ಮಹಲಿಂಗಪುರ

ನಿರ್ಮಲ ಮನಸಿನಿಂದ ದೇವಿಯನ್ನು ಪೂಜಿಸಿದರೆ ಸಕಲ ಸೌಭಾಗ್ಯ ಕರುಣಿಸುತ್ತಾಳೆ : ಮಹಾಲಿಂಗ ಶಾಸ್ತ್ರೀ

ನಿರ್ಮಲ ಮನಸಿನಿಂದ ದೇವಿಯನ್ನು ಪೂಜಿಸಿದರೆ ಸಕಲ ಸೌಭಾಗ್ಯ ಕರುಣಿಸುತ್ತಾಳೆ : ಮಹಾಲಿಂಗ ಶಾಸ್ತ್ರೀ

ನವರಾತ್ರಿ ಮೊದಲ ದಿನ 

ಮಹಾಲಿಂಗಪುರ 16 : ದುರ್ಗಾ ಮಾತೇಯ ನವರಾತ್ರಿಯ ಉತ್ಸವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತಿದೆ, ಇಡೀ ದೇಶದಲ್ಲಿ ಹಬ್ಬದ ವಾತಾವರಣದ ಕಳೆ ಮನೆ ಮಾಡಿದೆ ದುಷ್ಟರನ್ನು ಶಿಕ್ಷಸಿ ಶಿಷ್ಟರನ್ನು ರಕ್ಷಿಸಲು ದೇವಿ ಒಂಬತ್ತು ಅವತಾರ ತಾಳಿ ತನ್ನ ಭಕ್ತರನ್ನು ರಕ್ಷಿಸುತ್ತಾಳೆ. ಯಾರು ನಿರ್ಮಲ ಮನಸಿನಿಂದ ಪೂಜಿಸಿ ಭಕ್ತಿಯಿಂದ ದೇವಿಯ ಪುರಾಣ ಕೇಳುತ್ತಾರೋ ಅವರಿಗೆ ದೇವಿ ಸಕಲ ಸೌಭಾಗ್ಯ ಕೊಟ್ಟು ಕಾಪಾಡುತ್ತಾಳೆ. ಎಂದು ಮಹಾಲಿಂಗ ಶಾಸ್ತ್ರೀಗಳು ಹೇಳಿದರು. 

ಅವರು ಮಹಾಲಿಂಗಪುರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘ ರಿ ಮಹಾಲಿಂಗಪುರ ಇವರ ಆಶ್ರಯದಲ್ಲಿ ಶ್ರೀ ದೇವಿ ಪುರಾಣ ಮತ್ತು ದಸರಾ  ಸಾಂಸ್ಕೃತಿಕ  ಶರನ್ನ ನವರಾತ್ರಿ ಉತ್ಸವದಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿದ ರನ್ನ ಬೆಳಗಲಿಯ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ಮಹಾಲಿಂಗ ಶಾಸ್ತ್ರೀಗಳು ಮೊದಲ ದಿನದ ದೇವಿ ಪುರಾಣದಲ್ಲಿ ನವದುರ್ಗಿಯ ಮೊದಲ ಅವತಾರ ಕುರಿತು ಪ್ರವಚನ ನೀಡಿದರು.ಇವರಿಗೆ ಶ್ರೀ ವಿರೇಶ್ವರ ಪುಣ್ಯಾಶ್ರಮ ಗದಗದ ಶ್ರೀ ಹಣಮಂತ ಅಂಕದ ತಬಲಾ ವಾದ್ಯ ನುಡಿಸಿದರು ಹಾಗೂ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ದೇವರಾಜ ಯರಕಿಹಾಳ ಹಾರ್ಮೋನಿಯಂ ಸಾತ ನೀಡಿದರು. 

ಈ ಸಂಧರ್ಭದಲ್ಲಿ ಸ್ಥಳೀಯ ಸಿದ್ದರೂಡ ಬ್ರಹ್ಮ ಆಶ್ರಮದ ಶ್ರೀ ಸಹಜಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ. ಮಾತನಾಡಿ ಮಹಾಲಿಂಗಪುರದ ದಸರಾ ವೈಭವ ಮೈಸೂರು ದಸರಾ ವೈಭವವನ್ನು ಇಲ್ಲೇ ನೋಡಿದ ಹಾಗೆ ಆಗುತ್ತಿದೆ ದೇವಿ ಪುರಾಣವನ್ನು ಶ್ರೀ ಮಹಾಲಿಂಗ ಶಾಸ್ತ್ರೀಗಳು ಬಹಳಷ್ಟು ಅರ್ಥಪೂರ್ಣವಾಗಿ ಮನಮುಟ್ಟುವ ಹಾಗೆ ವಿವರಿಸಿ ಹೇಳುತ್ತಿದ್ದಾರೆ. ಅದನ್ನು ಕೇಳುವುದೇ ನಮ್ಮ ಪುಣ್ಯ ಎಂದು ಹೇಳಿದರು. 

ಶೈಲಪುತ್ರಿ : ಹಿಮವಂತನ ಪುತ್ರಿಯಾಗಿದ್ದು, ಒಂಬತ್ತು ದುರ್ಗೆಯರ ಪೈಕಿ ಮೊದಲನೆಯವಳು ಹಿಂದಿನ ಜನ್ಮದಲ್ಲಿ ಅವಳು ದಕ್ಷನ ಪುತ್ರಿಯಾಗಿದ್ದಳು.ಜಗತ್ತಿನ ಎಲ್ಲ ದೇವಾನುದೇವತೆಗಳ ಅಹಂ ಹಾಗೂ ಪ್ರತಿಷ್ಠೆಯನ್ನು ಶೈಲಪುತ್ರಿ ದೇವಿಯು ಯಾವ ರೀತಿ ದ್ವಂಸ ಮಾಡಿದಳು ಎನ್ನುವ ಬಗ್ಗೆ ಉಪನಿಷತ್ ನಲ್ಲಿ ಉಲ್ಲೇಖವಿದೆ. ಎಲ್ಲಾ ದೇವಾನುದೇವತೆಗಳು ವಿನಮ್ರ ಹೃದಯದಿಂದ ಆಕೆಯನ್ನು ನಮಿಸಿದರು ಎಂದು ಉಲ್ಲೇಖವಿದೆ. ಜಗತ್ತಿನ ಎಲ್ಲ ಶಕ್ತಿಗಳ ಅಂತಿಮ ಮಹಾಶಕ್ತಿ ಪ್ರತಿಯೊಂದರ ಹಿಂದೆಯೂ ಆಕೆ ಇದ್ದಾಳೆ, ಎಂದು ದೇವಾನುದೇವತೆಗಳು ಹೇಳಿದರು. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮತ್ತು ಶಿವ ಕೂಡಾ ತಮ್ಮ ಶಕ್ತಿಗಾಗಿ ಶೈಲಪುತ್ರಿಯನ್ನು ಅವಲಂಬಿಸಿದ್ದಾರೆ. ನಿಮ್ಮ ಅದೃಷ್ಟವು ಬದಲಾಗಬೇಕೆಂದಿದ್ದರೆ ದೇವಿ ಶೈಲಪುತ್ರಿಯನ್ನು ನಿತ್ಯವು ಪೂಜಿಸಿ ಫಲ ಪಡೆದುಕೊಳ್ಳಬೇಕು. 

ಮೂರ್ತಿ ಪ್ರತಿಷ್ಠಾಪನೆ : ಮೊದಲ ದಿನ ದೇವಿಯ ಮೂರ್ತಿಯನ್ನು ತಂದು ಮುಖ್ಯ ಮಂಟಪದಲ್ಲಿ  ಪ್ರತಿಷ್ಠಾಪನೆ ಮಾಡಲಾಯಿತು, ಸಂಜೆಯ ಕಾರ್ಯಕ್ರಮವನ್ನು ಹಾಲಮತ ಸಮುದಾಯದವರು, ಜಂಗಮ ಸಮುದಾಯದವರು, ಬ್ರಾಹ್ಮಣ ಸಮುದಾಯದವರು, ಮತ್ತು ರೆಡ್ಡಿ ಸಮುದಾಯದವರು ದೇವಿಗೆ ಪೂಜೆ ಸಲ್ಲಿಸಿ,ಮಾಲಾರೆ​‍್ಣ ಮಾಡಿ ದೀಪ ಹಚ್ಚುವುದರ ಮೂಲಕ ಚಾಲನೆ ಕೊಟ್ಟರು, ಈ ಸಂಧರ್ಭದಲ್ಲಿ ವಿವಿಧ ಸಮಾಜದ ಮುಖಂಡರಾದ ಮಹಾಂತೇಶ ಹಿಟ್ಟಿನಮಠ,ಮಲ್ಲಪ್ಪ ಭಾವಿಕಟ್ಟಿ,ಮಹಾಲಿಂಗಪ್ಪ ಜಕ್ಕಣ್ಣವರ,ಮಹಾಲಿಂಗಪ್ಪ ಕೋಳಿಗುಡ್ಡ ಚನ್ನಪ್ಪ ಪಟ್ಟಣಶೆಟ್ಟಿ,ಲಕ್ಕಪ್ಪ ಚೆಮಕೇರಿ, ಸಿದ್ದಗಿರೆಪ್ಪ ಕಾಗಿ,ಆಗ್ರಾಣ್ಣೆಪ್ಪ ಭಾವಿಕಟ್ಟಿ, ಪ್ರಭು ಬೆಳಗಲಿ, ಮಲ್ಲನಗೌಡ ಪಾಟೀಲ,ಜಿ ಎಸ್ ಗೊಂಬಿ, ಗಂಗಾಧರ ಮೇಟಿ, ಲಕ್ಷ್ಮಣ ಕಿಶೋರ,ಸತ್ಯಪ್ಪ ಹುದ್ದಾರ, ಶಂಕರೆಪ್ಪ ಹಣಗಂಡಿ, ಅಶೋಕ ಬಣಕಾರ,ಡಾ ಬಿ ಡಿ ಸೊರಗಾಂವಿ, ಮಹೇಶ ಇಟಕ್ಕನವರ,ಮುತ್ತಪ್ಪ ಲಾತುರ,ಶ್ರೀಶೈಲ ಬಾಡನವರ, ಈರ​‍್ಪ ಜಕ್ಕಣ್ಣವರ, ಗುರುಲಿಂಗಯ್ಯ ಮಠಪತಿ, ಚನ್ನಯ್ಯ ಚಟ್ಟಿಮಠ,ಶ್ರೀಶೈಲಪ್ಪಾ ಉಳ್ಳೆಗಡ್ಡಿ,ಶಂಕರ ಅಂಬಿ,ರವಿ ಜವಳಗಿ, ರಾಜು ಚೆಮಕೇರಿ, ಈಶ್ವರಿ ವಂದಾಲ,ಈಶ್ವರ ಚಮಕೇರಿ, ಶಿವಾನಂದ ಕಿತ್ತೂರ, ಗೌಡಪ್ಪಗೌಡ ಪಾಟೀಲ, ಮಹಾಲಿಂಗಪ್ಪ ನುಚ್ಚಿ, ಸಿದ್ದಪ್ಪ ನಿಂಬರಗಿ,ಮಹಾಲಿಂಗಪ್ಪ ಬಂಡಿ, ಮಹಾಲಿಂಗಪ್ಪ ಲಾತುರ, ಚಂದ್ರ​‍್ಪ ದೋಣಿ,ಸುನಿಲ ಜಮಖಂಡಿ,ಸತೀಶ ಸೋರಗಾಂವಿ, ಸಂಜಯ ಜಮಖಂಡಿ,ಜಿ ಎಸ್ ಗೊಂಬಿ,ಬಸವರಾಜ ಹುಲ್ಯಾಳ, ಶ್ರೀಶೈಲ ಕಿರಗಟಗಿ ಶ್ರೀಶೈಲ ನುಚ್ಚಿ, ಮಹಾಲಿಂಗಪ್ಪ ದಡುತಿ, ಗೊಲೇಶ ಅಮ್ಮನಗಿ,ಕುಮಾರ ಮನ್ನಯ್ಯನವರಮಠ, ರವಿ ಕೌಜಲಗಿ, ಮನು ಕರಡಿ, ಮಲ್ಲಪ್ಪಾ ನಿಂಬರಗಿ,ಮಹಾಲಿಂಗಪ್ಪ ತಟ್ಟಿಮನಿ,ಕರೆಪ್ಪ ಪೂಜೇರಿ, ಬಸವರಾಜ ಚಮಕೇರಿ, ಮಠದ ಬಾಬುರಾವ ಅಂಬಲಘೆರಿ, ಲಕ್ಷ್ಮನಗೌಡ ಪಾಟೀಲ,ನಾನಾ ಜೋಶಿ,ಎಸ್ ಕೆ ಗಿಂಡೆ, ಶಂಭು ಬಡಿಗೇರ,ಮಹಾಲಿಂಗ ಜಿಟ್ಟಿ, ಚಂದ್ರು ಕಾಗಿ, ಮಲ್ಲಿಕಾರ್ಜುನ ಅಂಬಿ,ಅರವಿಂದ ಮಾಲಬಸುರಿ,ಡಾ ಮಹಾದೇವ ಕದ್ದಿಮನಿ, ಮಲ್ಲು ಸಂಗಣ್ಣವರ ಈರ​‍್ಪ ಪಕೀರಪುರ ,ಸೇರಿ ಹಲವರು ಇದ್ದರು, ಕಾರ್ಯಕ್ರಮವನ್ನು ಗುರುಪಾದ ಅಂಬಿ ನಿರೂಪಿಸಿದರು,ಬಿ ಸಿ ಪೂಜಾರಿ ವಂದಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮ :  ಮೊದಲ ದಿನ ಸ್ಥಳಿಯ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ ಜರುಗಿದವು ಸ್ಥಳೀಯ ಬಸವಾನಂದ ಶಾಲೆ, ಢಪಾಳಾಪುರ ವಿದ್ಯಾ ವಿಹಾರ ಶಾಲೆ ಹಾಗೂ ಜೆ ಸಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನ ಸುರೇಗೊಂಡಿತು. ಇಂದಿನ ಮಹಾಪ್ರಸಾದವನ್ನು ಮಹಾಲಿಂಗಪ್ಪ ಬೀಳಗಿ ಮತ್ತು ಸಂಜು ಶಿರೋಳ ಬಂಧುಗಳು ಮಾಡಿಸಿದ್ದರು. 


ಸುದ್ದಿ ಓದಿ