ಸಚಿವ ಈಶ್ವರಪ್ಪ ಮೃತ ಸಂತೋಷಗೆ ಕಾಮಗಾರಿ ಆರಂಭ ಮಾಡು ಆಮೇಲೆ ಸರಿ ಮಾಡುವೆ ಅಂದಿದ್ದು ನಿಜಾ : ಗ್ರಾಮ ಅಧ್ಯಕ್ಷ ಮನ್ನೋಳಕರ

ಸಚಿವ ಈಶ್ವರಪ್ಪ ಮೃತ ಸಂತೋಷಗೆ ಕಾಮಗಾರಿ ಆರಂಭ ಮಾಡು ಆಮೇಲೆ ಸರಿ ಮಾಡುವೆ ಅಂದಿದ್ದು ನಿಜಾ : ಗ್ರಾಮ ಅಧ್ಯಕ್ಷ ಮನ್ನೋಳಕರ

ಬೆಳಗಾವಿ, ಏ, 13 : ನಾನು ಮೃತ ಸಂತೋಷ ಪಾಟೀಲ್ ಜೊತೆಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಎರಡು ಬಾತಿ ಭೇಟಿಯಾಗಿದ್ದು ನಿಜಾ. ಮೊದಲುಕೆಲಸ ಆರಂಭಿಸಿ, ಉತ್ತಮವಾಗಿ ಕೆಲಸ ಮಾಡಿ ಆಮೇಲೆ ಎಲ್ಲವನ್ನು ನಾನು ಸರಿ ಮಾಡಿ ಕೋಡುವದಾಗಿ ಸಚಿವ ಈಶ್ವರಪ್ಪ  ಹೇಳಿದ್ದರು ಎಂದು  ಗುತ್ತಿಗೇದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಬಗ್ಗೆ ಹಿಂಡಲಗಾ ಗ್ರಾಮ ಪಂಚಾಯತ ಅಧ್ಯಕ್ಷ ನಾಗೇಶ ಮನ್ನೋಳಕರ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

      ಹಿಂಡಲಗಾ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಗೆ ಆಗಮಿಸಿ ಮಾಧ್ಯಮ ಗಳ ಜೊತೆ ಮಾತನಾಡಿದ ಅವರು, ಹಿಂಡಲಗಾ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯು 100 ವರ್ಷಗಳ ಬಳಿಕ ನಡೆಯುತ್ತಿತ್ತು. ಅಲ್ಲದೆ ಗ್ರಾಮದ ಅಭಿವೃದ್ಧಿಗಾಗಿ ರಸ್ತೆ ಕಾಮಗಾರಿಗಾಗಿ ನಾನು ಸಂತೋಷ ಪಾಟೀಲ್ ಗೆ ನಾನೇ ಪತ್ರ ಕೊಟ್ಟಿದ್ದೆ.ಗ್ರಾಮದ 108 ರಸ್ತೆ ಕಾಮಗಾರಿಗಳು ಸಂಪೂರ್ಣ ಮುಗಿದಿವೆ. ಆದರೆ ಅವರ ರಸ್ತೆ ನಿರ್ಮಾಣದ ಬಿಲ್ ಸಿಕ್ಕಿರಲಿಲ್ಲ. ಸಂತೋಷ ಪಾಟೀಲ್ ಬಾಕಿ ಹಣಕ್ಕಾಗಿ ಓಡಾಡುತ್ತಿದ್ದರು ಎಂದು ಹೇಳಿದರು.

      ಸಂತೋಷ ಪಾಟೀಲ್ ಹಾಗೂ ಸಚಿವ ಕೆ.ಎಸ್ ಈಶ್ವರಪ್ಪ ಈ ಬಗ್ಗೆ ಚರ್ಚೆ ಮಾಡಿದ್ದರು. ಆದರೆ ಸಂತೋಷ ಪಾಟೀಲ ಅವರ ಬಳಿ ವರ್ಕ್ ಆರ್ಡರ್ ಇತ್ತು ಇಲ್ಲವೋ ನನಗೆ ಗೊತ್ತಿಲ್ಲ. ಸಂತೋಷ ಪಾಟೀಲ್ ಗ್ರಾಮದಲ್ಲಿ ಕೆಲಸ ಮಾಡಿದ್ದು ನೂರಕ್ಕೆ ನೂರರಷ್ಟು ಹಣ ಸಿಗಬೇಕು. ಅವರ ಕುಟುಂಬಕ್ಕೆ ಆದ್ರು ಹಣ ಸಿಗಬೇಕು ಎಂದು ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಹೇಳಿಕೆ ನೀಡಿದರು.

ಸುದ್ದಿ ಓದಿ