ಬೆಳಗಾವಿ ಕನ್ನಡ ಹಬ್ಬಕ್ಕೆ ಹುಕ್ಕೇರಿ ಹಿರೇಮಠದಿಂದ ಸಿದ್ದವಾಗುತ್ತಿವೆ ಲಕ್ಷ ಹೋಳಿಗೆ : 150 ಮಹಿಳೆಯರು, 50 ಪುರುಷರಿಂದ ಭರದಿಂದ ನಡೆದ ತಯಾರಿಕೆ ಕಾರ್ಯ, 5000 ಹೋಳಿಗೆ ಸಿದ್ದ
ಬೆಳಗಾವಿ, ಅ, 31: ವಿವಿಧ ಕನ್ನಡ ಸಂಘಟನೆಗಳು ಮತ್ತು ಸರಕಾರ ಈ ಬಾರಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡುವ ತವಕದಲ್ಲಿ ಇದ್ದು, ಬೆಳಗಾವಿಯ ರಾಜ್ಯೋತ್ಸವ (ಕನ್ನಡ ಹಬ್ಬ) ದಲ್ಲಿ ಭಾಗಿಯಾಗುವವರ ಭೋಜನಕ್ಕಾಗಿ ಹುಕ್ಕೇರಿ ಹಿರೇಮಠ ದಿಂದ ಒಂದ ಲಕ್ಷ ಹೋಳಿಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಲಕ್ಷ ಹೋಳಿಗೆ ತಯಾರಿಕೆ ಕಾರ್ಯ ಭರದಿಂದ ಸಾಗಿದೆ.

ಬೆಳಗಾವಿಯ ಸರ್ದಾರ್ ಕಾಲೇಜು ಆಟದ ಮೈದಾನದಲ್ಲಿ ಇಂದಿನಿಂದ ಹುಕ್ಕೇರಿ ಹಿರೇಮಠದಿಂದ ಲಕ್ಷ ಹೋಳಿಗೆ ತಯಾರಿಕೆ ನಡೆಯುತ್ತಿದೆ. ಈ ಕಾರ್ಯದಲ್ಲಿ ಸುಮಾರು 150 ಜನ ಮಹಿಳೆಯರು ಹಾಗೂ ಸುಮಾರು 50 ಜನ ಪುರುಷರು ಹೋಳಿಗೆ ತಯಾಕೆ ಕಾರ್ಯ ನಡೆಸುತ್ತಿದ್ದಾರೆ. ಸೋಮವಾರ ಬೆಳಗಿನ ವರೆಗೆ ಸುಮಾರು 5 ರಿಂದ 6 ಸಾವಿರ ಹೋಳಿಗೆಗಳು ತಯಾರಾಗಿದ್ದು, ಮಂಗಳವಾರ ವರೆಗೆ ಒಂದು ಲಕ್ಣ ಹೋಳಿಗೆ ಕನ್ನಡಿಗರ ಭೋಜನಕ್ಕೆ ಸಿದ್ದವಾಗಲಿವೆ.

ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಶ್ರೀಗಳು ಬೆಳಗಾವಿಯ ಕನ್ನಡ ಹಬ್ಬ( ರಾಜ್ಯೋತ್ಸವ) ದಲ್ಲಿ ಭಾಗಿಯಾಗುವ ಎಲ್ಲ ಕನ್ನಡಿಗರಿಗೆ ಹೋಳಿಗೆ ಊಟ ಮಾಡಿಸುವ ಮಹಾನ ಕಾರ್ಯಕ್ಕೆ ಮುಂದಾಗಿದ್ದು, ಈ ಕಾರ್ಯದಿಂದ ಕನ್ನಡಿಗರ ಮನ ಗೆಲ್ಲುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ.