ದೇಶಭಕ್ತರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ: ಹೊಸಮನಿ

ದೇಶಭಕ್ತರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ: ಹೊಸಮನಿ

ಬೆಳಗಾವಿ, ಆಗಷ್ಟ್, 15: ದೇಶಕ್ಕಾಗಿ ಮಹನಿಯರು ಬೆವರು ಹರಿಸಿ ಗಳಿಸಿದ ಸ್ವಾತಂತ್ರ್ಯದ ಬಗ್ಗೆ ಇಂದಿನ ಯುವ ಪೀಳಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು  ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಘೂಳಪ್ಪಾ ಹೊಸಮನಿ ಹೇಳಿದರು.

ಅವರು  ಇಂದು 74 ನೆಯ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಹಾಗೂ ಭಾವಚಿತ್ರಗಳ ಪೂಜೆ ನೇರವೇರಿಸಿ ಮಾತನಾಡುತ್ತ ದೇಶ ನನಗೆ ಏನು ಕೊಟ್ಟಿದೆ ಎನ್ನುವುದನ್ನು ಬಿಟ್ಟು ನಾನು ದೇಶಕ್ಕೆ ಏನು ಕೊಡಬಹುದು ಎಂಬುವುದರ ಚಿಂತನೆ ಇಂತಹ ಆರ್ಥಿಕ ಸಂಕಷ್ಟ ಸಮಯದಲ್ಲಿ ಅತ್ಯಗತ್ಯವಿದೆ. 

ಬುಡಾ ಆಯುಕ್ತ ಪ್ರೀತಂ ನಸ್ಲಾಪೂರೆ  ಮಾತನಾಡಿ ಸ್ವಾತಂತ್ರ್ಯದ ಸಂಪೂರ್ಣ ಇತಿಹಾಸವನ್ನು ಅರಿತು ದೇಶದ ಅಭಿವೃದ್ಧಿಯ ಬಗ್ಗೆ ಆಲೋಚಿಸಬೇಕಿದೆ ಎಂದರು. ಬುಡಾ ಸಿಬ್ಬಂದಿ ವರ್ಗ ಹಾಜರಿದ್ದರು.

ಸುದ್ದಿ ಓದಿ