ತಮಿಳು ನಾಯಕ ನಟ 'ದಳಪತಿ' ವಿಜಯ್ ನಿವಾಸದ ಮೇಲೆ ಮತ್ತೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ತಮಿಳು ನಾಯಕ ನಟ  'ದಳಪತಿ'  ವಿಜಯ್ ನಿವಾಸದ ಮೇಲೆ ಮತ್ತೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

ತಮಿಳು ನಾಯಕ ನಟ  'ದಳಪತಿ'  ವಿಜಯ್ ನಿವಾಸದ ಮೇಲೆ ಮತ್ತೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಚೆನ್ನೈ, ಮಾ ೧೨(ಯುಎನ್ಐ)  ತಮಿಳು ಸಿನಿಮಾ  ನಾಯಕ  ನಟ   'ದಳಪತಿ'  ವಿಜಯ್  ಅವರ  ನಿವಾಸದ ಮೇಲೆ   ಆದಾಯ ಇಲಾಖೆ ಅಧಿಕಾರಿಗಳು ಇಂದು  ಮತ್ತೊಮ್ಮೆ   ದಾಳಿ ನಡೆಸಿ ಶೋಧನೆ ನಡೆಸುತ್ತಿದ್ದಾರೆ. ಗುರುವಾರ,  ಆದಾಯ ತೆರಿಗೆ  ಇಲಾಖೆ ಅಧಿಕಾರಿಗಳು ಚೆನ್ನೈನಲ್ಲಿರುವ  ವಿಜಯ್ ಅವರ ನಿವಾಸದ ಮೇಲೆ ದಾಳಿ ನಡೆಸಿ  ಶೋಧ ಕಾರ್ಯಾಚರಣೆ ನಡೆಸಿದರು. ಕಳೆದ ತಿಂಗಳು  ವಿಜಯ್   ಅವರ  ಮನೆಯ ಮೇಲೆ   ಆದಾಯ ಅಧಿಕಾರಿಗಳು ದಾಳಿ ನಡೆಸಿದ್ದರು.  ಹಿಂದಿನ ದಾಳಿಯ ಮುಂದುವರಿಕೆಯ  ಭಾಗವಾಗಿ   ಈ ಶೋಧನೆ ನಡೆಸಲಾಗುತ್ತಿದೆ ಎಂದು  ಹೇಳಲಾಗಿದೆ. ಕಳೆದ ತಿಂಗಳು ವಿಜಯ್ ಮನೆ ಮತ್ತು ಕಚೇರಿಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದ  ಐಟಿ ಅಧಿಕಾರಿಗಳು .. ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.  ಆದಾಯಕ್ಕೆ  ಸಂಬಂಧಿಸಿದ  ಲೆಕ್ಕಪತ್ರಗಳು  ಸರಿಯಾಗಿವೆ ಎಂದೂ ಸಹ ಆದಾಯ ತೆರಿಗೆ ಅಧಿಕಾರಿಗಳು  ಹೇಳಿದ್ದರು. ಇದರಿಂದಾಗಿ ವಿಜಯ್  ಅವರು  ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ,   ಹೊಸದಾಗಿ  ಐಟಿ ಅಧಿಕಾರಿಗಳು ಮತ್ತೊಮ್ಮೆ  ದಾಳಿ  ನಡೆಸಿರುವುದು ಮಹತ್ವ ಪಡೆದುಕೊಂಡಿದೆ.  ಪ್ರಸ್ತುತ ವಿಜಯ್,  ಮಾಸ್ಟರ್   ಎಂಬ  ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಚಿತ್ರದ   ಆಡಿಯೋ ಈ ತಿಂಗಳ ೧೫ ರಂದು ಬಿಡುಗಡೆಯಾಗಲಿದೆ.

ಸುದ್ದಿ ಓದಿ