ಮನುಷ್ಯನಲ್ಲಿ ವಾತ, ಪಿತ್ತ, ಕಫ ಸಮ ಪ್ರಮಾಣದಲ್ಲಿದ್ದರೆ ರೋಗ ದೂರ
ಸಿದ್ದಾರೂಢ ಮಠದಲ್ಲಿ ಹುರಕಡ್ಲಿ ಪೌಂಡೇಶನಿಂದ ನಿಸರ್ಗ ಚಿಕಿತ್ಸಾ ಶಿಬಿರದಲ್ಲಿ ಬಸವಾನಂದ ಶ್ರೀಗಳು
ಮಹಾಲಿಂಗಪುರ 01: ಮನುಷ್ಯನ ದೇಹದಲ್ಲಿ ವಾತ, ಪಿತ್ತ, ಕಫ ಸಮ ಪ್ರಮಾಣದಲ್ಲಿದ್ದರೆ ಅಂತಹವರ ಬಳಿ ಯಾವ ರೋಗ ಸುಳಿಯುವುದಿಲ್ಲ ಇದಕ್ಕಾಗಿ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯ ಸರಿಯಾದ ಸಮತೋಲನ ಆಹಾರ ಮತ್ತು ನಿತ್ಯ ಯೋಗ ಮನುಷ್ಯನನ್ನು ರೋಗ ಮುಕ್ತ ಮಾಡುತ್ತದೆ ಎಂದು ಧಾರವಾಡದ ಗುರು ಬಸವ ಮಹಾಮನೆಯ ಬಸವಾನಂದ ಶ್ರೀಗಳು ಆಶೀರ್ವಚನ ನೀಡಿದರು.
ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಹುರಕಡ್ಲಿ ಪೌಂಡೇಶನ್ ಹಮ್ಮಿಕೊಂಡ ಹತ್ತು ದಿನಗಳ ನಿಸರ್ಗ ಚಿಕಿತ್ಸಾ ಶಿಬಿರ ಕಾರ್ಯಕ್ರಮದ ಮೂರನೇ ದಿನದ ಸಾಯಂಕಾಲ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ದೇಶಿ ಓಷಧಿ, ಸಂಸ್ಕೃತಿ, ಪರಂಪರೆಯನ್ನು ಮರೆತು ಕೃತಕ ಜೀವನ ಶೈಲಿ ಅಳವಡಿಸಿಕೊಂಡು ಶರೀರಕ್ಕೆ ರೋಗ ರುಜಿನಗಳನ್ನು ಆಹ್ವಾನಿಸಿಕೊಂಡಿದ್ದೇವೆ. ಇವು ತೊಲಗಲು ವ್ಯಾಯಾಮ, ಮತ್ತು ಯೋಗ ಹಾಗೂ ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕ್ಕೊಳ್ಳಬೇಕು ಎಂದರು. ಈ ದುಬಾರಿ ದುನಿಯಾದಲ್ಲಿ ಮಧ್ಯಮ ವರ್ಗ, ಬಡವರು, ನಿರ್ಗತಿಕರಿಗೆ ಇಂತಹ ಉಚಿತ ಶಿಬಿರಗಳು ಸಹಕಾರಿಯಾಗಿವೆ. ಆದ್ದರಿಂದ ಶಿಬಿರದ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಮಾತನಾಡಿ, ಮನುಷ್ಯ ಎಷ್ಟೆಲ್ಲ ಗಳಿಸಬಹುದು ಆದರೆ ಅರೋಗ್ಯ ಗಳಿಸುವುದು ಕಷ್ಟ ಹಣ ಗಳಿಸಿ ಅರೋಗ್ಯ ಕೊಂದುಕೊಳ್ಳವುದು ಕಷ್ಟ ಸಾಧ್ಯ ಆದ್ದರಿಂದ ಗಳಿಸದ ಆದಾಯದಲ್ಲಿ ಸ್ವಲ್ಪವನ್ನಾದರೂ ದಾನ, ಧರ್ಮ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಹೋಗುವುವಾಗ ಏನೂ ಒಯಲು ಆಗುವುದಿಲ್ಲ ಇದನ್ನು ಅರಿತು, ಬದುಕುಬೇಕು ಆರೋಗ್ಯ ದಾನ ಶ್ರೇಷ್ಠವಾಗಿದೆ. ಹುರಕಡ್ಲಿ ಪರಿವಾರ ಉಚಿತ ಚಿಕಿತ್ಸೆ ನೀಡಿ ನೊಂದ ಹೃದಯಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಶರಣ ಮಲ್ಲಪ್ಪಾ ಕಟಗಿ ಕಾಯ ಅಳಿದರೂ ಕಾರ್ಯ ಉಳಿಯಬೇಕೆನ್ನುವಂತಹ ಕೆಲಸವನ್ನು ಹುರಕಡ್ಲಿ ಪೌಂಡೇಶನ್ 15 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ನಗರದ ಹಲವಾರು ಬಡ ರೋಗಿಗಳ ಸೇವೆ ಮಾಡಿ ದೇವರ ಪ್ರೀತಿಗೆ ಪಾತ್ರರಾಗುತ್ತಿರುವುದು ಅವರ ತಂದೆ ತಾಯಿಯ ಹೆಸರಿನಲ್ಲಿ ಪೌಂಡೇಶನ್ ಮಾಡಿಕೊಂಡು ಅದರ ಮೂಲಕ ಅನೇಕ ಅರೋಗ್ಯ ಶಿಬಿರಗಳನ್ನು ಏರಿ್ಡಸಿ ಸಮಾಜದ ಶ್ರೇಷ್ಠ ಜನೋಪಯೋಗಿ ಕಾರ್ಯಕ್ರಮಗಳಿಂದ ಹುರಕಡ್ಲಿ ದಂಪತಿಗಳು ಮಾಡುತ್ತಿರುವುದು ಅವರ ಸಾರ್ಥಕ ಬದುಕಿಗೆ ಸಾಕ್ಷಿಯಾಗಿದ್ದಾರೆ ಎಂದರು.
ಶಿವಾನಂದ ಬಿದರಿ ಪ್ರಾರ್ಥನೆ ಗೀತೆ ಹಾಡಿದರು. ಮುಖಂಡರಾದ ಶ್ರೀಶೈಲಪ್ಪಾ ಉಳ್ಳೆಗಡ್ಡಿ, ಚನ್ನಪ್ಪ ಪಟ್ಟಣಶೆಟ್ಟಿ, ಅಶೋಕ ಸುನದೊಳಿ, ಮಹಾದೇವ ಮರೆಗುದ್ದಿ, ವೀರೇಶ ಆಸಂಗಿ, ಮಹೇಬೂಬ ಸನದಿ ಮಲ್ಲಪ್ಪಾ ನುಚ್ಚಿ, ಮಹಾಲಿಂಗ ಕರೆಹೊನ್ನ, ಮಹೇಶ ಇಟಕನ್ನವರ, ಸಿದ್ಫು ದಡುತಿ, ಅಶೋಕ ಮಂಟೂರ, ಅಶೋಕ ಕಡಪಟ್ಟಿ, ಪುರಸಭೆ ಸದಸ್ಯೆ ಸವಿತಾ ಚನಬಸು ಹುರಕಡ್ಲಿ, ಮಾಜಿ ಪುರಸಭಾ ಉಪಾಧ್ಯಕ್ಷ ಹಾಗೂ ಹುರಕಡ್ಲಿ ಫೌಂಡೇಷನ್ ಅಧ್ಯಕ್ಷರಾದ ಚನಬಸು ಹುರಕಡ್ಲಿ ಸೇರಿ ಹಲವರು ಇದ್ದರು. ಮಹಾಂತೇಶ ಫನಸಲಕರ ನಿರೂಪಿಸಿ ವಂದಿಸಿದರು.