ಮಹಲಿಂಗಪುರ

ಲಿಂಗೈಕ್ಯ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

ಲಿಂಗೈಕ್ಯ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

ಮಹಾಲಿಂಗಪುರ: ಸಮೀಪದ ಬೆಳಗಲಿ ಪಟ್ಟಣದ ಕಾರ್ಯಕ್ರಮದ ನೇತೃತ್ವ ವಹಿಸಿದ ಕಜಾಪ ಅಧ್ಯಕ್ಷರಾದ ರಾಘವೇಂದ್ರ ನೀಲಣ್ಣವರ ರವರು ನಡೆದಾಡುವ ದೇವರು ಎಂದೇ ಖ್ಯಾತರಾದ ಜ್ಞಾನ ಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರು ವೈಕುಂಠ ಏಕಾದಶಿ ಎಂದೇ ಶ್ರೀಹರಿಯಲ್ಲಿ ಐಕ್ಯರಾಗಿದ್ದಾರೆ.  

ಅವರು ನಡೆ ನುಡಿಯಲ್ಲಿ ಏಕತೆಯನ್ನು ಸಾರಿದ ದೈವಿ ಸಂಭೂತರು,ಗೌರವ ಮಾನ ಸನ್ಮಾನ ಪುರಸ್ಕಾರಗಳಿಗೆ ಬಹಳಷ್ಟು ದೂರರಾಗಿ,ಅವರ ಜೀವನವೇ ಮಾನವ ಕುಲಕ್ಕೆ ಸರಳತೆಯ ನಿಸ್ಕಲ್ಮಷ ಪ್ರೀತಿ ಪ್ರೇಮಭಾವನೆಯ ಸಂದೇಶ ಸಾರಿದ ಶತಮಾನದ ಶ್ರೇಷ್ಠ ಸಂತ, ಶ್ರೀಗಳು ನಮ್ಮನ್ನೆಲ್ಲ ಅಗಲಿದರೂ ಅವರು ನೀಡಿದ ಮಾರ್ಗದರ್ಶಿಯ ಅದೆಷ್ಟು ಪ್ರವಚನ ವಚನಾಮೃತಗಳು ಈ ಪ್ರಕೃತಿ ಮೇಲೆ ಶಾಶ್ವತವಾಗಿ ಮಾನವಕುಲಕ್ಕೆ ದಾರೀದೀಪಗಳಾಗಿವೆ. ಪಂಚಭೂತಗಳಿಂದ ನಿರ್ಮಾಣಗೊಂಡ ಶರೀರವನ್ನು ಪಂಚಭೂತಗಳಿಗೆ ತ್ಯಾಗ ಮಾಡಿ.ಬರಿಗೈಯಿಂದ ಬಂದು ಬರಿದಾಗಿ ಹೋಗುವ, ಬಯಲು ಬಯಲಾದ ಈ ಜೀವನದಲ್ಲಿ ಎನಗೆ ಯಾವ ಮಂದಿರ ವೃತ್ತಗಳನ್ನು ಕಟ್ಟಬೇಡಿ ಎಂದು ಗುರುಪೂರ್ಣಿಮೆ ಅಂದು ವಚನ ತೆಗೆದುಕೊಂಡು. ಸಾವಿನಲ್ಲಿಯೂ ಸಾವಿನ ನಂತರವು ಸರಳತೆಯ ಸಹಕಾರ ಮೂರ್ತಿಯ ಶ್ರೇಷ್ಠ ಸಂತರಾಗಿ ಹೋಗಿದ್ದಾರೆ. 

ಅವರ ಜೀವಂತಿಕೆಯನ್ನು ಕಾಣುವುದಾದರೆ ಅವರು ನೀಡಿದ ವಚನಾಮೃತ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸಿದಂತಾಗುತ್ತದೆ ಎಂಬ ವಿಚಾರಗಳನ್ನು ನುಡಿ ನಮನದಲ್ಲಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಾದ ಮಹಾಂತೇಶ ಕುಂಬಾರ ಅವರು ಶ್ರೀಗಳ ಕುರಿತು ಕಾವ್ಯವಾಚನ ಮಾಡಿದರು. 

ತಾಲೂಕ ಕಜಾಪ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ ಬಟ್ಯಾಟೆಪ್ಪಗೋಳ, ಪ್ರವಚನಕಾರರಾದ ಮಹದೇವ ಕಂಬಾರ, ಕಲಾವಿದರಾದ ರಾಮಪ್ಪ ಕೋತ, ರಮೇಶ ಸೋನೋನೆ,ಮತ್ತು ಚಿಕ್ಕಯ್ಯ ಮಠಪತಿ, ಹನುಮಂತ ಹೂಗಾರ,ಸಂತೋಷ್ ಮಲಾವಡಿ,ಅನಿಲ್ ಮಲಾವಡಿ,ಬಸು ಗೌರಣ್ಣವರ. ಬಸವರಾಜ ಅಂಗಡಿ,ಶಿವಾನಂದ ಚೌದ್ರಿ,ಹಂಪಣ್ಣ ಮೈತ್ರಿ, ಮಹಾಲಿಂಗ ಕುಳ್ಳಿ,ಬಸವರಾಜ ಕೊಣ್ಣೂರ,ಶಿವಾನಂದ ಬಾವಿಮನಿ ಹಾಗೂ ಪಂಚಾಯತಿ ಸಿಬ್ಬಂದಿಗಳು,ಬೆಳಗಲಿಯ ಯುವಕ ಮಿತ್ರರು,ಕಸಾಪ, ಕಜಾಪ,ಮಸಾಪ ಸ್ಥಳೀಯ ಸಂಘಗಳ ಪದಾಧಿಕಾರಿಗಳು, ಊರಿನ ಹಿರಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ