ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ

ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ

ಪಾರೇಶ ಭೋಸಲೆ

ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಘಟಪ್ರಭಾ ನದಿಯ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಹುನ್ನೂರಿನ ವಿಠಲ ದೇವರ ಮಂದಿರಕ್ಕೆ ಜಲದಿಗ್ಭಂಧನದಿಂದ ಮುಕ್ತಿಯಾಗಿದ್ದು, ಜನ ಮತ್ತೆ ವಿಠಲನ ದರ್ಶನ ಭಾಗ್ಯ ದೊರೆಯಬಹುದು ಎನ್ನುವ ಕಾತುರದಲ್ಲಿದ್ದಾರೆ. 

      ಮಹಾರಾಷ್ಟ್ರ ಅರಣ್ಯಪ್ರದೇಶಗಳಿಂದ ಹರಿದು ಬರುವದು ಘಟಪ್ರಭಾ ನದಿಯ ನೀರು ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಕಟ್ಟಲಾದ ಹಿಡಕಲ್ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರು ಹುನ್ನೂರು ಗ್ರಾಮದ ಬಳಿಯ ಘಟಪ್ರಭಾ ನದಿಯ ಹಿನ್ನೀರಿನಲ್ಲಿ‌ ವಿಠಲ ದೇವನ ಮಂದಿರವು ಮುಳುಗಡೆಯಾಗುತ್ತದೆ. 

    ಬಳಿಕ ಬೇಸಿಗೆಯ ದಿನಗಳಲ್ಲಿ ಘಟಪ್ರಭಾ ನದಿ‌ನೀರನ್ನು ಮುಂದಿನ ಊರುಗಳಿಗೆ ಘಟಪ್ರಭಾ ನದಿ ಮೂಲಕ ಹಾಗೂ ಕಾಲುವೆಗಳ ಮೂಲಕ ನೀರು ಹರಿಸಿದಾಗ ಇದರಿಂದ ಜಲಾಶಯದಲ್ಲಿ ನೀರಿನಮಟ್ಟವು ಅತಿಯಾಗಿ ಕಡಿಮೆ ಆದಾಗ ಹುನ್ನೂರು ವಿಠಲ ದೇವನ ಮಂದಿರ ಹಾಗೂ ಮೂರ್ತಿಯ ದರ್ಶನ ಭಾಗ್ಯವು ಭಕ್ತರಿಗೆ ದೊರೆಯುತ್ತದೆ. 

    ಅದೇ ರೀತಿಯಾಗಿ ಸದ್ಯ ಹಿಡಕಲ್ ಜಲಾಶಯದ ಹಿನ್ನೀರು ಕಡಿಯಾಗಿದ್ದು, ನೀರಿನಲ್ಲಿ ಮುಳಗಡೆಯಾಗಿದ್ದ ವಿಠಲನ ದೇವಸ್ಥಾನವು ಅರ್ಧ ಬಾಗ ತೆರವುಗೊಂಡಿದ್ದು, ಜನರು ಮತ್ತೆ ವಿಠಲನ ಮಂದಿರ ನೋಡಲು ತೆರಳುವಂತಾಗಿದೆ. 

     ಮುಂಬರುವ ದಿನಗಳಲ್ಲಿ‌ ಮುಂಗಾರು ಮಳೆ ಒಂದು ವೇಳೆ ಲೇಟಾಗಿ ಆಗಮಿಸಿದರೆ ವಿಠಲನ ದರ್ಶನ ಬಾಗ್ಯ ಲಭ್ಯವಾಗಲಿದೆ. 

ಸುದ್ದಿ ಓದಿ