ರಾಣೆಬೆನ್ನೂರ

ಕಾಮಗಾರಿ ಸ್ಥಳದಲ್ಲಿಯೇ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ

ಕಾಮಗಾರಿ ಸ್ಥಳದಲ್ಲಿಯೇ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ

ಲೋಕದರ್ಶನ ವರದಿ 

ರಾಣೆಬೆನ್ನೂರು  25: ತಾಲೂಕಿನ ನದಿ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟಿ ಗ್ರಾಮದಲ್ಲಿ   ನಡೆದ   ನರೇಗಾ ಯೋಜನೆಯಡಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರವು ಆಯೋಜಿಸಲಾಗಿತ್ತು, ತಪಾಸಣಾ ಶಿಬಿರ ಉದ್ಘಾಟಿಸಿದ  ಪಂಚಾಯಿತಿ ಆಡಳಿತಾಧಿಕಾರಿ ರವಿಕಿರಣ್ ಬಿ. ಆರ್‌.ಅವರು ಮಾತನಾಡುತ್ತಾ ಕಾರ್ಮಿಕರು ಆರೋಗ್ಯವಾಗಿದ್ದರೆ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ ಅವರ ಆರೋಗ್ಯದ ಕಡೆಗೆ ಗಮನ ಹರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದಾಗಬೇಕು. ಬೇಸಿಗೆ ಸಮಯದ ಇಂತಹ ಸಂದರ್ಭದಲ್ಲಿ  ಕೂಲಿ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಿದ್ದು, ಕೆಲಸದ ಜೊತೆಗೆ ಆರೋಗ್ಯ ತಪಾಸಣೆಯು ಅತಿ ಮುಖ್ಯವಾಗಿದೆ ಎಂದರು.  

ನರೇಗಾದಡಿ ದುಡಿಯುವ ಕೈಗಳಿಗೆ ಕೆಲಸ ಕೊಡುವುದರ ಜೊತೆಗೆ ಆರೋಗ್ಯ ತಪಾಸಣೆ ಮಾಡಿಸುವ ಜವಾಬ್ದಾರಿಯು ಸಹ ನಮ್ಮ ಪಂಚಾಯಿತಿ ಮೇಲಿದೆ, ಅದಕ್ಕಾಗಿ ತಜ್ಞ ವೈದ್ಯರಿಂದ ಈ ಶಿಬಿರವನ್ನು ಏರಿ​‍್ಡಸಲಾಗಿದ್ದು, ಇದರ ಸದುಪಯೋಗವನ್ನು  ಪಡೆದುಕೊಳ್ಳಬೇಕೆಂದು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಶಶಿಧರ್ ಶೇಷಗಿರಿ, ಸಮುದಾಯ ಆರೋಗ್ಯ ನೀರೀಕ್ಷಕ ಶಿವರಾಜ್, ಆರೋಗ್ಯ ಅಧಿಕಾರಿ ಲೋಕೇಶ್, ತಾಲೂಕ ನರೇಗಾತಾಂತ್ರಿಕ ಸಂಯೋಕ ರವಿಕುಮಾರ್ ಯಾಳಗಿ, ತಾಂತ್ರಿಕ ಸಹಾಯಕ ಸಂತೋಷ್ ಐ. ಈ. ಸಿ, ಸಂಯೋಜಕ ದಿಂಗಾಲೇಶ್ ಅಂಗೂರ, ಬಿ.ಎಫ್‌. ಟಿ. ಹನುಮಂತ ಗೌಡ ಭರಮ ಗೌಡ್ರ, ಸೇರಿದಂತೆ  ಆಶಾ ಕಾರ್ಯಕರ್ತರು ಪಂಚಾಯತಿ ಸಿಬ್ಬಂದಿ 45 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ