ವಿದ್ಯೆಯೊಂದಿಗೆ ಸಂಸ್ಕಾರವಿದ್ದರೆ ಜೀವನ ಪಾವನ : ಅಕ್ಷಯ ಗೋಖಲೆ
ಮಹಾಲಿಂಗಪುರ 06: ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿ ಜೀವನದ ಬಹು ದೊಡ್ಡ ಹಾನಿ ಅನುಭವಿಸುತ್ತಿದ್ದಾರೆ. ಇಂದಿನ ಜೀವನಕ್ಕೆ ಎಲ್ಲವೂ ಮೊಬೈಲ್ ಆಗಿದೆ.ಆದರೆ ಅದರ ಅವಶ್ಯಕತೆ ಎಷ್ಟೋ ಇದೇ ಅಷ್ಟೇ ಬಳಕೆಯಾಗದೆ. ದುರುಪಯೋಗ ಆಗುತ್ತಿರುವುದು ವಿಪರ್ಯಾಸವೆ ಸರಿ. ವಿದ್ಯಾರ್ಥಿಗಳು ಜೀವನ ಶೈಲಿ ಹಸಿವು ಮತ್ತು ಶಿಸ್ತು ಬಹಳ ಮುಖ್ಯ ಯಾರು ಈ ಮೂರು ಅಂಶಗಳನ್ನು ಅಳವಡಿಸಿಕೊಂಡಿರುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಉಡುಪಿಯ ಐ ಐ ಟಿ ಮತ್ತು ಜೆ ಇ ಇ ತರಬೇತಿದಾರ ಅಕ್ಷಯ್ ಗೋಖಲೆ ಹೇಳಿದರು.
ರನ್ನ ಬೆಳಗಲಿಯ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಓಂ ಸಾಯಿ ಶಿಕ್ಷಣ ಸಂಸ್ಥೆಯ ಢಪಾಳಾಪುರ ವಿದ್ಯಾ ವಿಹಾರ ಸಿ ಬಿ ಎಸ್ ಸಿ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಢಪಳಾಪುರ ವೈಭವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.
ಯಶಸ್ಸು ಕಾಣಲು ಕಠಿಣ ಪರಿಶ್ರಮ, ಧೈರ್ಯ ಹಾಗೂ ಶ್ರದ್ಧೆ ಬಹಳ ಮುಖ್ಯವಾಗುತ್ತದೆ. ಜೀವನ ಶೈಲಿಯಲ್ಲಿ ಕೀಳರಿಮೆ, ಬಿಟ್ಟು ಯಾರನ್ನು ಕೆಳಮಟ್ಟದಿಂದ ನೋಡದೆ ಸರಿಸಮಾನವಾಗಿ ಕಾಣುವುದನ್ನು ರೂಢಿಸಿಕೊಳ್ಳಬೇಕು. ಆಗಲೇ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಆಗಲೇ ಅಪ್ಪ ಅಮ್ಮನ ತ್ಯಾಗಕ್ಕೆ ಒಂದು ಬೆಲೆ ಬರುತ್ತದೆ. ದೇಶ ಭಕ್ತಿ ಮಕ್ಕಳಲ್ಲಿ ಬೆಳೆಸಬೇಕು ಅದಕ್ಕೆ ಈ ಶಾಲೆಯೇ ತಳಹದಿಯಾಗಲಿ. ಎ ಅಂದರೆ ಸಾಮ್ರಾಟ ಅಶೋಕ ಬಿ. ಅಂದರೆ ಭಗತ್ ಸಿಂಗ್, ಸಿ ಅಂದರೆ ಚಂದ್ರಶೇಖರ ಆಜಾದ ಹೀಗೆ ಸಿ ದಿಂದ ಝಡ ವರೆಗೆ ದೇಶಭಕ್ತರು ಸ್ವಾತಂತ್ರ ಹೋರಾಟಗಾರರು ಕಥೆಗಳನ್ನು ಹೇಳಿ ಅವರಲ್ಲಿ ಕೆಚ್ಛೆದೆ, ಶೌರ್ಯ ಮತ್ತು ಧೈರ್ಯ ತುಂಬಬೇಕು, ನಮ್ಮ ದೇಶ ರಾಮಾಯಣ ಮತ್ತು ಮಹಾಭಾರತ್ ಎರಡು ಮಹಾ ಕಾವ್ಯಗಳನ್ನು ಕಂಡ ಪುಣ್ಯ ಭೂಮಿ ನಮದು. ರಾಮ ಮತ್ತು ಕೃಷ್ಣ ಈ ದೇಶ ಆದರ್ಶ ಪುರುಷರು, ಹಾಗೆ ಜಗತ್ತಿನ ಎಲ್ಲ ದೇಶಗಳು ಇಂದು ಜೈ ಹಿಂದ್ ಘೋಷಣೆ ಕೂಗಲು ಭಯ ಪಡುತ್ತಿವೋ ಆ ಘೋಷಣೆ ಕೊಟ್ಟ ದೇಶದ ಹೆಮ್ಮೆಯ ವೀರ ಪುರುಷ ಶುಭಾಸಚಂದ್ರ ಭೋಸ್, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ, ಚಂದ್ರಶೇಖರ ಆಜಾದ, ಭಗತ್ ಸಿಂಗ್, ವೀರ ಸಾವರಕರ್ ಅಂತವರ ಕಥೆಗಳನ್ನು ಹೇಳಿ ಮಕ್ಕಳಲ್ಲಿ ದೇಶ ಭಕ್ತಿ ಮೂಡಿಸುವ ಗುರುತರ ಜವಾಬ್ದಾರಿ ಪಾಲಕರ ಮೇಲಿದೆ.ಎಂದು ಹೇಳಿದರು.
ನಂತರ ಮಾತನಾಡಿದ ಸ್ಥಳೀಯ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ನಮ್ಮಲ್ಲಿ ಯಾವಾಗಲೂ ಹೊಸದನ್ನು ಕಲಿಯುವ ಕುರಿತು ಹಸಿವಿರಬೇಕು, ಕೆಲಸ ಕಾರ್ಯ, ಸಾಧನೆಯಲ್ಲೂ ಸಹ ಹಸಿವಿರಬೇಕು,ಶಿಸ್ತು ರೂಢಿಸಿಕೊಂಡವರು ಜೀವನದಲ್ಲಿ ಏನಾದರೂ ಸಾಧಿಸಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಅಧ್ಯಯನ ಅವಶ್ಯಕತೆ ಇದೆ. ಕಾಲೇಜಿನಲ್ಲಿ ಮೌಲ್ಯಯುತ ಶಿಕ್ಷಣದ ಜೊತೆ ಭವಿಷ್ಯದಲ್ಲಿ ಬಲಿಷ್ಠ ಜೀವನ ರೂಢಿಸಿಕೊಳ್ಳುವ ವಿದ್ಯಾರ್ಥಿಗಳು ಇಚ್ಚಾಶಕ್ತಿ, ಆತ್ಮಶಕ್ತಿ, ಹಾಗೂ ಜ್ಞಾನ ಶಕ್ತಿ ವಿಚಾರ ಶಕ್ತಿಗಳನ್ನು ರೂಢಿಸಿಕೊಳ್ಳಬೇಕು.
ಜೀವನದಲ್ಲಿ ಕಲ್ಲು ಮುಳ್ಳು ಕಷ್ಟ ಸುಖ ಅನುಭವಾಗಬೇಕು. ವಿದ್ಯಾರ್ಥಿಗಳ ಮೇಲೆ ಪೋಷಕರು ನಂಬಿಕೆ ಇಟ್ಟಿರುತ್ತಾರೆ. ಮೊಬೈಲ್ ಒದಲು, ಸಂವಹನ ಮಾಡಲು ಬಳಸಿಕೊಳ್ಳಿ. ಅದನ್ನು ಬಿಟ್ಟು ಅದೇ ಜೀವನವಾಗಬಾರದು. ಪಾಲಕರು ಸಹ ಬೇರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ತುಲನೆ ಮಾಡಬಾರದು ಎಂದು ಕಿವಿ ಮಾತು ಹೇಳಿದರು.
ನಂತರ ಮಾತನಾಡಿದ ನಗರದ ಖ್ಯಾತ ವೈದ್ಯರಾದ ಅಜಿತ ಕನಕರಡ್ಡಿ ಶಾಲೆಗೆ ವಿದ್ಯಾರ್ಥಿಗಳೇ ಭೂಷಣ ವಿದ್ಯಾರ್ಥಿಗಳು ಸದಾ ತಂದೆ ತಾಯಿ, ಗುರು ಹಿರಿಯರ ಮಾತನ್ನು ಗೌರವಿಸಬೇಕು. ಈ ಜಗತ್ತಿನಲ್ಲಿ ಬೆಲೆ ಕಟಲಾಗದ ವ್ಯಕ್ತಿಗಳೆಂದರೆ ತಂದೆ ತಾಯಿಗಳು ಅವರು ನಿಮ್ಮ ಮೇಲೆ ಅಪಾರವಾದ ಭರವಸೆ ಮತ್ತು ಕನಸ್ಸನ್ನು ಕಟ್ಟಿಕೊಂಡಿರುತ್ತಾರೆ ಅದರ ಪ್ರತಿಫಲವಾಗಿ ನೀವು ಕಷ್ಟಪಟ್ಟು ಓದಿದರೆ ಭಾಷೆ ಮುಖ್ಯ ಆಗುವುದಿಲ್ಲ ಕನ್ನಡವೆ ಇರಲಿ ಇಂಗ್ಲಿಷವೆ ಇರಲಿ ಸಾಧನೆ ಸಾಧ್ಯ, ಜನರಲ್ಲಿ ತಪ್ಪು ಕಲ್ಪನೆ ಇದೇ ಆತ್ಮ ವಿಶ್ವಾಸವಿದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಕಠಿಣ ಪರಿಶ್ರಮ ಮುಖ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಗಣ್ಯ ವ್ಯಾಪಾರಸ್ಥ ಬಸವರಾಜ ಢಪಳಾಪುರ ವಹಿಸಿದ್ದರು. ಡಾ. ಮಹಾಜಾಬಿನ್ ಮಾದರ್ಕರ, ಬಸನಗೌಡ ಪಾಟೀಲ, ಡಾ ಸಾಗರ ತೆಕ್ಕೆನ್ನವರ, ಕಾಶೀನಾಥ ಕಂಕಾಳೆ, ಸಂಸ್ಥೆಯ ಕಾರ್ಯದರ್ಶಿ, ವಿವೇಕ ಢಪಳಾಪುರ, ಸಂಸ್ಥೆಯ ಪ್ರಿನ್ಸಿಪಾಲ ಲೌಯಿಸ್ ಬರ್ರೆಟ್ಟೋ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಶಸ್ತಿ ಸನ್ಮಾನ : ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗಣ್ಯ ಮಾನ್ಯರನ್ನು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿ ಎಸ್ ಗೊಂಬಿ, ಬಾಲಕೃಷ್ಣ ಮಾಳವದೆ, ಮಹಾಲಿಂಗ ಕುಳ್ಳೊಳ್ಳಿ, ಶಂಭು ಬಡಿಗೇರ, ಮಲ್ಲು ಯರಡ್ಡಿ, ಮಲ್ಲಿಕಾರ್ಜುನ್ ಸುವರ್ಣಕಿಂಡಿ, ಈರ್ಪ ವಾಲಿ, ಸಂಜೀವ್ ಸೋರಾಗಾಂವಿ, ಅಶೋಕ ಕಲ್ಯಾಣಿ, ಲಕ್ಷ್ಮಣ ಬಾಗೇವಾಡಿ, ಸಿದ್ದು ಪಾಟೀಲ, ಶಿವನಗೌಡ ಪಾಟೀಲ, ಮಾಂತೇಶ ತೀರಕನ್ನವರ ಸೇರಿ ಹಲವರು ಇದ್ದರು.