ಹಾಕಿ ವಿಜಯ: ರಾಷ್ಟ್ರಪತಿ - ಪ್ರಧಾನಿ ಅಭಿನಂದನೆ

ಹಾಕಿ ವಿಜಯ:  ರಾಷ್ಟ್ರಪತಿ - ಪ್ರಧಾನಿ  ಅಭಿನಂದನೆ

ನವದೆಹಲಿ,  ಅ 5 ಒಲಂಪಿಕ್ಸ್ ನಲ್ಲಿ ಜರ್ಮನಿ ತಂಡವನ್ನು ಮಣಿಸಿ 41 ವರ್ಷದ ಬಳಿಕ ಕಂಚಿನ ಪದಕ ಗೆದ್ದಿರುವ ಭಾರತ ಹಾಕಿ ತಂಡಕ್ಕೆ ರಾಷ್ಟ್ರಪತಿ ರಾಮನಾಥ  ಕೋವಿಂದ್,    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ   ಪ್ರಧಾನಿ ನರೇಂದ್ರ  ಮೋದಿ ಅಭಿನಂದಿಸಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿ, ಐತಿಹಾಸಿಕ! ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುವಂತಹ ದಿನ. ಕಂಚಿ ಪದಕ ಗೆದ್ದ ಪರುಷರ  ಹಾಕಿ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
 
ಇತಿಹಾಸ ನಿರ್ಮಿಸಿರುವ ಭಾರತೀಯ  ತಂಡಕ್ಕೆ ಶುಭ ಕೋರಿದ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ ' 41 ವರ್ಷಗಳ ನಂತರ ಹಾಕಿಯಲ್ಲಿ  ಕಂಚಿನ  ಪದಕ ಗೆದ್ದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು.  ಎಂದು ಹೇಳಿದ್ದಾರೆ . ಈ ಐತಿಹಾಸಿಕ ವಿಜಯ  ಹಾಕಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಮತ್ತು ಯುವಕರು  ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತಷ್ಟು ಪ್ರೇರೆಣೆ ನೀಡಲಿದೆ  ಎಂದು ಹೇಳಿದ್ದಾರೆ.

ಸುದ್ದಿ ಓದಿ