ದ್ವೇಷ ಭಾಷಣ ನಿಯಂತ್ರಣ ಮಸೂದೆ: ಸ್ವಾಗತರ್ಹ ಆದಷ್ಟು ಬೇಗಾ ಅನುಷ್ಠಾನವಾಗಲಿ: ವೆಲ್ಫೇರ್ ಪಾರ್ಟಿ ಆಗ್ರಹ

ದ್ವೇಷ ಭಾಷಣ ನಿಯಂತ್ರಣ ಮಸೂದೆ: ಸ್ವಾಗತರ್ಹ ಆದಷ್ಟು ಬೇಗಾ ಅನುಷ್ಠಾನವಾಗಲಿ: ವೆಲ್ಫೇರ್ ಪಾರ್ಟಿ ಆಗ್ರಹ

ದ್ವೇಷ ಭಾಷಣ ನಿಯಂತ್ರಣ ಮಸೂದೆ: ಸ್ವಾಗತರ್ಹ ಆದಷ್ಟು ಬೇಗಾ ಅನುಷ್ಠಾನವಾಗಲಿ: ವೆಲ್ಫೇರ್ ಪಾರ್ಟಿ ಆಗ್ರಹ 

ಬೆಂಗಳೂರು 02: ದ್ವೇಷ ಭಾಷಣ ನಿಯಂತ್ರಣ ಮಸೂದೆ ಅಗಸ್ಟ್‌ 11ರಂದು ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಅಂಗೀಕಾರವಾಗಿ ಆದಷ್ಟು ಬೇಗಾ ಅನುಷ್ಠಾನಕ್ಕೆ ಬರಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ವಕೀಲರು ತಾಹಿರ್ ಹುಸೇನ್ ಆಗ್ರಹಿಸಿದರು. 

ಮಸೋದೆಯಲ್ಲಿ ಇರುವ ಅಂಶಗಳು ದ್ವೇಷ ಹರಡುವಿಕೆಯನ್ನು ನಿಯಂತ್ರಿಸಲು ಸಹಾಯವಾಗಬಹುದು ಆದರೆ ಇದನ್ನು ಕೇವಲ ರಾಜಕೀಯ  ಅಸ್ತ್ರವಾಗದಿರಬಾರದು ಮತ್ತು ರಾಜಕೀಯ ದುರುದ್ದೇಶಕ್ಕೆ ಬಳಕೆ ಯಾಗದೆ ಸಮಾಜದಲ್ಲಿ ಹರಡಿರುವ ದ್ವೇಷವನ್ನು ನಿಯಂತ್ರಿಸಲು ಬಳಕೆಯಾಗಬೇಕು ಎಂದು ಅವರು ಹೇಳಿದರು. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸರಣಿ ಕೊಲೆಗಳ ಬಳಿಕ ದ್ವೇಷ ಭಾಷಣ, ರಾಜ್ಯದ ಕೆಲವೊಂದು ಡಿಜಿಟಲ್ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿರಂತರವಾಗಿ ತೊಡಗಿದ್ದು ಒಂದು ನಿರ್ದಿಷ್ಟ ಸಮುದಾಯದ ದ್ವೇಷ ಸಾರಿದ್ದಾರೆ ಎಂದು ದೂರಿದರು. 

ಇತ್ತೀಚಿಗೆ ರಾಜ್ಯದ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಧರ್ಮಸ್ಥಳ ಪ್ರಕರಣ ಸಂಬಂಧ ಒಂದು ಸಮುದಾಯವನ್ನು ಗುರಿಯಾಗಿಸಿ ಮಾಡಿರುವ ದ್ವೇಷದ ಮಾತುಗಳಿಂದ ಸಮಾಜದಲ್ಲಿ ಸಾಕಷ್ಟು ಗೊಂದಲ ಉಂಟಾಯಿತು. ಎಸ್‌ಐಟಿ ತನಿಖೆ ನಡೆಸುವಾಗ ಒಂದು ಜವಾಬ್ದಾರಿಯಾದ ಹುದ್ದೆಯಲ್ಲಿ ಇರುವ ಆರ್ ಅಶೋಕ್  ಇಂತ ಕೀಳುಮಟ್ಟದ ಹೇಳಿಕೆ ನೀಡುವಂಥದ್ದು ಅವರ ಹುದ್ದೆಗೆ ಶೋಭೆ ತರುವಂತದಲ್ಲ ಇಂಥ ಉನ್ನತ ಸ್ಥಾನದಲ್ಲಿ ಇದ್ದವರೇ ಹೀಗೆ ದ್ವೇಷ ಹರಡಿಸುವ ಕೆಲಸ ಮಾಡಿದರೆ ಇನ್ನು ಇವರನ್ನು ಹಿಂಬಾಲಿಸುವವರು ಯಾವ ಮಟ್ಟಕೆ ಹೋಗಬಹುದು..? ಹಾಗಾಗಿ ಈ ಮಸೋದೆ ಆದಷ್ಟು ಬೇಗಾ ಜಾರಿಯಾದರೆ ಸಮಾಜ ದಲ್ಲಿ ಶಾಂತಿ ಸುವೆಸ್ಥೆ ಕಾಪಾಡಲು ಅನುಕೂಲ ಆಗುವುದು. ಅದೇರೀತಿ ಮುಂಬರುವ ಮುಂಗಾರು ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು 2ಃ ಮೀಸಲಾತಿ ಮರು ಜಾರಿಗೆ ತಂದು ರಾಜ್ಯದ ಕಾಂಗ್ರೆಸ್ ಸರಕಾರವು ನುಡಿದಂತೆ ನಡೆಯಬೇಕೆಂದು ಅವರು ಈ ಮೂಲಕ ಆಗ್ರಹಿಸಿದರು. 


ಸುದ್ದಿ ಓದಿ