ಕುಕನೂರ್

ಅಕ್ರಮ ಮರಳುಗಾರಿಕೆಗಿಲ್ಲ ಕಡಿವಾಣ

ಅಕ್ರಮ ಮರಳುಗಾರಿಕೆಗಿಲ್ಲ ಕಡಿವಾಣ

ಕುಕನೂರ 15: ತಾಲೂಕಿನ, ಬಳಗೇರಿ, ಶಿರೂರು, ಮುತ್ತಾಳ, ಮಂಗಳೂರು, ಕವಳಕೇರಿ, ಯಡಿಯಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ತಾಲೂಕಿನ ತುಂಬಾ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ, ಬಳಗೇರಿ ಗ್ರಾಮದ ಮರಳು ಪಾಯಿಂಟ್ ಬಳಿ ಮರುಳು  ಪಾಯಿಂಟ್‌ನ  ಹದ್ದು ಬಸ್ತುನ್ನು ಮೀರಿ ಸರ್ಕಾರಿ ಜಾಗೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯಿತ್ತಿದ್ದರೂ ಸಂಬಧಿಸಿದ ಯಾವಬ್ಬ ಅಧಿಕಾರಿಯಿಂದಾಗಲಿ ಇಲಾಖೆಯಿಂದಾಗಲಿ ಕ್ರಮ ಆಗುತ್ತಿಲ್ಲ, ನಿಯಮ ಮೀರಿ ಸರ್ಕಾರಿ ಜಾಗೆಯಲ್ಲಿ ಮರಳುಗಾರಿಕೆ ನಡೆಯಿತ್ತಿರುವುದು ತಹಸಿಲ್ದಾರರ ಗಮನಕ್ಕಿದ್ದರೂ ಯಾವುದೇ ಕ್ರಮ ಆಗಿಲ್ಲ, ಇದನ್ನು ನೋಡಿದರೇ ತಾಲೂಕಿನ ತುಂಬಾ ಅಕ್ರಮ ಮರಳುಗಾರಿಕೆ ನಡೆಯಿತ್ತಿರುವುದಕ್ಕೆ ಅಧಿಕಾರಿಗಳ ಕುಮ್ಮಕ್ಕೆ ಕಾರಣವೆಂಬುದು ಸ್ಪಷ್ಟವಾಗುತ್ತಿದೆ.  


ಮರಳು ಪಾಯಿಂಟಿನ ನಿಯಮ ಉಲಂಘಿಸಿ ಪಾಯಿಂಟಿನವರು ನಾಮ ಫಲಕಗಳನ್ನು ಹಾಕದೇ ಹೆಚ್ಚಿಗೆ ಮರಳುನ್ನು ಮಾರಾಟ ಮಾಡುತ್ತಿದ್ದಾರೆ, ಬಳಗೇರಿಯ ಮರಳು ಪಾಯಿಂಟಿನವರೇ ಸರ್ಕಾರಿ ಜಾಗೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ, ಹಗಲು ವೇಳೆಯಲ್ಲೆ ರಾಜಾ ರೋಷಾವಾಗಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ, ಇದನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರ ಕ್ಷೇತ್ರದಲ್ಲೆ ಈ ರೀತಿಯಾದ ಅಕ್ರಮ ಮರಳುಗಾರಿಕೆ ನಡೆಯಿತ್ತಿರುವುದು ಸಚಿವರ ಗಮನಕ್ಕಿಲ್ಲವೇ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೇ?  

ಸರ್ಕಾರಿ ಜಾಗೆಯಲ್ಲಿ ಅತಿಕ್ರಮ ಮಾಡಿ ಅಕ್ರಮ ಮರಳುಗಾರಿಕೆ ನಡೆಸಿದ್ದರಿಂದ ಸುಮಾರು ಎಕರೆ ಸಮತ್ತಾಟ್ಟಾದ  ಜಮೀನ ತೆಗ್ಗು ತಿನ್ನಿಯಿಂದ ಹಾಳಾಗಿ ಹೋಗಿದೆ,  

ಈಗಾಲದರೂ ಸಂಬಂಧಿಸಿದ ಅಧಿಕಾರಿಗಳು, ಇಲಾಖೆಯವರು ಇತ್ತ ಕಡೇ ಗಮನ ಹರಸಿ ಸರ್ಕಾರಿ ಜಾಗೆಯಲ್ಲಿ ನಡೆಸುತ್ತಿರುವ ಅಕ್ರಮ ದಂಧೆಕೋರರಿಗೆ ಕಡಿವಾಣ ಹಾಕಿ ಸೂಕ್ತ ಕ್ರಮ ತೆಗೆದುಕೊಳ್ಳತ್ತಾರೋ  ಕಾದು ನೋಡೋಣ.?  



ಕೋಟ್ 01: ಬಳಗೇರಿ ಮರಳು ಪಾಯಿಂಟಿನ ಹದ್ದುಬಸ್ತುಗೆ ಸರ್ವೆಯವರಿಗೆ ಪತ್ರ ಬರೆದಿದ್ದನೆ  ಅಲ್ಲಿ ಅಕ್ರಮ ಮರಳುಗಾರಿಕೆ ನಡೆದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಗಮನಕ್ಕೆ ತಂದು ಕ್ರಮ ವಹಿಸುತ್ತೆವೆ.   

  ಕಿರಣಕುಮಾರ ಕುಲಕರ್ಣಿ ತಹಸಿಲ್ದಾರ ಕುಕನೂರ. 


ಕೋಟ್ 02:  ಮರಳು ಪಾಯಿಂಟ್ ನಿಯಮ ಮೀರಿದವರಿಗೆ ಈಗಾಗಲೇ  ದಂಢ ವಿಧಿಸಲಾಗಿದೆ, ಲೀಸ್ ಮೀರಿ ಸರ್ಕಾರಿ ಜಮೀನಿನಲ್ಲಿ  ಅಕ್ರಮ ಮರಳುಗಾರಿಕೆ ನಡೆದ ಬಗ್ಗೆ ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೆನೆ.  

 ಸೈಯದ್ ಫಯಾಜ್  ಭೂ ವಿಜ್ಞಾನಿ ಕೊಪ್ಪಳ 


ಸುದ್ದಿ ಓದಿ