ಮಹಲಿಂಗಪುರ

ಮನುಷ್ಯನ ದೇಹದಲ್ಲಿ ವಾತ, ಪಿತ್ತ, ಕಫ ಸಮ ಪ್ರಮಾಣದಲ್ಲಿದ್ದರೆ ಅಂತಹವರ ಬಳಿ ರೋಗ ಸುಳಿಯುವುದಿಲ್ಲ : ಬಸವಾನಂದ ಶ್ರೀಗಳು.

ಮನುಷ್ಯನ ದೇಹದಲ್ಲಿ ವಾತ, ಪಿತ್ತ, ಕಫ ಸಮ ಪ್ರಮಾಣದಲ್ಲಿದ್ದರೆ ಅಂತಹವರ ಬಳಿ ರೋಗ ಸುಳಿಯುವುದಿಲ್ಲ : ಬಸವಾನಂದ ಶ್ರೀಗಳು.

ಬುಧವಾರ ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಹುರಕಡ್ಲಿ ಪೌಂಡೇಶನ್ ಹಮ್ಮಿಕೊಂಡ ಅಂಗಾಂಗಗಳ ವೈಫಲ್ಯಗಳಿಗೆ ಉಚಿತ ಚಿಕಿತ್ಸಾ ಕಾರ್ಯಕ್ರಮ.  

ಮಹಾಲಿಂಗಪುರ 06: ಮನುಷ್ಯನ ದೇಹದಲ್ಲಿ ವಾತ, ಪಿತ್ತ, ಕಫ ಸಮ ಪ್ರಮಾಣದಲ್ಲಿದ್ದರೆ ಅಂತಹವರ ಬಳಿ ರೋಗ ಸುಳಿಯುವುದಿಲ್ಲವೆಂದು ಧಾರವಾಡದ ಗುರು ಬಸವ ಮಹಾಮನೆಯ ಬಸವಾನಂದ ಶ್ರೀಗಳು ಆಶೀರ್ವಚನ ನೀಡಿದರು. 

ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಹುರಕಡ್ಲಿ ಪೌಂಡೇಶನ್ ಹಮ್ಮಿಕೊಂಡ ಅಂಗಾಂಗಗಳ ವೈಫಲ್ಯಗಳಿಗೆ ಉಚಿತ ಚಿಕಿತ್ಸಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ದೇಶಿ ಓಷಧಿ, ಸಂಸ್ಕೃತಿ, ಪರಂಪರೆಯನ್ನು ಮರೆತು ಕೃತಕ ಜೀವನ ಶೈಲಿ ಅಳವಡಿಸಿಕೊಂಡು ಶರೀರಕ್ಕೆ ರೋಗ ರುಜಿನಗಳನ್ನು ಆಹ್ವಾನಿಸಿಕ್ಕೊಂಡಿದ್ದೇವೆ.ಇವು ತೊಲಗಲು ವ್ಯಾಯಾಮ, ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕ್ಕೊಳ್ಳಬೇಕು ಎಂದರು. ಈ ದುಬಾರಿ ದುನಿಯಾದಲ್ಲಿ ಮಧ್ಯಮ ವರ್ಗ, ಬಡವರು, ನಿರ್ಗತಿಕರಿಗೆ ಇಂತಹ ಉಚಿತ ಶಿಬಿರಗಳು ಸಹಕಾರಿಯಾಗಿವೆ ಆದ್ದರಿಂದ ಶಿಬಿರದ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕ್ಕೊಳ್ಳಲು ಕರೆ ನೀಡಿದರು. 

ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಮಾತನಾಡಿ, ದಾನ, ಧರ್ಮಗಳಲ್ಲಿ ಆರೋಗ್ಯ ದಾನ ಶ್ರೇಷ್ಠವಾಗಿದೆ. ಹುರಕಡ್ಲಿ ಪರಿವಾರ ಉಚಿತ ಚಿಕಿತ್ಸೆ ನೀಡಿ ನೊಂದ ಹೃದಯಗಳಿಗೆ ಸ್ಪಂದಿಸುವ ಕಾರ್ಯ ಶ್ಲಾಘನೀಯ ಎಂದರು. 

ಬಸವನ ಬಾಗೇವಾಡಿಯ ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಕಾಯಿ ಅಳಿದರೂ ಕಾರ್ಯ ಉಳಿಯಬೇಕೆನ್ನುವಂತಹ ಕೆಲಸವನ್ನು ಹುರಕಡ್ಲಿ ಪೌಂಡೇಶನ್ 15 ವರ್ಷಗಳಿಂದ ಕಣ್ಣು, ಕಿವಿ, ಕೃತಕ ಕೈ ಕಾಲು ಜೋಡಣೆ ಮತ್ತು ರಕ್ತದಾನ ಶಿಬಿರಗಳನ್ನು ಏರಿ​‍್ಡಸಿ ಸಮಾಜ ಶ್ರೇಷ್ಠ ಜನೋಪಯೋಗಿ ಕಾರ್ಯಕ್ರಮಗಳಿಂದ ಹುರಕಡ್ಲಿ ದಂಪತಿಗಳು ಸಾರ್ಥಕ ಬದುಕಿಗೆ ಸಾಕ್ಷಿಯಾಗಿದ್ದಾರೆ ಎಂದರು.  

ಸನ್ಮಾನ ಸ್ವೀಕರಿಸಿ ರಾಷ್ಟ್ರದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಮತ್ತು ಗಿಡ ಮೂಲಿಕೆ ಚಿಕಿತ್ಸಕ ವೈದ್ಯ ಪ್ರಕಾಶ ರಾಯಸ್ ಮಾತನಾಡಿದರು.ಬುಧವಾರ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ, ಕಣ್ಣು, ಕಿವಿ, 40 ಜನರಿಗೆ ಹಲ್ಲಿನ ಸೆಟ್ ವಿತರಣೆ ನಡೆಯಿತು. ಇಲ್ಲಿಯವರೆಗೆ 1ಸಾವಿರ ಜನರಿಂದ ರಕ್ತದಾನ, 2516 ಜನರಿಗೆ ಕಣ್ಣಿನ ಚಿಕಿತ್ಸೆ, 5ಸಾವಿರ ಜನರಿಗೆ ಉಚಿತ ಕಣ್ಣು ತಪಾಸಣೆ, 80 ಜನರಿಗೆ ಕೃತಕ ಕಾಲು ಜೋಡಣೆ ಅಲ್ಲದೆ 2012ರಲ್ಲಿ 25 ಜೋಡಿ ಸಾಮೂಹಿಕ ವಿವಾಹ, 500 ಮನೆಗಳಿಗೆ ಕೊರೊನಾ ಕಿಟ್ ಗಳ ವಿತರಣೆ ಮಾಡಿದ್ದಾರೆ. 

 ಈ ಸಂದರ್ಭದಲ್ಲಿ ಶಿವಾನಂದ ಬಿದರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪುರಸಭೆ ಸದಸ್ಯೆ ಸವಿತಾ ಚನಬಸು.ಹುರಕಡ್ಲಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಹುಬ್ಬಳ್ಳಿಯ ಎಂ ಎಚ್‌. ನಾಯ್ಕರ ಉಪಸ್ಥಿತರಿದ್ದು ಮಾಜಿ ಪುರಸಭಾ ಉಪಾಧ್ಯಕ್ಷ ಫೌಂಡೇಷನ್ ಅಧ್ಯಕ್ಷ ಚನಬಸು ಹುರಕಡ್ಲಿ ಸ್ವಾಗತಿಸಿ, ಪ್ರಾರ್ಥನೆ ಕಲಾವಿದ ಎಂ ಡಿ. ಆನಂದ, ಶಿವು ನೇಗಿನಾಳ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ