ನೀವು ಎಂದೆದಿಗೂ ತೆಲುಗು ಜನರ ಹೃದಯದಲ್ಲಿ ಧ್ರುವತಾರೆ: ಜೂನಿಯರ್ ಎನ್ಟಿಆರ್
ಹೈದರಬಾದ್ : ಜನೆವರಿ 18 ತೆಲುಗು ಚಿತ್ರರಂಗದ ಖ್ಯಾತಿಯನ್ನ ಎಲ್ಲಾ ದಿಕ್ಕುಗಳಲ್ಲೂ ಪಸರಿಸಿದ ಮಹಾನ್ ನಟ ನಂದಮೂರಿ ತಾರಕ ರಾಮರಾವ್. ತೆಲುಗು ಪ್ರೇಕ್ಷಕರ ಹೃದಯದಲ್ಲಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಹಲವು ಅದ್ಬುತ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಪಾತ್ರಗಳ ಮೂಲಕ ತೆಲುಗು ಪರದೆಯ ಮೇಲೆ ವಿಶ್ವವಿಖ್ಯಾತ ನಟರಾಗಿ ಹೊರಹೊಮ್ಮಿದ ನಟ ರಾಮಾರಾವ್ ಇಂದು ಅವರ ಪುಣ್ಯಸ್ಮರಣೆ. ಅವರ ನೋಟ ಮತ್ತು ನಟನೆಯನ್ನು ಭಾವನಾತ್ಮಕವಾಗಿ ಹೋಲುವ ಅವರ ಮೊಮ್ಮಗ ಎನ್ಟಿಆರ್, ತಮ್ಮ ಅಜ್ಜನನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಇಂದು ಮುಂದು ಮತ್ತು ಎಂದೆದು ತೆಲುಗು ಜನರ ಹೃದಯದಲ್ಲಿ ನೀವು ಧ್ರುವತಾರೆ” ಎಂದು ಎನ್ಟಿಆರ್ ತಮ್ಮ ಅಜ್ಜನನ್ನು ನೆನಪಿಸಿಕೊಂಡರು, ಅಷ್ಟೆ ಅಲ್ಲ ಜೂನಿಯರ್ ಎನ್ಟಿಆರ್ ರಾಮಾರವ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಜೂನಿಯರ್ ಎನ್ ಟಿಆರ್ ರನ್ನ ‘ತಾತ’ ಎಂದು ಮುದ್ದು ಮಾಡುತ್ತಿದ್ದರು ದಿವಂಗತ ನಟ ರಾಮಾರಾವ್ . ಅವರ ಬಗ್ಗೆ ಅಪಾರ ಅಭಿಮಾನ, ಗೌರವ ಹೊಂದಿರುವ ತಾರಕ್ ಗೆ ಅವರೇ ಸ್ಪೂರ್ತಿ. ಇಂದು ಜನವರಿ 18, 1996 ರಂದು ಇಹಲೋಕ ತ್ಯೆಜಿಸಿ 26 ವರ್ಷಗಳಾಗಿವೆ.