ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ
ಯಲಬುರ್ಗಾ ಅಕ್ಟೋಬರ್ 03: ಪಟ್ಟಣದ 12 ನೇ ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳ ದಿಂದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಶನಿವಾರ ನಡೆಯಿತು.
ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶೇಖರ ಭಜಂತ್ರಿ ಅವರು ಮಕ್ಕಳ ಆರೋಗ್ಯ ಬಗ್ಗೆ ತಪಾಸಣೆ ನಡೆಸಿ, ಮಕ್ಕಳ ತೂಕ, ಎತ್ತರ, ಎಡತೋಳು ಹಾಗೂ ಸುತ್ತಳತೆ ಆಧರಿಸಿ ಮಕ್ಕಳ ತಪಾಸಣೆ ಹಾಗೂ ಮಕ್ಕಳ ಆರೋಗ್ಯ ಕಡೆ ಗಮನ ಹರಿಸಿ ಪೌಷ್ಠಿಕ ಆಹಾರ ಸೇವಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ,ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಕಣವಿ ,ಆಶಾ ಕಾರ್ಯಕರ್ತೆ ಚೇತನಾ, ಭಾಗವಹಿಸಿದ್ದರು.