ರಾಮದುರ್ಗ

ಗುಣಾತ್ಮಕ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ: ಶಾಸಕ ಮಹಾದೇವಪ್ಪ ಯಾದವಾಡ

ಗುಣಾತ್ಮಕ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ: ಶಾಸಕ ಮಹಾದೇವಪ್ಪ ಯಾದವಾಡ

ರಾಮದುರ್ಗ 10:  ಈ ಭಾಗದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಬೇರೆ ಹೋಗದೆ ಇಲ್ಲಿಯೇ ಉನ್ನತ ಕೋರ್ಸಗಳ ಪರಿಚಯಿಸಿ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ, ಹಾಗೆ ಬೋಧಕ ವೃಂದವು ಸಹ ಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರಕಾರಿ ಮಹಾವಿದ್ಯಾಲಯಗಳಿಗೆ ಬರಲು ಶ್ರಮವಹಿಸಬೇಕು ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಪೂರೈಸಲು ಸಿದ್ಧ ಎಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದರು. 

ಪಟ್ಟಣದ ಈರಮ್ಮಾ ಶಿವಲಿಂಗಪ್ಪ ಯಾದವಾಡ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಎಸ್‍ಡಿಪಿ ಯೋಜನೆಯಡಿಯಲ್ಲಿ ಮಂಜೂರಾದ ಹೆಚ್ಚವರಿ ಕೊಠಡಿಗಳ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಸಂಸ್ಥೆಯ ಸಿಬ್ಬಂದಿಯ ಶ್ರಮವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಕಾಲೇಜ ಅಭಿವೃದ್ದಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಇನ್ನೂ ಅವಶ್ಯವಿರುವ ಹೆಚ್ಚುವರಿ ಕೊಠಡಿಗಳು ಮತ್ತು ಇತರ ಸೌಲಭ್ಯ ಒದಗಿಸಲು ನಾನು ಶ್ರಮಿಸುತ್ತೆನೆ ಎಂದು ಹೇಳಿದರು. 

ಪಟ್ಟಣದಿಂದ ಸುಮಾರು 2 ಕಿಮೀ ದೂರವಿರುವ ಈರಮ್ಮಾ ಶಿವಲಿಂಗಪ್ಪ ಯಾದವಾಡ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಕ್ಕೆ ಗ್ರಾಮಾಂತರ ಪ್ರದೇಶದಿಂದಾ ಬರುವ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಗೆ ಉಪಹಾರ ಮಾಡಲು ಕಾಲೇಜ ಆವರಣದಲ್ಲಿ ಒಂದು ಕ್ಯಾಂಟೀನ ನಿರ್ಮಿಸಬೇಕೆಂದು ಕಾಲೇಜ ಸಿಬ್ಬಂದಿ ಮನವಿ ಮಾಡಿದರು. 

ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡುತ್ತಾ ಖಾಸಗಿ ಸಂಸ್ಥಗಳಿಗೆ ಸಮರ್ಥವಾಗಿ ಸ್ಪರ್ಧೆ ನೀಡುತ್ತಾ ಒಳ್ಳೆಯ ಮೂಲಸೌಕರ್ಯ ಹೊಂದಿದ  ಈರಮ್ಮಾ ಶಿವಲಿಂಗಪ್ಪ ಯಾದವಾಡ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಾಧನೆ ಶ್ಲಾಘನೀಯವಾದುದು ಎಂದು ನುಡಿದ ಅವರು,  ಸ್ಫರ್ಧಾತ್ಮಕ ಪರಿಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಕೇಂದ್ರವನ್ನು ತಾಲೂಕಿನ ತೆರೆಯಬೇಕೆಂದು ಶಾಸಕರಿಗೆ ಮನವಿ ಮಾಡಿದರು.  

ಜಿಲ್ಲಾ ಪಂಚಾಯತ ಸದಸ್ಯ ರೇಣಪ್ಪ ಸೋಮಗೊಂಡ, ಸಿಡಿಸಿ ಸದಸ್ಯರಾದ ರಾಜೇಶ ಬೀಳಗಿ, ;ಪ್ರೊ. ಹೊನ್ನೂಂಗರ ಮಾತನಾಡಿದರು. ಘಟಕನೂರ ಗ್ರಾಪಂ ಅಧ್ಯಕ್ಷ ಈರಪ್ಪ ಕೂಗಿ, ಪುರಸಭೆ ಉಪಾಧ್ಯಕ್ಷರಾದ ರಾಘು ದೊಡಮನಿ, ಸದಸ್ಯರಾದ ರಾಜು ಬೆಂಬಳಗಿ, ಪ್ರೊ ರಾಜಶೇಖರ ಜಿರಂಕಳಿ, ಪ್ರಾಚಾರ್ಯ ಡಾ. ಆನಂದ ಲಾಳಸಂಗಿ, ಡಾ. ಮಹಾಂತೇಶ ಹೊಳಿಮಠ, ಡಾ. ಶಂಕುಂತಲಾ ಅಜ್ಜನ್ನವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಓದಿ