇ ಸೋಮಶೇಖರ ಸಾವನ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಮೋಹನ್ ಕೋರಡ್ಡಿ,ತಾ.ಪಂ ಇಓ ಕಿರಣ ಘೋರೆ್ಡ,ನಗರಸಭೆ ಪೌರಾಯುಕ್ತ ಶಿವಪ್ಪ ಅಂಬಿಗೇರ ಇದ್ದರು.
ಮುಖ್ಯಮಂತ್ರಿ ಸೀಟು ಖಾಲಿ ಇಲ್ಲ
ಮುಧೋಳ ;ಸಿ.ಎಂ ಬದಲಾವಣೆ ಅನ್ನುವದು ಗಾಳಿ ಸುದ್ದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸೀಟು ಖಾಲಿಯಿಲ್ಲ ಈ ಕಾರಣಕ್ಕಾಗಿ ಬದಲಾವಣೆ ಬೇರೆಯವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಊಹಾಪೂಹಗಳಿಗೆ ಕಿವಿಗೊಡಬಾರದು ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನಡೆಸುತ್ತಿದ್ದು ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ ಚುನಾವಣೆ ಮುಖ್ಯಮಂತ್ರಿ ಯಾವೂದೇ ನಿರ್ದಾರಗಳು ಹೈಕಮಾಂಡ ಮೇಲೆ ಇದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.