ಜಮ್ಮು ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹುಕ್ಕೇರಿ ತಾಲೂಕಿನ ಯೋಧ ಹೃದಯಾಘಾತದಿಂದ ವಿಧಿವಶ

ಜಮ್ಮು ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹುಕ್ಕೇರಿ ತಾಲೂಕಿನ ಯೋಧ ಹೃದಯಾಘಾತದಿಂದ ವಿಧಿವಶ

ಬೆಳಗಾವಿ, ಅ, 6 : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಯೋಧನೋರ್ವ ಜಮ್ಮುಕಾಶ್ಮೀರ್ ದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

     ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಶಿವಾನಂದ ಬಾಬು ಸಿರಗಾಂವಿ (42) ಮೃತಪಟ್ಟಿರುವ ಯೋಧನಾಗಿದ್ದು, ಇವರು ಶ್ರೀನಗರ 55 RR ಬೇಟಾಲಿಯಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತ ಯೋಧ ಶಿವಾನಂದ ಇವರು ತಮ್ಮ ಹಿಂದೆ ಪತ್ನಿ ಹಾಗೂ 2 ಗಂಡು ಮಕ್ಕಳು ತಾಯಿ ಸೇರಿದಂತೆ ಅಪಾರ ಬಂಧುಗಳನ್ನು ಹೊಂದಿದ್ದರು. 

   ಮೃತಯೋಧ ಶಿವಾನಂದ ಸಿರಗಾಂವಿ ಅವರ ಪ್ರಾರ್ಥಿವ ಶರೀರವು ಶುಕ್ರವಾರ ಸಂಜೆ ಅಥವಾ ಶನಿವಾರ ಮೃತ ದೇಹ ಸ್ವಗ್ರಾಮ ಬಡಕುಂದ್ರಿ ಗ್ರಾಮಕ್ಕೆ ಬರುವ ನಿರೀಕ್ಷೆ ಇದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಸುದ್ದಿ ಓದಿ