ಹಾಕಿ: ಸೆಮಿಫೈನಲ್ ನಲ್ಲಿ ಭಾರತಕ್ಕೆ ನಿರಾಸೆ, ಚಿಗುರಿದ ಕಂಚಿನ ಆಸೆ

ಹಾಕಿ: ಸೆಮಿಫೈನಲ್ ನಲ್ಲಿ ಭಾರತಕ್ಕೆ ನಿರಾಸೆ, ಚಿಗುರಿದ ಕಂಚಿನ ಆಸೆ

 
ಟೋಕಿಯೊ, ಆ.3 - ಕೊನೆಯ ಅವಧಿಯಲ್ಲಿ ಬೆಲ್ಜಿಯಂ ತಂಡ ಭರ್ಜರಿ ಪ್ರದರ್ಶನ ನೀಡಿದ ಫಲವಾಗಿ ಇಲ್ಲಿ ನಡೆದ ಒಲಿಂಪಿಕ್ಸ್ ಪುರುಷರ ಹಾಕಿ ಸೆಮಿಫೈನಲ್ಸ್ ಪಂದ್ಯದಲ್ಲಿ ಮನ್ ಪ್ರೀತ್ ಸಿಂಗ್ ಪಡೆಯನ್ನು ಮಣಿಸಿ, ಫೈನಲ್ ಗೆ ಪ್ರವೇಶ ಪಡೆಯಿತು.
 
ಮಂಗಳವಾರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದರೂ, ಗೆಲುವು ದಾಖಲಿಸುವಲ್ಲಿ ವಿಫಲವಾಯಿತು. ಉಪಾಂತ್ಯದಲ್ಲಿ ಭಾರತ 2-5 ರಿಂದ ಬೆಲ್ಜಿಯಂ ವಿರುದ್ಧ ನಿರಾಸೆಗೊಂಡಿತು.
 
ಮೊದಲಾವಧಿಯ ಆರಂಭದಲ್ಲೇ ಭಾರತಕ್ಕೆ ಬೆಲ್ಜಿಯಂ ಪೆಟ್ಟು ನೀಡಿತು. ಈ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಎದುರಾಳಿ ತಂಡ ಬಳಸಿಕೊಂಡು ಅಬ್ಬರಿಸಿತು. ಇದೇ ಅವಧಿಯಲ್ಲಿ ಹರ್ಮನ್ ಪ್ರೀತ್ ಸಿಂಗ್ ಸೊಗಸಾದ ಆಟವಾಡಿ ಅಂಕ ಗಳಿಸಿತು. ಪರಿಣಾಮ ಉಭಯ ತಂಡಗಳು ಈ ಅವಧಿಯಲ್ಲಿ ಸಮಬಲ ಸಾಧಿಸಿತು. ಇದೇ ಅವಧಿಯಲ್ಲಿ ಮಂದೀಪ್ ಸಿಂಗ್ ಸೊಗಸಾದ ಗೋಲು ಗಳಿಸಿ ಅಂತರವನ್ನು ಹೆಚ್ಚಿಸಿತು.
 
ಎರಡನೇ ಅವಧಿಯಲ್ಲಿ ಉಭಯ ತಂಡಗಳು ಸೊಗಸಾದ ಆಟದ ಪ್ರದರ್ಶನ ನೀಡಿದವು. ಅಲ್ಲದೆ ಎದುರಾಳಿ ತಂಡಕ್ಕೆ ಗೋಲು ನೀಡದಂತೆ ತಡೆಯುವಲ್ಲಿ ಭಾರತ ತಂಡ ಆರಂಭದಲ್ಲಿ ಸಫಲವಾಯಿತು. ಆದರೆ, 25ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ಅಲೆಕ್ಸಾಂಡರ್ ಹೆನ್ರಿಕ್ಸ್ ಗೋಲು ಸಿಡಿಸಿ ಅಬ್ಬರಿಸಿದರು. ಪರಿಣಾಮ ಎರಡು ತಂಡಗಳ ಗೋಲಿನ ಸಂಖ್ಯೆ ಸಮವಾಯಿತು.
 
ಮೂರನೇ ಅವಧಿಯಲ್ಲಿ ಗೋಲುಗಳು ಬಾರದೆ ಇದ್ದಿದ್ದರಿಂದ ಪಂದ್ಯ ರೋಚಕತೆ ಹೆಚ್ಚಿಸಿತು. ಕೊನೆಯ ಅವಧಿಯಲ್ಲಿ ಭಾರತ ತಂಡ ಮಾಡಿದ ಕೆಲವು ತಪ್ಪುಗಳ ಲಾಭ ಪಡೆದ ಬೆಲ್ಜಿಯಂ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿ ಗೋಲು ದಾಖಲಿಸಿತು. ಅಲ್ಲದೆ ಈ ಅವಧಿಯಲ್ಲಿ ಮೂರು ಗೋಲು ಬಾರಿಸಿ ಆರ್ಭಟಿಸಿತು.

ಸುದ್ದಿ ಓದಿ