ಕನ್ನಡಪರ ನಿರ್ಣಯ ನಿಮಗೆ ಅಸಾಧ್ಯವಾದರೆ ನಾನೇ ಮಂಡಿಸುವೆ : ಮಹಾಪೌರರಿಗೆ ಸೊಂಟಕ್ಕಿ ಪತ್ರ
ಬೆಳಗಾವಿ : "ಕರ್ನಾಟಕ ಮಹಾರಾಷ್ಟöç ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ" ಹಾಗೂ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂಬ ಗೊತ್ತುವಳಗಳನ್ನು ಸ್ವೀಕರಿಸುವ ಸಂಬAಧ ತಾವು ಆದಷ್ಟು ಬೇಗ ನಿರ್ಧಾರ ಕೈಕೊಳ್ಳಬೇಕು. ತಮಗೆ ಸಾಧ್ಯವಾಗದಿದ್ದರೆ ರಾಜ್ಯ ಸರಕಾರದ ನಾಮನಿರ್ದೇಶನ ಸದಸ್ಯನಾಗಿ ನಾನು ನಾಡು, ನುಡಿ, ಗಡಿಯ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದ ಪರವಾದ ಗೊತ್ತುವಳಿಗಳನ್ನು ಸರ್ವಸಾಧಾರಣ ಸಭೆಯಲ್ಲಿ ಮಂಡಿಸಲು ಸಿದ್ಧನಿದ್ದೇನೆಂದು ಮಹಾನಗರ ಪಾಲಿಕೆ ನಾಮನಿರ್ದಶಿತ ಸದಸ್ಯ ರಮೇಶ ಸೊಂಟಕ್ಕಿ ಪಾಲಕೆ ಮಹಾಪೌರ ಮತ್ತು ಉಪಮಹಾಪೌರರಿಗೆ ಖಡಕ್ಕಾಗಿ ಪತ್ರ ಬರೆದಿದ್ದಾರೆ.
ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲಿ ಕರ್ನಾಟಕದ ಪರವಾಗಿ ಗೊತ್ತುವಳಗಳನ್ನು ಅಂಗೀಕರಿಸುವAತೆ ಆಗ್ರಹಿಸಿ ಬೆಳಗಾವಿಯ ಹಲವಾರು ಕನ್ನಡ ಸಂಘಟನೆಗಳು ದಿ,26-03-2026ರಂದು ತಮ್ಮನ್ನು ಖುದ್ದಾಗಿ ಭೆಟ್ಟಿಯಾಗಿ ಮನವಿಯನ್ನು ಸಲ್ಲಿಸಿವೆ. 2005ರ ಅಕ್ಟೋಬರ್ 27ರಂದು ಪಾಲಿಕೆಯ ಸಭೆಯಲ್ಲಿ ಮಹಾರಾಷ್ಟöç ಪರವಾದ ಗೊತ್ತುವಳಿಗಳನ್ನು ಅಂಗೀಕರಿಸಲಾಗಿದೆ. ಈ ದಾಖಲೆಯನ್ನು ಮಹಾರಾಷ್ಟöç ಸರಕಾರ ಸುಪ್ರೀಮ್ ಕೋರ್ಟಿನ ಮುಂದಿರುವ ಗಡಿವಿವಾದ ಪ್ರಕರಣದಲ್ಲಿ ಪೂರಕ ದಾಖಲೆಯನ್ನಾಗಿ ಸಲ್ಲಿಸಿದೆ.
ಶೀಘ್ರವೇ ಕೋರ್ಟಿನ ಮುಂದೆ ಪ್ರಕರಣದ ವಿಚಾರಣಿ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಕರ್ನಾಟಕ ಪರವಾದ ಗೊತ್ತುವಳಗಳನ್ನು ಅಂಗೀಕರಿಸುವ ಮೂಲಕ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ. 26-03-2026ರಂದು ಮಹಾಪೌರರ ಕೊಠಡಿಯಲ್ಲಿ 20ಕ್ಕೂ ಅಧಿಕ ಕನ್ನಡ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸುವ ಸಂದರ್ಭದಲ್ಲಿ ನಾನು ಸಹ ಉಪಸ್ಥಿತನಿದ್ದೆ. ಎಪ್ರಿಲ್ ಮೊದಲ ವಾರ ಗೊತ್ತುವಳಗಳ ಸಂಬAಧ ಕನ್ನಡ ಮುಖಂಡರನ್ನು ಚರ್ಚೆಗೆ ಆಹ್ವಾನಿಸಲಾಗುವದೆಂದು ತಾವು ಭರವಸೆ ನೀಡಿದ್ದೀರಿ. ಆದರೆ ಈವರೆಗೆ ಯಾವುದೇ ಚರ್ಚೆಯಾಗಲಿ, ನಿರ್ಧಾರವಾಗಲಿ ಆಗಿಲ್ಲವೆಂದು ಕನ್ನಡ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಇನ್ನಷ್ಟು ಸಮಯಾವಕಾಶ ಕೋರಿದ ಮಹಾಪೌರರು
ಬೆಳಗಾವಿ : ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಗಳನ್ನು ಅಂಗೀಕರಿಸುವ ಸಂಬAಧ ತಮಗೆ ಇನ್ನಷ್ಟು ಸಮಯವಕಾಶ ಕೊಡಬೇಕೆಂದು ಮಹಾಪೌರರು ಮತ್ತು ಉಪಮಹಾಪೌರರು ಕನ್ನಡ ಸಂಘಟನೆಗಳನ್ನು ಕೋರಿದ್ದಾರೆ.
ಕಳೆದ ಮಾರ್ಚ 26ರಂದು ಬೆಳಗಾವಿಯ ಅನೇಕ ಸಮಾನ ಮನಸ್ಕ ಕನ್ನಡ ಸಂಘಟನೆಗಳು ಮನವಿ ಸಲ್ಲಿಸಿದ್ದನ್ನು ನೆನಪಿಸಿ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಅವರು ಬುಧವಾರ ಮಧ್ಯಾನ್ಹ ಮಹಾಪೌರರಾದ ಶ್ರೀಮತಿ ಪ್ರೀತಿ ಕಾಮಕರ ಮತ್ತು ಉಪಮಹಾಪೌರ ಶ್ರೀ ಹನುಮಂತ ಕೊಂಗಲಿ ಅವರಿಗೆ ಮನವಿ ಅರ್ಪಿಸಿದರು.
2005ರ ಅಕ್ಟೊಬರ್ 27ರಂದು ಪಾಲಿಕೆಯ ಸಭೆಯಲ್ಲಿ ಮಹಾರಾಷ್ಟöç ಪರವಾದ ಗೊತ್ತುವಳಿಗಳನ್ನು ಅಂಗಿಕರಿಸಲಾಗಿದ್ದು ಇವುಗಳನ್ನು ಮಹಾರಾಷ್ಟöç ಸರಕಾರ ಸುಪ್ರೀಂ ಕೋರ್ಟಿನ ಮುಂದಿರುವ ಗಡಿವಿವಾದ ಪ್ರಕರಣದಲ್ಲಿ ಪೂರಕ ದಾಖಲೆಯನ್ನಾಗಿ ಬಳಸಿರುವ ಹಿನ್ನೆಲೆಯಲ್ಲಿ ಕನ್ನಡಿಗರ ಬಹುಮತ ಹೊಂದಿರುವ ಪ್ರಸಕ್ತ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಗಳನ್ನು ಪಾಸು ಮಾಡಬೇಕೆಂದು ಕನ್ನಡ ಸಂಘಟನೆಗಳ ಆಗ್ರಹವಾಗಿದೆ.
ಇದೇ ಏಪ್ರಿಲ್ 2ರಂದು ಪಾಲಿಕೆಯಲ್ಲಿ ನಡೆದ ಕನ್ನಡ ಜಾಗ್ರತಿ ಸಮಿತಿಯ ಸಭೆಯಲ್ಲೂ ಸಹ ಕರ್ನಾಟಕ ಪರವಾದ ಗೊತ್ತುವಳಿಗಳನ್ನು ಪಾಸು ಮಾಡುವಂತೆ ಮಹಾಪೌರರನ್ನು ಕೋರುವ ನಿರ್ಣಯ ಕೈಕೊಂಡಿದ್ದನ್ನು ಇಂದು ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಇಂದು ಮನವಿ ಸಲ್ಲಿಸುವ ಸಂದರ್ಭದಲ್ಲಿ ಆನಂದ ದಿಲಾವರ, ವಿಕಾಶ ಶಿರೂರ, ವಿಶಾಲ ಸುತಾರ, ವಿಕಾಶ ಚಲವಾದಿ, ಆಯಾಜ್ ಶಹಾಪುರಿ, ಪರಶುರಾಮ್ ಅಮರಾಪುರ, ದುರ್ಗಪ್ಪ ಗುಂಜಿಕರ ಹಾಗೂ ರಾಹುಲ್ ಭೋಸಲೆ ಉಪಸ್ಥಿತರಿದ್ದರು.