ಮಹಲಿಂಗಪುರ

ಅನ್ನಭಾಗ್ಯ ಯೋಜನೆಯ ಅಕ್ರಮ ಅಕ್ಕಿ ವಶ : ಅರೋಪಿಗಳು ಪೊಲೀಸರ ವಶಕ್ಕೆ

ಅನ್ನಭಾಗ್ಯ ಯೋಜನೆಯ ಅಕ್ರಮ ಅಕ್ಕಿ ವಶ : ಅರೋಪಿಗಳು ಪೊಲೀಸರ ವಶಕ್ಕೆ

ಮಹಾಲಿಂಗಪುರ 02: ವಿವಿಧ ಯೋಜನೆಗಳ ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ಸಾಗಿಸುತ್ತಿರುವಾಗ ಮಾಲ ಸಮೇತ ಪೊಲೀಸರಿಗೆ ಮೂವರು ಸಿಕ್ಕಿ ಬಿದ್ದ ಪ್ರಕರಣ ಸ್ಥಳೀಯ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ. ಗುರುವಾರ ಮುಂಜಾನೆ ಸ್ಥಳೀಯ ಬಸವನಗರದ ನಿವಾಸಿ ಮುತ್ತಪ್ಪ ಮಹಾಲಿಂಗಪ್ಪ ಒಂಟಗೋಡಿ ( 43), ಸಾ. ರಬಕವಿಯ ಸಂಗಪ್ಪ ಶಿವಲಿಂಗಪ್ಪ ಕವಾಸಿ (23), ಸುಲೇಮಾನ ಮುಲ್ಲಾ ಇವರು ಮಹಾಲಿಂಗಪುರದ ರಾಣಿ ಚನ್ನಮ್ಮ ವೃತ್ತದ ಕಡೆಯಿಂದ ಲೋಡ ಮಾಡಿಕೊಂಡು ರಬಕವಿ ಕಡೆಗೆ ಹೋಗುತ್ತಿರುವ ಸಂದರ್ಭದಲ್ಲಿ ಜಿ.ಎಲ್‌.ಬಿ.ಸಿ ಅತಿಥಿ ಗೃಹದ ಹತ್ತಿರ ಪೊಲೀಸರ ಚಾಣಾಕ್ಷ ನಡೆಯಿಂದ 19,875 ರೂ ಮೊತ್ತದ 1,325 ಕೆ.ಜಿ ಅಕ್ಕಿ ತುಂಬಿದ ವಾಹನ ಸಮೇತ ಸಿಕ್ಕಿಬಿದ್ದಿರುವ ವಿಷಯವನ್ನು ಸ್ಥಳೀಯ ಅಪರಾಧ ವಿಭಾಗದ ಪಿ.ಎಸ್ ಐ ಎಸ್‌.ಎಸ್ ಘಾಟಗೆ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಹಾರ ನೀರೀಕ್ಷಕರಾದ ಶಶಿಧರ ಕುಮಚಗಿ, ಎ.ಎಸ್‌. ಐ ಎಲ್‌.ಕೆ ಅಗಸರ, ಸಿ.ಎಚ್‌.ಸಿಗಳಾದ ಜೆ.ಜಿ ಪಾಟೀಲ, ಎಂ.ಎಸ್ ಸಣ್ಣಕ್ಕಿ, ಸಿ.ಪಿ.ಸಿಗಳಾದ ಎಂ.ಎಸ್ ಲಮಾಣಿ, ಆರ್‌.ಆರ್ ಕಾಂಬಳೆ ಮತ್ತು ಪರಸು ಲಾತೂರ, ಲಾಲಸಾಬ ಸನದಿ ಉಪಸ್ಥಿತರಿದ್ದರು.ಮಹಾಲಿಂಗಪುರ : ಸ್ಥಳೀಯ ಜಿ.ಎಲ್‌.ಬಿ.ಸಿ ಅತಿಥಿ ಗೃಹದ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ಮತ್ತು ವಾಹನ ಸಮೇತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರದಿ ಪರಶುರಾಮ್ ಎಚ್ ಲಮಾಣಿ 


ಸುದ್ದಿ ಓದಿ