ಎಲಬುರ್ಗ

‘ಕನ್ನಡ ನಾಡು ನುಡಿಯ ಸೇವೆ ಮಾಡಲು ಕಂಕಣಬದ್ದನಾಗಿದ್ದೇನೆ’

‘ಕನ್ನಡ ನಾಡು ನುಡಿಯ ಸೇವೆ ಮಾಡಲು ಕಂಕಣಬದ್ದನಾಗಿದ್ದೇನೆ’

ಯಲಬುರ್ಗಾ 14: ಶತಮಾನ ಕಂಡ  ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಶ ಪರಿಷತ್ತಿನ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನಕ್ಕೆ ಒಬ್ಬ ಕ್ರಿಯಾಶೀಲ ಸಾಹಿತಿಯಾಗಿ ಸ್ಪರ್ಧೆಗಿಳಿದಿರುವುದು ಜೀವನದ ಸೌಭಾಗ್ಶವೆಂದು ನಾನು ಭಾವಿಸಿದ್ದೇನೆ.ಕನ್ನಡ ನಾಡು ನುಡಿಯ ಸೇವೆ ಮಾಡಲು ಕಂಕಣಬದ್ದನಾಗಿದ್ದೇನೆ. ಪ್ರೌಢಶಾಲಾ ಶಿಕ್ಷಕನಾಗಿ ಉಪನ್ಶಾಸಕನಾಗಿ ಕಳೆದ 25ವರ್ಷಗಳಿಂದ ವಿದ್ಶಾರ್ಥಿಗಳಲ್ಲಿ ಸಾಹಿತ್ಶಾಭಿಮಾನವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದೇನೆ. ಸಾಲಿ ಮತ್ತು ಸಾಹಿತ್ಶ ನನ್ನ ಎರಡು ಕಣ್ಣುಗಳು. ಈ ಎರಡನ್ನೂ ನಾನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ.ಕನ್ನಡಮ್ಮನ ನಿಷ್ಠಾವಂತ ಸೇವಕನಾದ ನನಗೊಂದು ಸಲ ಅವಕಾಶ ಮಾಡಿಕೊಡಬೇಕೆಂದು  ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನದ ಪ್ರಬಲ ಅಭ್ಶರ್ಥಿಯಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.          

ಅವರು ಯಲಬುರ್ಗಾದ ಕನ್ನಡ ಸಾಹಿತ್ಶ ಪರಿಷತ್ತಿನ ಹಿರಿಯ ಆಜೀವ ಸದಸ್ಶ ರಾಮಣ್ಣ ಸಾಲಬಾವಿ ಅವರಿಗೆ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ನೀಡುವುದರ ಮೂಲಕ ಮತಯಾಚಿಸಿ ಮಾತನಾಡಿದರು. ಕನ್ನಡ ಸಾಹಿತ್ಶ ಪರಿಷತ್ತಿನ ಆಜೀವ ಸದಸ್ಶ ರಾಮಣ್ಣ ಸಾಲಬಾವಿ, ಸ.ಶರಣಪ್ಪ ಪಾಟೀಲ, ಎಚ್‌.ಎಚ್‌. ಕುರಿ, ಶಿವರಾಜಗೌಡ ಪೋಲಿಸ ಪಾಟೀಲ, ಹುಲಗಪ್ಪ ಬಂಡಿವಡ್ಡರ, ಹನುಮಂತಪ್ಪ ಉಪ್ಪಾರ, ರಾಮಣ್ಣ ಚಿಕ್ಕಗೌಡರ, ಕಲ್ಲಪ್ಪ ಕರಮುಡಿ  ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ