ಐಪಿಎಲ್-2022 : ಝಣಝಣ ಕಾಂಚಾಣ – ವಿರಾಟ್ ಕ್ಕಿಂತ ಹೆಚ್ಚು ರೋಹಿತ್; ಸಂಭಾವನೆಯಲ್ಲಿ ಧೋನಿ ಹಿಂದಿಕ್ಕಿದ ಪಂತ್
ಐಪಿಎಲ್-2022 : ಝಣಝಣ ಕಾಂಚಾಣ – ವಿರಾಟ್ ಕ್ಕಿಂತ ಹೆಚ್ಚು ರೋಹಿತ್; ಸಂಭಾವನೆಯಲ್ಲಿ ಧೋನಿ ಹಿಂದಿಕ್ಕಿದ ಪಂತ್
ಮುಂಬೈ, ಡಿ 1 ಐಪಿಎಲ್ 2022ಕ್ಕೆ ಉಳಿಸಿಕೊಳ್ಳಬೇಕಾದ 27 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಾಯಕ ಎಂಎಸ್ ಧೋನಿ ಸೇರಿದಂತೆ 4 ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ. ಧೋನಿ ಚೆನ್ನೈನಿಂದ ರಿಟೇನ್ ಆಗಿರುವ ಎರಡನೇ ಆಟಗಾರನಾಗಿದ್ದು, ಕೂಲ್ ಕ್ಯಾಪ್ಟನ್ 12 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಕಳೆದ ಋತುವಿನಲ್ಲಿ ಅಂದರೆ 2021ರಲ್ಲಿ ಧೋನಿ 15 ಕೋಟಿ ಗಳಿಸಿದ್ದರು. ರವೀಂದ್ರ ಜಡೇಜಾ ಅವರಿಗೆ ಗರಿಷ್ಠ 16 ಕೋಟಿ ರೂಪಾಯಿ ಪಡೆಯಲಿದ್ದಾರೆ. ಈ ಸೀಜನ್ ನಲ್ಲಿ ಉಳಿಸಿಕೊಂಡಿರುವ 27 ಆಟಗಾರರ ಪೈಕಿ 5 ಆಟಗಾರರು ಸಂಭಾವನೆಯಲ್ಲಿ ಧೋನಿಯನ್ನು ಹಿಂದಿಕ್ಕಿದ್ದಾರೆ.
ಸಂಜು ಸ್ಯಾಮ್ಸನ್ 14 ಕೋಟಿಗೆ ಬಿಕರಿ!
ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸೇರಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಿಂದ ಸ್ಯಾಮ್ಸನ್ 14 ಕೋಟಿ ರೂಪಾಯಿ, ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ 16 ಕೋಟಿ, ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ 14 ಕೋಟಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 16 ಕೋಟಿ ಮತ್ತು ಆರ್‌ಸಿಬಿ ಪ್ರಾಂಚೈಸಿ 15 ಕೋಟಿಗೆ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ, ಕೆಕೆಆರ್ ಆಂಡ್ರಾ ರಸೆಲ್ ಮತ್ತು ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬುಮ್ರಾ ಅವರನ್ನು 12 ಕೋಟಿಗೆ ಉಳಿಸಿಕೊಂಡಿದ್ದು, ಅದು ಧೋನಿ ಪಡೆಯುವ ಸಂಭಾವನೆಗೆ ಸಮನಾಗಿದೆ.
“ಚೆನ್ನೈನಲ್ಲಿ ಕೊನೆಯ ಪಂದ್ಯ ಆಡುತ್ತೇನೆ”
ಧೋನಿ ತನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸುವುದಾಗಿ ಮೊದಲೇ ಹೇಳಿದ್ದರು. ಕಳೆದ ಬಾರಿ ಅರಬ್ ರಾಷ್ಟ್ರಗಳಲ್ಲಿ ನಡೆದಿದ್ದ ಐಪಿಎಲ್ ಪಂದ್ಯಗಳು ಈ ಬಾರಿ 2022ರ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯಲಿವೆ. ಐಪಿಎಲ್ 2020 ರಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಧೋನಿಯ ಪ್ರದರ್ಶನದ ಮೇಲೆ ಪ್ರಶ್ನೆಗಳು ಎದ್ದಿದ್ದವು. ಆದ್ರೆ ಕೂಲ್ ಕ್ಯಾಪ್ಟನ್ ಧೋನಿ ಅತ್ಯುತ್ತಮ ಪ್ರದರ್ಶನ ನೀಡಿ, 2021ರಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ರು. ಈ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದರು. ಚೆನ್ನೈನ ಅವರ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಮುಂಬೈ ಅತಿ ಹೆಚ್ಚು 5 ಬಾರಿ ಪ್ರಶಸ್ತಿ ವಶಪಡಿಸಿಕೊಂಡಿದೆ.
ಐಪಿಎಲ್ - 2022ರಲ್ಲಿ 8 ತಂಡಗಳ ಬದಲಿಗೆ 10 ತಂಡಗಳು, 10 ತಂಡಗಳು ಗ್ರೌಂಡ್ ಗೆ ಇಳಿಯಲಿವೆ. ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಲಕ್ನೋದಿಂದ 20 ಕೋಟಿ ಪಡೆಯುವ ಸಾಧ್ಯತೆ ಇದೆ ಅಂತಾ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೊತ್ತಕ್ಕೆ ಬಿಕರಿಯಾದ್ರೆ, ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಕೆ.ಎಲ್.ರಾಹುಲ್ ಆಗಲಿದ್ದಾರೆ.