ಸಂಘ ಕಟ್ಟಬೇಕಾದರೆ ಮೊದಲು ಮನಸ್ಸು ಕಟ್ಟಬೇಕು : ಮಾಧುಲಿಂಗ ಸ್ವಾಮೀಜಿ
ಮಹಾಲಿಂಗಪುರ,26 : ಯಾವುದೇ ಸಂಘ ಅಥವಾ ಸಂಸ್ಥೆ ಯಶಸ್ಸು ಗಳಿಸಬೇಕಾದರೆ ಆಡಳಿತ ಮಂಡಳಿ ಸಿಬ್ಬಂದಿ ಸಹಕಾರ ಮತ್ತು ಪಾರದರ್ಶಕ ಆಡಳಿತದಿಂದ ಯಶಸ್ಸು ಗಳಿಸಲು ಸಾಧ್ಯ ಯಾವುದೇ ಸಂಘವನ್ನು ಸದೃಢವಾಗಿ ಕಟ್ಟಬೇಕಾದರೆ ಮೊದಲು ನಮ್ಮ ನಮ್ಮ ಮನಸ್ಸುಗಳನ್ನು ಆಚೆ ಈಚೆ ಹೊಯದಾಡದಂತೆ ಗಟ್ಟಿಗೊಳಿಸಬೇಕು ಆಗಲೇ ಸುಸಜ್ಜಿತ ಸಂಸ್ಥೆ ಕಟ್ಟಲು ಸಾಧ್ಯ ಎಂದು ಜಕನೂರಿನ ಮಾಧವಗೊಂಡ ಸಿದ್ದಾಶ್ರಮದ ಮಾಧುಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಸ್ಥಳೀಯ ಸಂಗೋಳ್ಳಿ ರಾಯಣ್ಣ ಉದ್ಯಾನವನದ ಹತ್ತಿರ ಜರುಗಿದ ಕನಕದಾಸ ಪತ್ತಿನ ಸಹಕಾರಿ ಸಂಘದ 22 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಯಾವುದೇ ಒಂದು ಸಂಘ ಅಥವಾ ಸಂಸ್ಥೆ ಯಶಸ್ಸು ಆಗಬೇಕಾದರೆ ತಾಯಿ ತನ್ನ ಮಗುವನ್ನು ಹೇಗೆ ಆರೈಕೆ ಮಾಡುತ್ತಾಳೋ ಹಾಗೆ ಅದನ್ನು ಪೊಸಿಸಿ ಬೆಳೆದಿದರೆ ಮಾತ್ರ ಅದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಾವು ಮೊದಲು ಸದ್ಗುಣ ಸಧರ್ಮ ಬೆಳೆಸಿಕೊಳ್ಳಬೇಕು, ಅದು ಯಶಸ್ಸಿಗೆ ಸಹಕಾರಿಯಾಗುತ್ತದೆ.ಕೆಲವೇ ವರ್ಷಗಳಲ್ಲಿ ಸಂಸ್ಥೆ ಸ್ವಂತ ಕಟ್ಟಡ ಹೊಂದಿ ಸದೃಡವಾಗಿದೆ. ಇದಕ್ಕೆಲ್ಲ ಶುದ್ಧ ಆಡಳಿತ ಮತ್ತು ಪರಿಶುದ್ಧವಾದ ಸಿಬ್ಬಂದಿ ಕೂಡಾ ಕಾರಣ. ಇದು ಇನ್ನು ಉತ್ತಮವಾಗಿ ಬೆಳೆದು ಹೆಮ್ಮರವಾಗಲಿ ನಾಡಿನಾದ್ಯಾಂತ ಹೆಸರು ಮಾಡಲಿ ಎಂದು ಆಶೀರ್ವದಿಸಿದರು.
ಅಧ್ಯಕ್ಷರು ಪರವಾಗಿ ಸಂಘದ ನಿರ್ದೇಶಕ ಮಹಾಲಿಂಗಪ್ಪ ಸನದಿ ಮಾತನಾಡಿ ಸಂಘವು ಒಟ್ಟು 2133 ಸದಸ್ಯರನ್ನು ಹೊಂದಿದೆ. ಒಟ್ಟು 128.34 ಲಕ್ಷ ರೂ ಶೇರು ಬಂಡವಾಳ ಹೊಂದಿದೆ. 1775.63 ಲಕ್ಷ ರೂ ಠೇವು ಬಂಡವಾಳ ಇರುತ್ತದೆ. ಬ್ಯಾಂಕಿನಿಂದ ಒಟ್ಟು 1688.55 ಲಕ್ಷ ರೂಪಾಯಿ ಸಾಲವನ್ನು ವಿತರಿಸಲಾಗಿದೆ. ಸಂಘದ ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಹಕರು ಹೆಚ್ಚಾಗಿ ಠೇವಣಿ ಮತ್ತು ಸಕಾಲಕ್ಕೆ ಸಾಲದ ಮರುಪಾವತಿಯ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕು. ಕಳೆದ 22 ವರ್ಷಗಳಿಂದ ಪಾರದರ್ಶಕ ಮತ್ತು ನಿಶ್ವಾರ್ಥ ಸೇವೆಯಿಂದ ಸಂಘವು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು.ಸಂಘವು 2023-24 ನೇ ಸಾಲಿನಲ್ಲಿ 37.99.461 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.
ಇಂದಿನ 22 ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸಂಘದ ಅಧ್ಯಕ್ಷರಾದ ಮಹಾಲಿಂಗಪ್ಪ ಜಕ್ಕಣ್ಣವರ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಸಿ ಮಾತನಾಡಿ ಸಂಘವು ಆರಂಭದಿಂದಲೂ ಮಹಾಲಿಂಗಪುರ ವಲಯ ಕಾರ್ಯಕ್ಷೇತ್ರ ಹೊಂದಿತ್ತು. ಪ್ರಸಕ್ತ ವರ್ಷದಿಂದ ಉಪನಿಯಮಗಳನ್ನು ತಿದ್ದುಪಡಿ ಮಾಡಿ ರಬಕವಿ ಬನಹಟ್ಟಿ, ಮುಧೋಳ್, ಜಮಖಂಡಿ ತಾಲೂಕುಗಳಿಗೆ ಕಾರ್ಯವಾಪ್ತಿಯನ್ನು ವಿಸ್ತರಣೆ ಮಾಡಲಾಗಿದೆ ಎಂದರು.
ಸಂಘದ ಆಡಳಿತ ಮಂಡಳಿ ಸದಸ್ಯ ಮಲ್ಲಪ್ಪ ಸಿಂಗಾಡಿ ಮಾತನಾಡಿ ಸಹಕಾರಿ ಸಂಘಗಳು ಅವಶ್ಯಕತೆ ಇದ್ದವರಿಗೆ ಸಾಲವನ್ನು ವಿತರಿಸುವ ಮೂಲಕ ಗ್ರಾಹಕರ ಆರ್ಥಿಕ ಅಭಿವೃದ್ದಿಗೆ ಶ್ರಮಿಸುತ್ತಿವೆ. ಗ್ರಾಹಕರ ಸಹಕಾರ, ಆಡಳಿತ ಮಂಡಳಿಯ ಪರಸ್ಪರ ಸಹಕಾರ ಮನೋಭಾವನೆ ಹಾಗೂ ಸಿಬ್ಬಂದಿಯ ಪಾರದರ್ಶಕ ವ್ಯವಹಾರದಿಂದಾಗಿ ಸಂಘವು ಇಂದು 21 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಉತ್ತಮ ಸ್ಥಿತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಎರಡು ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ ಎಂದರು.
ಷೇರುದಾರರ ಪರವಾಗಿ ಗಂಗಾಧರ ಮೇಟಿ ಮಾತನಾಡಿ. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷನೀಕ ಧನಸಹಾಯ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಭರವಸೆ ವ್ಯಕ್ತಪಡಿಸಿದರು.
ಸಂಘದ ಸಿಬ್ಬಂದಿ ಚಂದ್ರು ಸಂಶಿ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಶ್ರೀಶೈಲ ಕಳ್ಯಾಗೋಳ, ಸಂಘದ ನಿರ್ದೇಶಕರಾದ ಭೀಮಪ್ಪ ಸಂಶಿ, ಭೀಮಪ್ಪ ತಿಮ್ಮಾಪೂರ, ಮಲ್ಲಪ್ಪ ಮಳಲಿ, ವಿಠ್ಠಲ ಬನಾಜ, ಗಣಪತಿ ಮಡ್ಡೆನ್ನವರ, ಮೌನೇಶ ಬಡಿಗೇರ, ರೇಣುಕಾ ಬಾ. ಹಾದಿಮನಿ, ಸುರೇಖಾ ಮ. ಲೋಕುರಿ, ಜಯಶ್ರೀ ಪ್ರ. ಸನ್ನಟ್ಟಿ, ಹಿರಿಯ ಬಸಪ್ಪ ವಗ್ಗರ, ಚಂದ್ರ್ಪ ಡೋಣಿ,ಆನಂದ ಬೆಳ್ಳಿಕಟ್ಟಿ,, ಸದಾಶಿವ ಕಂಬಳಿ, ಸಿದ್ದಪ್ಪ ಕಿಶೋರಿ, ಮಹಾಲಿಂಗಪ್ಪ ಬಾಡಗಿ, ಪರಶುರಾಮ ಕೊಣ್ಣೂರ,ಶಿವಾನಂದ ಕನ್ನಾಳ, ಜೊತೆಪ್ಪ ಕಪರಟ್ಟಿ, ಚೇತನ ಹಾದಿಮನಿ, ರಾಮಣ್ಣ ಸಂಶಿ, ಸಿಬ್ಬಂದಿಗಳಾದ ಮಹಾಲಿಂಗ ಹುಬ್ಬಳ್ಳಿ, ಶಂಕರ ಮೇಟಿ, ಪಿಗ್ಮಿ ಸಂಗ್ರಹಕಾರರಾದ ಮಲ್ಲಿಕಾರ್ಜುನ ಮೇಟಿ, ಆನಂದ ಪೂಜೇರಿ, ಶ್ರೀಶೈಲ ಅವಟಿ, ದಾನೇಶ ಹೂಗಾರ, ಮಹಾಲಿಂಗ ಮಾಳಿ, ನಿಶಾಂತ ಬಂಡಿ ಸೇರಿದಂತೆ ಶೇರುದಾರರು ಮತ್ತು ಗ್ರಾಹಕರು ಇದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕ ಪ್ರಭು ಹುಬ್ಬಳ್ಳಿ ಸ್ವಾಗತಿಸಿದರು. ಚಂದ್ರಶೇಖರ ಮೋರೆ ನಿರೂಪಿಸಿದರು.