ಮಹಲಿಂಗಪುರ

ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್, ಕುರಿ ಸಾಕಾಣಿಕೆ ತರಬೇತಿ ಉದ್ಘಾಟನಾ ಸಮಾರಂಭ

ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್,  ಕುರಿ ಸಾಕಾಣಿಕೆ ತರಬೇತಿ ಉದ್ಘಾಟನಾ ಸಮಾರಂಭ

ಬಳ್ಳಾರಿ,25: ಮಹಿಳೆಯರು ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವರಿಂದ ಬ್ಯೂಟಿ ಪಾರ್ಲರ್ ಸ್ವ-ಉದ್ಯೋಗ ಮಾಡಿಕೊಂಡು  ಸೃಜನಾತ್ಮಕವಾಗಿ ಹೊಸ ತರಹದ ಮೇಕಪ್ ಕೌಶಲ್ಯವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈ ಬ್ಯೂಟಿ ಪಾರ್ಲರ್ ತರಬೇತಿ ನಿಮಗೆ ಸಹಕಾರಿಯಾಗಲಿ ಎಂದು ಪ್ರಮೋದ ಪಿ ಹೇಳಿದರು. 

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ (ಅಃ ಖಖಇಖಿಋ) ಆವರಣದಲ್ಲಿ 30 ದಿನಗಳ  ಬ್ಯೂಟಿ ಪಾರ್ಲರ್ ತರಬೇತಿ ಮತ್ತು 10 ದಿನಗಳ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಜು.24. 2024 ರಂದು ಹಮ್ಮಿಕೊಂಡಿದ್ದು 

ಈ ತರಬೇತಿ ಉದ್ಘಾಟನಾ ಸಮಾರಂಭದ ಮುಖ್ಯ ಅಥಿತಿಗಳಾಗಿ ಬಳ್ಳಾರಿ, ಯೋಜನಾ ಅಧಿಕಾರಿಗಳು ಜಿಲ್ಲಾ ಪಂಚಾಯತ ಪ್ರಮೋದ ಪಿ  ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಕುರಿ ಸಾಕಾಣಿಕೆ ವ್ಯವಸಾಯದ ಜೊತೆಗೆ ಪೂರಕವಾಗಿದ್ದು, ಕುರಿಗಳಿಗೆ ತುಂಬಾ ಬೇಡಿಕೆ ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಾರೈಸಿದರು.  

ಅಜೀತ್ ನಾಯ್ಕ ಉಪ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಬಳ್ಳಾರಿ. ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳೆಯರು ಮನೆಯಲ್ಲಿ ಕುಳಿತು ಬ್ಯೂಟಿ ಪಾರ್ಲರ ಮಾಡುವದರಿಂದ ಕೌಟುಂಬಿಕ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು. ಶ್ರೀ ರಾಜೇಸಾಬ್ ಎಚ್ ಎರಿಮನಿ ನಿರ್ದೇಶಕರು, ಕಾರ್ಯಕ್ರಮವನ್ನು ಉದ್ದೇಶಿಸಿ ನಮ್ಮ ತರಬೇತಿ ಸಂಸ್ಥೆಯಲ್ಲಿ ಕೌಶಲ್ಯದ ಜೊತೆಗೆ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನದ ಮಾಹಿತಿ ನೀಡಲಾಗಿದ್ದು, ಅದನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಹಿತಿ ನೀಡಿದರು.  

ರಘುವರ್ಮಾ ಓಖಐಒ ಜಿಲ್ಲಾ ಪಂಚಾಯತ ಬಳ್ಳಾರಿ, ಜಡೇಪ್ಪ ತರಬೇತಿ ಕಾರ್ಯಕ್ರಮ ಸಂಯೋಜಕರು, ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ ಹಾಗೂ 60 ಜನ ಶಿಭಿರಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ