ಭೀಕರ ರಸ್ತೆ ಅಪಘಾತ, ಮದುವೆ ಆಗಿ 10 ದಿನದಲ್ಲಿ ಮಸಣ ಸೇರಿದ ನವ ಜೋಡಿ : ಮೂಡಲಗಿ ತಾಲ್ಲೂಕಿನಲ್ಲಿ ದುರ್ಘಟನೆ
ಬೆಳಗಾವಿ : ಲಾರಿ ಹಾಗೂ ಕಾರ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿಗಗಳು ಸ್ಥಳದಲ್ಲೇ ಸಾವನ್ನಪಿದ್ದು, ಮಹಿಳೆಯೋರ್ವಳು ಹಾಗೂ ಓರ್ವ ಪುರಷ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಬಳಿ ಇಂದು ಸಂಭವಿಸಿದೆ.
ಹಳ್ಳೂರ ಬಳಿಯ ನಿಪ್ಪಾಣಿ - ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಶನಿವಾರದ ಸಂಜೆ ಈ ದುರ್ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದವರಾದ ಇಂದ್ರಜೀತ ಡಮ್ಮನಗಿ (27) ಕಲ್ಯಾಣಿ ಡಮ್ಮನಗಿ (24) ಇವರು ಮೃತಪಟ್ಟ ದುರ್ಧೈವಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಅಪಘಾತದಲ್ಲಿ ಗಾಯಗೊಂಡ ಮೃತನ ತಂದೆ ತಾಯಿಯರನ್ನು ಮೂಡಲಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇವಲ 10 ದಿನಗಳ ಹಿಂದೆಯಷ್ಟೆ ವಿವಾಹವಾಗಿದ್ದ ಇಂದ್ರಜೀತ ಮತ್ತು ಕಲ್ಯಾಣಿ ಕುಟುಂಬದವರೊಂದಿಗೆ ಬದಾಮಿಯ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಮರಳಿ ಮನೆಗೆ ತೆರಳುವಾಗ
ಹಳ್ಳೂರ ಗ್ರಾಮದ ಬಳಿ ಲಾರಿ ಹಾಗೂ ಕಾರ್ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ದಂಪತಿಗಳು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೂಡಲಗಿಯ ಪೋಲಿಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.