ದಿ. 28 ಕ್ಕೆ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಹಿಂದಕ್ಕೆ
ಲೋಕದರ್ಶನ ವರದಿ
ಕಾಗವಾಡ 24 : ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ ಬೆನ್ನಲ್ಲೆ ತಾಲೂಕಿನ ರೈತರು ಪಕ್ಷಾತೀತವಾಗಿ ದಿ. 28 ರಂದು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಕೈ ಬೀಡಲಾಗಿದೆ ಎಂದು ಯುವ ಮುಖಂಡ ಜ್ಯೋತಿಕುಮಾರ ಪಾಟೀಲ ತಿಳಿಸಿದ್ದಾರೆ. ಅವರು, ಗುರುವಾರ ದಿ. 24 ರಂದು ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಾಗವಾಡ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟ ಹಿನ್ನಲೆಯಲ್ಲಿ ಕೂಡಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿಬೇಕು.
ಇಲ್ಲವಾದರೇ ಸೋಮವಾರ ದಿ. 28 ರಂದು ತಾಲೂಕಿನ ಎಲ್ಲ ರೈತರು ಸೇರಿ, ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಮುಖಂಡರಾದ ಎಂ.ಬಿ. ಉದಗಾವೆ, ಸುಧೀರ ಕರವ, ಶೀತಲ ಹೇರ್ಲೆಕರ, ಆದಿನಾಥ ಕರವ, ಸಿದ್ದು ವಡೆಯರ, ಬಾಳು ಕಲ್ಲೋಳಿ, ಜನಾರ್ಧನ ಧೊಂಡಾರೆ, ಅಲ್ಲಾಭಕ್ಷ ಮುಲ್ಲಾ, ಅಪ್ಪಾಸಾಬ ಗುಮಟೆ, ಗಣೇಶ ಕೋಳೆಕರ, ಬಾಬಾಸಾಬ ಕೊತ್ತಲಗಿ, ಗೌರೇಶ ಪಾಟೀಲ, ರಾಹುಲ ಕಾಂಬಳೆ, ಮಂಜು ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.