ಜನರ ಸಮಸ್ಯಗಳಿಗೆ ಸ್ಪಂದಿಸುತ್ತೇನೆ: ಈರಣ್ಣ ಕಡಾಡಿ
ರಾಮದುರ್ಗ ನವೆಂಬರ್ 03: ಜನರ ಮದ್ಯಯೆ ಬೆಳೆದ ನಾನು ಸಾಮನ್ಯನಂತೆ ಜನರೊಂದಿಗೆ ಬೆರೆತು ಉಬಯ ಸರಕಾರಗಳ ಯೋಜನೆಗಳನ್ನು ತಿಳಿಸುತ್ತಾ ಜನರ ಸಮಸ್ಯಗಳಿಗೆ ಸ್ಪಂದಿಸುತ್ತೇನೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮತನಾಡಿದ ಅವರು ದೇಶ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉತ್ತಮ ನಾಯಕತ್ವದಲ್ಲಿ ಅಭಿವೃದ್ದಿ ಪಥದತ್ತ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾ ಅಭಿವೃದ್ದಿಗೆ ಕೊಂಚ ಹಿನ್ನಡೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಸಭಾ ಸದಸ್ಯರಿಗೆ ಕೇವಲ ಸಭೆಯಲ್ಲಿ ಕಾನೂನು ತಿದ್ದು ಪಡಿ ಮಾಡುವ ಜವಾಬ್ದಾರಿ ಇದೆ, ಕಾಮಗಾರಿಗೆ ಹಣ ಮಂಜೂರ ಮಾಡಿಸಲು ಸ್ಥಳೀಯ ಶಾಸಕರ ವ್ಯಾಪ್ತಿಗೆ ಬರುತ್ತದೆ ಎಂದು ನುಡಿದರು.
ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ ಒಳ್ಳೆಯ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಇದೆ ಅದಕ್ಕೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಉತ್ತಮ ಉಧಾಹರಣೆ ಜಿಲ್ಲೆಯಲ್ಲಿಯೇ ಪಕ್ಷ ಕಟ್ಟುವಲ್ಲಿ ಮುಂಚುನಿಯಲ್ಲಿದ್ದರು ಯಾವುದೆ ಸ್ಥಾನದ ಫಲಾಪೇಕ್ಷ ಇಲ್ಲದೆ ದುಡಿದ ಪರಿಣಾಮ ಇಂದು ರಾಜ್ಯ ಸಭಾ ಸದಸ್ಯರ ಸ್ಥಾನ ಅವರ ಮನೆ ಭಾಗಿಲಿಗೆ ಬಂದಿದೆ ಇದು ನಮ್ಮೆಲ್ಲ ಕಾರ್ಯಕರ್ತರು ಅರ್ಥಮಾಡಿಕೊಂಡು ಕೆಲಸ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯರಾದ ಮಾರುತಿ ತುಪ್ಪದ, ರಮೇಶ ದೇಶಪಾಂಡೆ, ಬಿಜಿಪಿ ಯುವ ಧುರೀಣ ಮತ್ತು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾಖರ್ಾನೆ ನಿದರ್ೇಶಕ ಮಲ್ಲಣ್ಣಾ ಯಾದವಾಡ, ಮಹಾದೇವ ಅತಾರ, ಚಂದ್ರು ಬೆಳವಡಿ, ಹಾಗೂ ಸಾಲಳ್ಳಿ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.