ಐದು ದಶಕದ ಸಾರ್ಥಕ ಸೇವೆಯಲ್ಲಿ ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆ

ಐದು ದಶಕದ ಸಾರ್ಥಕ ಸೇವೆಯಲ್ಲಿ ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆ

ರಾಣೆಬೆನ್ನೂರು 10:  ಐವತ್ತು ವರ್ಷಗಳ ಸಾರ್ಥಕ ಸೇವೆಯಲ್ಲಿ ಇಂದಿನ ವಾಣಿಜ್ಯ ನಗರದ ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆಯು, ಡಿಸೆಂಬರ್ 11ರ 2022 ರಂದು ರವಿವಾರ ಮಧ್ಯಾಹ್ನ 3:00ಘಂಟೆಗೆ ಹಳೆಯ ವಿದ್ಯಾರ್ಥಿಗಳ ಸಂಭ್ರಮದ ಮಧ್ಯೆ ಐವತ್ತು ವರ್ಷಗಳ ಸಾರ್ಥಕ ಸೇವೆಯ ಅಮೃತ ಮಹೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳುತ್ತಲಿದೆ. ಅಂದು ಇಂದಿನಂತೆ ಶೈಕ್ಷಣಿಕವಾಗಿ ಉನ್ನತ ಪ್ರಗತಿ ಸಾಧಿಸದೆ ಇರುವಂತಹ  ಸಂದರ್ಭದಲ್ಲಿ, ಮೊಟ್ಟ ಮೊದಲ ಬಾರಿಗೆ 1972 ರಲ್ಲಿ ಎಪಿಎಂಸಿ ರಸ್ತೆಯ ಕೊಪ್ಪಳದವರ  ಕಟ್ಟಡದಲ್ಲಿ ಆರಂಭಗೊಂಡ ಪ್ರಥಮ ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆಯು ಏಕೈಕ ಸಂಸ್ಥೆಯಾಗಿ ನಿರಂತರ ಸಾಧನೆ ಮಾಡುತ್ತಲಿದೆ. ವಿದ್ಯಾರ್ಥಿಗಳ ಸುಸರ್ಜಿತ ಅಗತ್ಯಕ್ಕನುಗುಣವಾಗಿ 1985ರಲ್ಲಿ ಅಂಚೆ ಕಚೇರಿ ಹಿಂಬಾಗದಲ್ಲಿ ತಮ್ಮ ಸ್ವಂತ ಕಟ್ಟಡದಲ್ಲಿ ಸ್ಥಳಾಂತರಗೊಂಡ ಈ ವಿದ್ಯಾಸಂಸ್ಥೆಯಲ್ಲಿ ಶೈಕ್ಷಣಿಕ ಪೂರಕವಾಗಿ ಶಿಕ್ಷಣ ಪಡೆಯುವ ನಗರ ಮತ್ತು ಜಿಲ್ಲೆಯ ವಿದ್ಯಾರ್ಥಿಗಳಿಗೆ ಇರುವ ಏಕೈಕ ಅಚ್ಚುಮೆಚ್ಚಿನ  ವಾಣಿಜ್ಯ ವಿದ್ಯಾ ಸಂಸ್ಥೆ ಇದಾಗಿದೆ ಎನ್ನುವುದು ಅತ್ಯಂತ ಹೆಮ್ಮೆಯ ಸಂಗತಿ. ಸಂಸ್ಥಾಪಕರಾಗಿರುವ ಪ್ರೊ. ಎಸ್‌. ಬಿ.ಅಂಗಡಿ ಅವರು ಆರಂಭದಿಂದಲೂ ಇದರ ಪ್ರಾಂಶುಪಾಲರಾಗಿ, ವಿದ್ಯಾರ್ಥಿಗಳ ಅತ್ಯುತ್ತಮ ಮಾರ್ಗದರ್ಶಕರಾಗಿ, ಜನಪರ ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೆ  ಸಂಸ್ಥೆಯ ಮೂಲಕ ಸರಕಾರದ ವಿವಿಧ ಇಲಾಖೆಗಳಲ್ಲಿ  ಸಾವಿರಾರು ವಿದ್ಯಾರ್ಥಿಗಳಿಗೆ  ಉದ್ಯೋಗದಾತರಾಗಿ, ಜನಪ್ರಿಯತೆ ಗಳಿಸಿದ್ದಾರೆ. ಐವತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಪ್ರೌಢಶಾಲಾ ಪರೀಕ್ಷಾ ಮಂಡಳಿಯ ಅದೀನದಲ್ಲಿ ನಡೆಯುವ ಈ ಶಿಕ್ಷಣ ಸಂಸ್ಥೆಯಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆ ಎದುರಿಸಿದ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ ಮತ್ತು ಹೊರ ರಾಜ್ಯದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.  

ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಕ್ಕೆ ಮಾತ್ರ ಸೀಮಿತವಾಗದೆ, ಪೂರಕ ಉದ್ಯೋಗ ಸೃಷ್ಟಿಸುವ ಬೆರಳಚ್ಚು ಮತ್ತು ಶೀಘ್ರ ಲಿಪಿ  ಪರೀಕ್ಷೆ ಕೇವಲ ಎರಡು ವರ್ಷಗಳದ್ದಾಗಿದ್ದು, ಬಿಡುವಿನ ಅವಧಿಯಲ್ಲಿ ಸ್ವಲ್ಪ  ಸಮಯ ಮೀಸಲಿಟ್ಟು, ಪರೀಕ್ಷೆ ಎದುರಿಸಿದರೆ   ಕೆಪಿಎಸ್ಸಿ ಮೂಲಕ ನೇರವಾಗಿ ನೌಕರಿಗೆ ಆಯ್ಕೆಯಾಗಬಹುದಾಗಿದೆ, ಎನ್ನುತ್ತಾರೆ ಪ್ರಾಂಶುಪಾಲ ಎಸ್‌.ಬಿ. ಅಂಗಡಿ. ಕಳೆದ 5 ವರ್ಷಗಳ ಹಿಂದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಹೊಸದಾಗಿ ಜಾರಿಗೆ ತಂದ ಆಧುನಿಕ ತಂತ್ರಜ್ಞಾನದ ಕಂಪ್ಯೂಟರ್ ತರಬೇತಿಯೂ ಸಹ ಇಲ್ಲಿ ಆರಂಭಿಸಲಾಗಿದ್ದು, ಇದನ್ನು ಸಹ ಅಳವಡಿಸಿಕೊಂಡು ಸಮರ್ಥವಾಗಿ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಮೂಲಕ ಸಂಸ್ಥೆ ಅತುನ್ಯತೆ ಸಾಧನೆ ಮಾಡಿದೆ. ದೂರದೃಷ್ಟಿಯ ಮನೂ ಭಾವನೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಪ್ರೊ. ಎಸ್‌.ಬಿ. ಅಂಗಡಿ  ಅವರು ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿದ ಸಂಸ್ಥೆಯ ಅಮೃತ ಮಹೋತ್ಸವ ಸಮಾರಂಭವು ಇಂದು ದಿ. 11ರಂದು ರವಿವಾರ ಮಧ್ಯಾಹ್ನ 3ಗೆ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ನಾಡಿನ ಮತ್ತು ದೇಶದ ಗಣ್ಯ ಸಾಧಕರಾದ ಬೆಳಗಾವಿ ವಾಣಿಜ್ಯ  ವಿಭಾಗದ ಎಡಿಪಿಐ ಎನ್‌. ಆರ್‌.ಹುಬ್ಬಳ್ಳಿ ಅವರು ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ಆಸ್ಸಾಂನ ತ್ರೀದಪ ಬೋರ್ ಪುಕನ್, ಕೇರಳ ಶರತ್ ಚಂದ್ರನ್,  ಮಾನಸಿಕ ತಜ್ಞ ಲಂಡನ್ನಿನ ಡಾ: ಮಂಗಳಾ ಮುಂಡಾಸದ, ಬೆಂಗಳೂರು ನಿವೃತ್ತ ರೇಷ್ಮೆ ಕೃಷಿ ನಿರ್ದೇಶಕಿ ಗೀತಾ ಗದಗಿಮಠ, ಸೇರಿದಂತೆ ನಾಡಿನ ವಿವಿಧ ಗಣ್ಯರು ಪಾಲ್ಗೊಳ್ಳುವರು. 


ಸುದ್ದಿ ಓದಿ