ಎಲಬುರ್ಗ

ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರ

ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರ

ಲೋಕದರ್ಶನ ವರದಿ 

ಯಲಬುರ್ಗಾ 21: ನರೇಗಾ ಕೂಲಿಕಾರರು ಆರೋಗ್ಯವಂತರಾಗಿ ಕೆಲಸ ಮಾಡಲು ಆರೋಗ್ಯ ತಪಾಸಣೆ ಸಹಕಾರಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಮನಿ ಹೇಳಿದರು. 

  ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ನೆಚ್ಚಿನ ನಾಯಕರನ್ನು ಆಯ್ಕೆಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಬಡ ಕೂಲಿಕಾರರಿಗೆ ಅಕುಶಲ ಕೂಲಿ ಕೆಲಸ ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ  ಪ್ರಸಕ್ತ  ವರ್ಷದಲ್ಲಿ ರೂ. 7 ಅನ್ನು ಹೆಚ್ಚಿಸಿ ರೂ. 316/-  ಕೂಲಿಯನ್ನು ನೀಡಲಾಗುತ್ತದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಹಣವನ್ನು ನೀಡಲಾಗುತ್ತಿದೆ.  

      ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಯೋಜನೆಯಲ್ಲಿ ತೋಡಗಿಸಿಕೊಳ್ಳಬೇಕು, ಬೇಸಿಗೆಯ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲಸದ ಪ್ರಮಾಣದಲ್ಲಿ ಕಡಿತ ಮಾಡಿ ಆಯುಕ್ತರು ಆದೇಶ ಮಾಡಿದ್ದಾರೆ. ಮತ್ತು ಬೇಸಿಗೆಯ ಅವದಿಯಲ್ಲಿ ನಿರಂತರ ಕೆಲಸ ನೀಡಲಾಗುತ್ತದೆ, ಇದರೊಂದಿಗೆ ಪರಿಸರ ಸಂರಕ್ಷಣೆ ಆಗುತ್ತದೆ, ಭಾವಿ ಮತ್ತು ಬೋರ್ ವೆಲ್‌ಗಳು ಮಳೆಗಾಲ ಸಂದರ್ಭದಲ್ಲಿ ಮಳೆಯಾದರೆ ಭರ್ತಿಯಾಗುತ್ತವೆ ಎಂದರು.  

 ಕೂಲಿಕಾರರು ಯಾವುದೇ ಕೆಲಸ ಮಾಡಲು ಆರೋಗ್ಯವಂತರಾಗಿ ಇರಬೇಕಾಗುತ್ತದೆ ಅದಕ್ಕಾಗಿ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಭಿರ ಆಯೋಜನೆ ಮಾಡಿ ಕೂಲಿಕಾರರ ಆರೋಗ್ಯ ತಪಾಸಣೆಯನ್ನು ಮಾಡಲು ಸರ್ಕಾರ ಮುಂದಾಗಿದೆ.  ಸಾರ್ವಜನಿಕರು, ಕೂಲಿಕಾರರು ಯಾವುದೇ ಆಸೆ ಆಮಿಷೆಗಳಿಗೆ ಓಳಗಾಗದೇ ಎಲ್ಲರೂ ಕಡ್ಡಾಯವಾಗಿ ಮೇ-10 ರಂದು ಮತದಾನ ಮಾಡಬೇಕು, ಮತದಾನ ನಮ್ಮ ಸಂವಿದಾನ ನೀಡಿರುವ ಒಂದು ವರ ಅದನ್ನು ಹಬ್ಬದ ಸಂಭ್ರಮಾಚರಣೆಯಂದು ಭಾವಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾತನಾಡಿದರು.  

     ತಾಲೂಕಾ ಐ.ಇ.ಸಿ ಸಂಯೋಜಕರು ಮತದಾರರ ಪ್ರತಿಜ್ಞಾವಿಧಿ ಭೋಧನೆ ಮಾಡಿದರು. ಸ್ಥಳದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ, ಕಾರ್ಯದರ್ಶಿ ಶೇಖ್ರ​‍್ಪ ಚಿಂಚಿಲಿ, ವೈಧ್ಯಾಧಿಕಾರಿ ಪ್ರಕಾಶ, ಕೆ.ಎಚ್‌.ಪಿ.ಟಿ ಸಂಯೋಜಕರು, ನರೇಗಾ ಐ.ಇ.ಸಿ ಸಂಯೋಜಕರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಮತ್ತು ಕೂಲಿಕಾರರು ಹಾಜರಿದ್ದರು. 


ಸುದ್ದಿ ಓದಿ