ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಸರಕಾರಿ ನೌಕರಿ, ಎಸ್‍ಸಿ, ಎಸ್‍ಟಿ ಜನರಿಗೆ ಮೀಸಲಾತಿ ನೀಡಲು ಸಿದ್ದ : ರಾಹುಲ ಗಾಂಧಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಸರಕಾರಿ ನೌಕರಿ, ಎಸ್‍ಸಿ, ಎಸ್‍ಟಿ ಜನರಿಗೆ ಮೀಸಲಾತಿ ನೀಡಲು ಸಿದ್ದ : ರಾಹುಲ ಗಾಂಧಿ

ಬೆಳಗಾವಿ : ದೇಶದಲ್ಲಿಯೇ ಅತಿ ಭ್ರಷ್ಟವಾಗಿರುವ ಕರ್ನಾಟಕದ 40 ಪ್ರತಿಶತ ಕಮಿಷನ್‍ನ ಸರಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಪಿಎಸ್‍ಐ ಸೇರಿದಂತೆ ಅನೇಕ ಪರಿಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ. ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಸರಕಾರಿ ನೌಕರಿ ಜತೆಗೆ ಎಸ್‍ಸಿ, ಎಸ್‍ಟಿ ಜನರಿಗೆ ಮೀಸಲಾತಿ ನೀಡಲು ನಮ್ಮ ಸರಕಾರ ಸಿದ್ದವಿದೆ. ನಾವೆಲ್ಲರು ಬಿಜೆಪಿ ಸೋಲಿಸಿ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ತರೋನ ಎಂದು ರಾಹುಲ ಗಾಂಧಿ ಇಂದಿಲ್ಲಿ ಹೇಳಿದರು.


    ಸೋಮವಾರ ನಗರದ ಸಿಪಿಎಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿನ ಯುವಕರು ತಮಗೆ ಉದ್ಯೋಗ ಸಿಗತಾ ಇಲ್ಲ ಎಂದು ತಮ್ಮ ಅಳನ್ನು ತೋಡಿಕೊಂಡಿದ್ದಾರೆ. ರಾಜ್ಯ ಸರಕಾರ ಯುವ ಪೀಳಿಗೆಗೆ ಉದ್ಯೋಗ ನೀಡುತ್ತಿಲ್ಲ ಎಂದು ಎಲ್ಲ ಜನರು ಹೇಳಿದರು. ರಾಜ್ಯ ಸರಕಾರ ದೇಶದಲ್ಲಿ ಭ್ರಷ್ಟ ಮತ್ತು 40 ಪ್ರತಿಶತ ಕಮೀಷನ್ ಸರಕಾರವಾಗಿದೆ. ಈ ಬಗ್ಗೆ ಕರ್ನಾಟಕದ ಗುತ್ತಿಗೆದಾರರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದರು ಪ್ರಧಾನಿಗಳು ಇಲ್ಲಿಯ ವರೆಗೆ ಉತ್ತರ ನೀಡಿಲ್ಲ. ಮೈಸೂರು ಸ್ಯಾಂಡಲ್ ಸೋಪ ಸಂಸ್ಥೆಯಲ್ಲೂ ಲಂಚಾವತಾರವಾಗಿದೆ. ಶಾಸಕ ಮತ್ತು ಪುತ್ರ ಇದರಲ್ಲಿ ಶಾಮಿಲಾಗಿದ್ದಾರೆ ಎಂದು ದೂರಿದರು.

   ರಾಜ್ಯದಲ್ಲಿ ಪಿಎಸ್‍ಐ ಸೇರಿ ಎಲ್ಲ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ, ಇದನ್ನು ನಾನು ಹೇಳುತ್ತಿಲ್ಲ, ಕರ್ನಾಟಕದ ಜನ ಹೇಳಿದ್ದಾರೆ. ಯುವಕರಿಗೆ ಉದ್ಯೋಗ ಯಾಕೆ ಸಿಗತಾ ಇಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ ಎಂದು ಹೇಳಿದರು. ಎರಡು ವರ್ಷ ವರೆಗೆ ಡಿಪೆÇ್ಲಮಾ ಮುಗಿಸಿ ನಿರುದ್ಯೋಗ ಅಭ್ಯರ್ಥಿಗಳಿಗೆ 1500 ಎರಡು ವರ್ಷ ನೀಡುವ ಯೋಜನೆ, ಹಾಗೂ ಡಿಗ್ರಿ ಅಭ್ಯರ್ಥಿಗಳಿಗೆ 3000 ನೀಡುವ ಯೋಜನೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಅದರ ಜೊತೆಗೆ ಗೃಹಲಕ್ಷ್ಮಿ, ಗ್ರಹಜೋತಿ, ಹೀಗೆ ನಾಲ್ಕು ಯೋಜನೆಗಳ ಗ್ಯಾರಂಟಿ ನೀಡಲಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಎಸ್‍ಸಿ, ಎಸ್‍ಟಿ ಮೀಸಲಾತಿ ನೀಡಲು ನಮ್ಮ ಸರಕಾರ ಸಿದ್ದವಿದೆ. ಬಿಜೆಪಿ ಸರಕಾರ ಬ್ರಷ್ಟ ಸರಕಾರಕ್ಕೆ ಜನಾ ಬೇಸತ್ತಿದ್ದಾರೆ. ನಾವೆಲ್ಲರು ಬಿಜೆಪಿ ಸೋಲಿಸಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರೋನ ಎಂದರು. ದೇಶದ ಎಲ್ಲ ವಿಮಾನ, ರೈಲು ನಿಲ್ದಾಣ ಸೇರಿದಂತೆ ಅನೇಕ ವಿಭಾಗಗಳಲ್ಲಿ ಅದಾನಿಗೆ ಸಮಪಾಲು ನೀಡಲಾಗುತ್ತಿದೆ. ದೇಶದಲ್ಲಿ ಎಲ್ಲವು ಅದಾನಿಮಯವಾಗಿದೆ ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.

    ಕೆಲವು ತಿಂಗಳ ಹಿಂದೆ ನಾನು ಕರ್ನಾಟಕದಿಂದ ಭಾರತ ಜೋಡೊ ಪಾದಯಾತ್ರೆ ಪ್ರಾರಂಭಿಸಿದ್ದೇ, ಅದಕ್ಕೆ ನಿಮ್ಮ ಪೂರ್ಣ ಶಕ್ತಿ ನೀಡಿದ್ದರಿಂದ ನಮ್ಮ ಪಾದಯಾತ್ರೆ ಯಾತ್ರೆ ಯಶಸ್ವಿಯಾಯಿತು. ಈ ದೇಶ ಅದಾನಿ ಯವರದಲ್ಲ. ರೈತರ, ಯುವ ಪೀಳಿಗೆಯ ದೇಶವಾಗಿದೆ. ನಮ್ಮ ಭಾರತ ಜೋಡೊ ಯಾತ್ರೆಯಲ್ಲಿ ಎಲ್ಲು ದ್ವೇಷ, ಕೆಟ್ಟ ಭಾವನೆ ಇರಲಿಲ್ಲ. ಎಲ್ಲ ರಾಜ್ಯಗಳಲ್ಲಿ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ನಾವೆಲ್ಲರು ಪ್ರೀತಿಯಿಂದ ಇರುತ್ತೇವೆ. ನಮಗೆ ದ್ವೇಷ ಬೇಡ ಎಂದಿದ್ದಾರೆ ಜನ ಎಂದರು. ಭಾರತ ಜೋಡೊ ಯಾತ್ರೆಗೆ ಕರ್ನಾಟಕದ ಜನ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು.


   ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ರಾಜ್ಯಕ್ಕೆ ಮಹತ್ವದ ಚುನಾವಣೆ ಎದುರಾಗಿದೆ. ದೇಶಕ್ಕೆ ಸಂದೇಶ ಸಾರುವ ಕಾಲ ಇದು, ಎಲ್ಲರು ಒಕ್ಕಟ್ಟಿನಿಂದ ಈ ಚುನಾವಣೆ ಎದುರಿಸಬೇಕಾಗಿದೆ. ಬೆಳಗಾವಿ ಕಾಂಗ್ರೆಸ್‍ಗೆ ಪವಿತ್ರವಾದ ಬೂಮಿ, ಮಹಾತ್ಮ ಗಾಂಧಿಯವರು ಇಲ್ಲಿಯೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಇದು ಕಾಂಗ್ರೆಸ್‍ಗೆ ಪವಿತ್ರವಾದ ಸ್ಥಾನ. ಇಲ್ಲಿ ನೆರೆದಿರುವ ನಿಮ್ಮಲ್ಲರನ್ನು ನೋಡಿ ಬೆಳಗಾವಿಯ ಎಲ್ಲ 18 ಶಾಸಕ ಸ್ಥಾನ ಆಯ್ಕೆ ಮಾಡತಿರಿ ಅಂತಾ ನಂಬಿದ್ದೇನೆ. ಬಿಜೆಪಿ ಸರಕಾರದ ಪ್ರತಿಶತ 40 ಕಮಿಷನ್ ಬಗ್ಗೆ ನಾವು ಹೇಳಿಲ್ಲ. ಗುತ್ತಿಗೆದಾರು ಮೋದಿ, ಶಾ ಅವರಿಗೆ ದೂರು ನೀಡಿದ್ದಾರೆ. ಆದರೆ ಅದನ್ನು ಯಾಕೆ ವಿಚಾರಣೆ ಮಾಡತಾ ಇಲ್ಲ. ರಾಹುಲ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ ಜೋಡೊ ಯಾತ್ರೆ ಮಾಡಿ ಚಿಕ್ಕಮಕ್ಕಳ, ರೈತರ, ಮಹಿಳೆಯರ, ಜೊತೆ ಸರಿ ಸಾಮಾನ್ಯರಂತೆ ನಡೆದುಕೊಂಡಿದ್ದಾರೆ. ಲಂಚಾವತಾರ ವಿಚಾರಣೆ ಮಾಡದ ಪ್ರಧಾನಿ ಅವರೆ ರಾಹುಲ ಗಾಂಧಿ ಅವರು ಮನೆಗೆ ಪೊಲೀಸ ಬರುವದು ಯಾವ ಪುರುಷಾರ್ಥ ಸ್ವಾಮಿ ಎಂದರು.  

  ಖರ್ಗೆ ಅವರ ರಿಮೋಟ್ ಕಂಟ್ರೋಲ್ ಬೇರೆಯವರ ಹತ್ತಿರ ಇದೆ ಅನ್ನುವ ಮೋದಿ ಅವರೆ ನಿಮ್ಮ ಪಕ್ಷದ ಅಧ್ಯಕ್ಷ ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಹತ್ತಿರ ಇದೆ ನೋಡಿಕೊಳ್ಳಿ ಸ್ವಲ್ಪ. ಈ ದೇಶದಲ್ಲಿ ಜಾತಿಯತೆ ಇದೆ ಅಂತಾ ಹೇಳುವದು ತಪ್ಪಾ. ಕಿತ್ತೂರು ಚನ್ನಮ್ಮ, ಬೆಳವಡಿ ಮ್ಮಲ್ಲಮ್ಮ, ಸಂಗೋಳಿ ರಾಯಣ್ಣನ ಊರು ಇದು. ಇಲ್ಲಿ ಯಾರನ್ನು ಯಾರು ಹೆದಿರಿಸಲು ಸಾದ್ಯವಿಲ್ಲ. ನಿಮ್ಮ ಯಾವ ಬೆದರಿಕೆಗೆ ನಾವು ಹೆದರೊಲ್ಲ. ನಾವು ಎಲ್ಲದಕ್ಕು ಸಿದ್ದರಿದ್ದೇವೆ. ಮೋದಿ ಅವರೆ ನಾವು ಬೀಜ ಇದ್ದ ಹಾಗೆ ನೀವು ನಮ್ಮನ್ನು ಮಣ್ಣಿನಲ್ಲಿ ತುಳಿದರು ನಾವು ಮತ್ತೆ ಮಣ್ಣಿನಲ್ಲಿ ನಾಟಿ ಬೆಳೆಯಾಗಿ ಹೊರ ಬರುತ್ತೇವೆ ಎಂದು ಗುಡುಗಿದರು. ಸರಕಾರದಲ್ಲಿ 25 ಲಕ್ಷ ಸರಕಾರಿ ನೌಕರಿಗಳು ಖಾಲಿ ಇವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಅವನ್ನು ತುಂಬುತ್ತೇವೆ ಎಂದು ತಿಳಿಸಿದರು.

    ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿನಿಂದ ಬಂದು ಅನೈತಿಕ ಸರಕಾರ ರಚನೆ ಮಾಡಿದೆ. ಮೋದಿ ಅವರೆ 9 ವರ್ಷದಲ್ಲಿ ಯುವ ಪೀಳಿಗೆಗೆ ಎನು ನೀಡಿದ್ದಿರಿ, ಪ್ರವಾಹ ವೇಳೆ ಜನ ಜೀವ ಕಳೆದುಕೊಂಡರು ಇತ್ತ ಬಾರದ ಪ್ರಧಾನಿ ಮೋದಿ ಇವಾಗ ತಿಂಗಳಿಗೆ ಒಮ್ಮೆ ಬರತಾ ಇದ್ದಾರೆ. ಆಕ್ಸಿಜನ್ ಇಲ್ಲದೆ ಕೋವೀಡ್ ವೇಳೆ ಸಾವಿರಾರು ಜನ ಮೃತರಾದರು ಬಾರದ ಮೋದಿ ಇವಾಗ ಅಧಿಕಾರ ಹಿಡಿಯಲು ರಾಜ್ಯಕ್ಕೆ ಬರತಾ ಇದ್ದಾರೆ. ಯುವ ಪೀಳಿಗೆಗೆ 2 ಕೋಟಿ ಉದ್ಯೋಗ ಕೊಡತೇನೆ ಅಂತಾ ಹೇಳಿದ್ದಿರಿ. ಎಷ್ಟು ಕೊಟ್ಟಿದ್ದಿರಿ, ನಿಮ್ಮ ಅಧಿಕಾರವಧಿಯಲ್ಲಿ ಲಕ್ಷ ಲಕ್ಷ ಸಣ್ಣ ಕೈಗಾರಿಕೆಗಳು ಬಂದಾಗಿವೆ. ಲಕ್ಷಾಂತರ ಜನ ಯುವಕರು ಹೊರದೇಶಗಳಿಗೆ ಉದ್ಯೋಗ ಆರಿಸಿ ಹೋಗಿದ್ದಾರೆ. ಇದರ ಬಗ್ಗೆ ಮಾತನಾಡಿ ಎಂದರು.

   ರಾಜ್ಯದಲ್ಲಿ ಲಂಚ ಇಲ್ಲದೆ ಯಾವ ಕೆಲಸ ಆಗತಾ ಇಲ್ಲ. ನಿಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಉದ್ಯೋಗ ಕಡಿಮೆ ಆಗಿವೆ. ಉದ್ಯೋಗ ಕಡಿತ ಮಾಡಿರುವ ಈ ಸರಕಾರ ಮತ್ತೆ ಅಧಿಕಾರದಲ್ಲಿ ಇರಬೇಕಾ. ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಬೆರೆಸಿ ಶಿಕ್ಷಣ ಇಲಾಖೆ ಹಾಳು ಮಾಡಿದ್ದಿರಿ. ಅವೈಜ್ಞಾನಿಕವಾದ ಶಿಕ್ಷಣ ಕೊಡತಾ ಇದ್ದಾರೆ. ವಿದ್ಯಾರ್ಥಿಗಳು, ಯುವಪಡೆ ದೇಶದ ಭವಿಷ್ಯ. ಇದರಿಂದ ನಿಮ್ಮ ಭವಿಷ್ಯ ಬೆಳಗಲು ಭ್ರಷ್ಟ ಬಿಜೆಪಿ ಸರಕಾರ ಕಿತ್ತು ಹಾಕಲು ಮುಂದಾಗಬೇಕು ಎಂದು ಯುವಪೀಳಿಗೆಗೆ ಕರೆ ನೀಡಿದರು.  

    ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಐತಿಹಾಸಿಕ ಕಾರ್ಯಕ್ರಮ. ಗಾಂಧಿಜೀ ಅವರು ಆಂಗ್ಲರನ್ನು ಓಡಿಸಲು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ್ದರು, ಅದೇ ಜಾಗದಿಂದ ರಾಹುಲ ಗಾಂಧಿ ಸರಕಾರ ರಚನೆಯ ಪ್ರಯತ್ನ ಪ್ರಾರಂಭಿಸಿದ್ದಾರೆ. ರಾಜೀವ ಗಾಂಧಿ ಯುವಕರ ಬಗ್ಗೆ ಕಾಳಜಿ ಉಳ್ಳವರು ಆಗಿದ್ದರು. 18 ವರ್ಷಕ್ಕೆ ಮತದಾನ ಹಕ್ಕು ನೀಡಿದ ಇತಿಹಾಸ. ಆ ಯುವಕರಿಗೆ ಬೆಂಬಲಕ್ಕೆ ನಿಲ್ಲಲು ರಾಹುಲ ಬಂದಿದ್ದಾರೆ. ಅವರ ಕೈ ಬಲಪಡಿಸಬೇಕಾಗಿದೆ. ಇದೇ ವೇಳೆ ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚಂದ, ದಾನ ಧರ್ಮದ ಕೈ ಅಧಿಕಾರದಲ್ಲಿ ಇದ್ದರೆ ಚೆಂದ ಎಂದು ನಾನುಡು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಮಾತನಾಡಿದರು.

     ಈ ವೇಳೆ ವೇದಿಕೆಯಲ್ಲಿ ರಣದೀಪಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ, ಬಿಕೆ.ಹರಿಪ್ರಸಾದ, ಸಲೀಮ್ ಅಹ್ಮದ್, ಈಶ್ವರ ಖಂಡ್ರೆ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ, ಎಮ್.ಬಿ.ಪಾಟೀಲ, ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಮಹಾಂತೇಶ ಕೌಜಲಗಿ, ಬಿ.ವಿ.ಶ್ರೀನಿವಾಸ, ನಲ್ಪಾಡ್, ಶ್ರೀಧರ, ವಿಶ್ವನಾಥ, ಸೇರಿದಂತೆ ಅನೇಕ ಶಾಸಕರು, ಮಾಜಿ ಶಾಸಕರು, ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ