ಅಕ್ರಮ ಮದ್ಯ ಸಾಗಾಟ : ಹುಕ್ಕೇರಿ ತಾಲೂಕಿನ ಬುಗಟೆ ಆಲೂರು ಚೆಕ್ ಪೋಸ್ಟ್ ನಲ್ಲಿ 40 ಲಕ್ಷ ಮೌಲ್ಯದ ಮದ್ಯ ವಶಕ್ಕೆ : ಓರ್ವನ ಬಂಧನ

ಅಕ್ರಮ ಮದ್ಯ ಸಾಗಾಟ : ಹುಕ್ಕೇರಿ ತಾಲೂಕಿನ ಬುಗಟೆ ಆಲೂರು ಚೆಕ್ ಪೋಸ್ಟ್ ನಲ್ಲಿ 40 ಲಕ್ಷ ಮೌಲ್ಯದ ಮದ್ಯ ವಶಕ್ಕೆ : ಓರ್ವನ ಬಂಧನ

ಬೆಳಗಾವಿ : ಅಕ್ರಮವಾಗಿ ಮದ್ಯ ತುಂಬಿಕೊಂಡು ರಾಜ್ಯದ ಗಡಿ ಪ್ರವೇಶ ಮಾಡಿದ ಬೋಲೇರೊ ವಾಹನ ಒಂದನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ವಾಹನ ಸೇರಿ ಒಟ್ಟು 40 ಲಕ್ಚ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬುಗಟೆಆಲೂರ ಗ್ರಾಮದ ಬಳಿ ಇಂದು ನಡೆದಿದೆ.

   ರಾಜ್ಯದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಹಿನ್ನಲೆಯಲ್ಲಿ ರಾಜ್ಯದ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಅದರಂತೆ ದಿ. 26 ರಂದು ಸಂಜೆ 4.30 ಗಂಟೆಗೆ ಹುಕ್ಕೇರಿ ತಾಲೂಕಿನ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿರುವ ಬುಗುಟೆ ಆಲೂರ ತನಿಖಾ ಠಾಣೆಯಲ್ಲಿ ಕರ್ನಾಟಕ ರಾಜ್ಯದ Transit  ಪರ್ಮಿಟ್ ಗಳನ್ನು ಪಡೆಯದೆ ಕೇವಲ ರಾಜಸ್ತಾನ ಹಾಗೂ ಗೋವಾ ರಾಜ್ಯದ ದಾಖಲಾತಿಗಳನ್ನು ಹೊಂದಿ ಅಕ್ರಮವಾಗಿ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿದ ಮೇರೆಗೆ ಮಹಿಂದ್ರಾ ಪಿಕಪ್ ವಾಹನ ನೋಂದಣಿ ಸಂಖ್ಯೆ ಕೆಎ 01ಎಎಂ  8938 ಇದರಲ್ಲಿ ಸಾಗಾಣಿಕೆ ಮಾಡಲಾಗುತ್ತಿದ್ದ 50 ಬಾಕ್ಸ್ (450ಲೀಟರ್) Paul gohn brilliance single malt ವಿಸ್ಕಿಯ ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

   ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರಸ್ಥಾನ ಬೆಳಗಾವಿ ಹಾಗೂ ಜಂಟಿ ಆಯುಕ್ತರು ಬೆಳಗಾವಿ ವಿಭಾಗ, ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ ಮತ್ತು ಅಬಕಾರಿ ಉಪ ಅಧೀಕ್ಷಕರು, ಚಿಕ್ಕೋಡಿ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ  ಈ ದಾಳಿ ನಡೆದಿದೆ. 

   ಈ ಪಿಕಪ್ ಚಾಲಕ ಧರ್ಮೇಂದ್ರ ಜಹಾಂಗೀರ ಹಾಗೂ ವಾಹನದ ಮಾಲೀಕನ ವಿರುದ್ಧ ಅಬಕಾರಿ ನಿರೀಕ್ಷಕರು ಹುಕ್ಕೇರಿ ಇವರು ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ. ವಾಹನದ ಮೌಲ್ಯ 7 ಲಕ್ಷ ಹಾಗೂ ಮದ್ಯದ ಮೌಲ್ಯ ರೂ.33 ಲಕ್ಷ ರೂಪಾಯಿ  ಹೀಗೆ ಒಟ್ಟು ಮೌಲ್ಯ 40 ಲಕ್ಷ ಆಗಿರುತ್ತದೆ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಸುದ್ದಿ ಓದಿ