ಎಲಬುರ್ಗ

ಪ್ರಮುಖ ರಸ್ತೆ ಮೇಲೆ ಅನಧಿಕೃತ ಡಬ್ಬಾ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ : ನಾಗೇಶ್

ಪ್ರಮುಖ ರಸ್ತೆ ಮೇಲೆ ಅನಧಿಕೃತ ಡಬ್ಬಾ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ : ನಾಗೇಶ್

ಲೋಕದರ್ಶನ ವರದಿ

ಯಲಬುರ್ಗಾ   30: ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಪಾದಚಾರಿ ಸ್ಥಳಗಳ ಮೇಲೆ ಅನಧಿಕೃತವಾಗಿ ಇಟ್ಟುಕೊಂಡಿರುವ ಡಬ್ಬಾ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿ ಎಂದು ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು. ಯಲಬುರ್ಗಾ ಪಟ್ಟಣ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಪಾದಚಾರಿ ಸ್ಥಳಗಳ ಮೇಲೆ ಅನಧಿಕೃತವಾಗಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಂದ ಸಾರ್ವಜನಿಕವಾಗಿ, ವಾಹನ ಸಂಚಾರಕ್ಕೆ ತೊಂದರೆ, ಉಂಟಾಗಿದ್ದು, ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ತಹಶೀಲ್ದಾರರು ಹಾಗೂ ಆಡಳಿತಾಧಿಕಾರಿಗಳ ಮೌಖಿಕ ಅದೇಶದಂತೆ ಎಲ್ಲಾ ಅನಧಿಕೃತ ಡಬ್ಬಾ ಅಂಗಡಿಗಳನ್ನು (7) ದಿನಗಳೊಳಗಾಗಿ ತಮ್ಮ ಅಂಗಡಿಗಳನ್ನು ತಾವೇ ಖುದ್ದಾಗಿ ತೆರವುಗೊಳಿಸಲು ತಿಳಿಸಲಾಗಿದೆ. ತಪ್ಪಿದಲ್ಲಿ ಅವಧಿ ಮುಗಿದ ನಂತರ ಕಾರ್ಯಾಲಯದ ವತಿಯಿಂದ ತೆರೆವು ಕಾರ್ಯವನ್ನು ನಿರ್ವಹಲಾಗುತ್ತದೆ. ಕಾರ್ಯಾಲಯದ ವತಿಯಿಂದ ತೆರವು ಕಾರ್ಯಾಚರಣೆ ಸಮಯದಲ್ಲಿ ಹಾನಿ ಉಂಟಾದಲ್ಲಿ ಅದಕ್ಕೆ ಕಾರ್ಯಾಲಯವು ಹೊಣೆ ಇರುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಯಪಡಿಸಿದರು 

ಸುದ್ದಿ ಓದಿ