ಹಾವೇರಿ ಸಮ್ಮೇಳನ : ಕಾರ್ಯಕಾರಿ ಸಭೆಯಲ್ಲಿ ವಾದವಿವಾದ, ಮಾತಿನ ಚಕಮಕಿ, ಸಭೆ ಮುಂದೂಡಿಕೆ : ಎರಡನೇ ದಿನವು ಸಭೆಯಲ್ಲಿ ಗೊಂದಲ
ಹಾವೇರಿ/ ಬೆಳಗಾವಿ : ತಮ್ಮ ಜಿಲ್ಲೆಗೆ ಅವಕಾಶ ನೀಡುವಂತೆ ರಾಜ್ಯದ ಕೆಲವು ಜಿಲ್ಲೆಯ ಜಿಲ್ಲಾಧ್ಯಕ್ಷರು ಪಟ್ಟು ಹಿಡಿ ಹಿನ್ನೆಲೆಯಲ್ಲಿ ಕಸಾಪ ಕಾರ್ಯಕಾರಿ ಸಭೆಯಲ್ಲಿ ವಾದವಿವಾದ ಉದ್ಭವವಾಗಿ, ಮಾತಿನ ಚಕಮಕಿಯಿಂದ ಗಲಾಟೆ ನಡೆದು ಸಭೆಯನ್ನು ರವಿವಾರಕ್ಕೆ ಮುಂದೂಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ರವಿವಾರ ಬೆಳಿಗ್ಗೆ ಸಭೆ ಆರಂಭವಾದರೂ ಮತ್ತೆ ಸಭೆಯಲ್ಲಿ ಗೊಂದಲ ನಿರ್ಮಾಣ ವಾದ ಘಟನೆ ವರದಿಯಾಗಿದೆ.
ಹಾವೇರಿ ಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ಎಲ್ಲಿ ನಡೆಯಬೇಕು ಎನ್ನುವ ಜಿಲ್ಲಾಧ್ಯಕ್ಷರ ಕಾರ್ಯಕಾರಿ ಸಭೆಯಲ್ಲಿ ನಿರ್ಧಾರ ಮಾಡಬೇಕಾಗುತ್ತದೆ. ಅದೇ ರೀತಿಯಾಗಿ ಶನಿವಾರ ರಾತ್ರಿ ರಾಜ್ಯಾಧ್ಯಕ್ಷರ ನೇತ್ರತ್ವದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಪ್ರಮುಖವಾಗಿ ಮಂಡ್ಯ ಹಾಗೂ ಚಿಕ್ಕಮಗಳೂರು ಮತ್ತು ಬೀದರ ಜಿಲ್ಲೆಗಳು ಸೇರಿದಂತೆ ಕೆಲವು ಜಿಲ್ಲೆಯ ಜಿಲ್ಲಾಧ್ಯಕ್ಷರು ಗಳು ಮುಂದಿನ ಸಾರಿ ತಮ್ಮ ಜಿಲ್ಲೆಗೆ ಅವಕಾಶ ನಮಗೇ ಕೊಡಬೇಕೆಂದು ರಾಜ್ಯಾಧ್ಯಕ್ಷರ ಬಳಿ ಪಟ್ಟು ಹಿಡಿದರು.
ಈ ರೀತಿಯ ಜಿಲ್ಲಾಧ್ಯಕ್ಷರ ಒತ್ತಾಯಕ್ಕೆ ಕಾರ್ಯಕಾರಿ ಸಭೆಯಲ್ಲಿ ಸದಸ್ಯರ ಸಮಾಧಾನದಿಂದ ರಾಜ್ಯಾಧ್ಯಕ್ಷರು ಪರದಾಡಿದರು. ಬಳಿಕ ರಾಜ್ಯಾಧ್ಯಕ್ಷರು 15 ನಿಮಿಷಗಳ ವರೆಗೆ ಸಭೆಯನ್ನು ಮುಂದೂಡಿದರು. ಬಳಿಕ ಕೆಲ ಜಿಲ್ಲಾಧ್ಯಕ್ಷರುಗಳು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸಭೆಯನ್ನು ರವಿವಾರಕ್ಕೆ ಮುಂದೂಡಲಾಯಿತು. ಅಲ್ಲದೆ ಕಾರ್ಯಕಾರಿ ಸಭೆಯನ್ನು ಗುಪ್ತವಾಗಿ ನಡೆಸಬೇಕಿತ್ತು ಆದರೆ ತೆರೆದ ಕೊಠಡಿಯಲ್ಲಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಇದಕ್ಕೆ ನಿಕಟಪೂರ್ವ ಅಧ್ಯಕ್ಷ ಮನುಬಳಿಗಾರ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಅದರಂತೆ ಕಾರ್ಯಕಾರಿ ಸಭೆಯನ್ನು ರವಿವಾರ ಬೆಳಿಗ್ಗೆ ಪ್ರಾರಂಭಿಸಿದರೂ ಸಭೆಯಲ್ಲಿ ಮತ್ತೆ ವಾದ ವಿವಾದ ಗೊಂದಲ ಮುಂದೆ ವರೆಯಿದಿದೆ ಎಂದು ತಿಳಿದು ಬಂದಿದೆ. ಇಂದಿನ ಈ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ ಸಭೆಯಲ್ಲಿ ಭಾಗಿಯಾಗಿದ್ದಾರೆ.
ನಿನ್ನೆ ಗದ್ದಲ ಹಿನ್ನೆಲೆ ಮುಂದೂಡಿದ್ದ ಸಭೆಯು ಪ್ರಾರಂಭಗೊಂಡಿದ್ದು, ಕೆಲವೇ ಹೊತ್ತಿನಲ್ಲಿ ಮುಂದಿನ ಸಮ್ಮೇಳನ ಸ್ಥಳ ನಿಗದಿಯಾಗಲಿದೆ.