ಹಾರೂಗೇರಿ ಪೊಲೀಸರ ಕಾರ್ಯಾಚರಣೆ : ಅಕ್ರಮವಾಗಿ ಸಾಗಿಸುತ್ತಿದ್ದ 11 ಟನ್ ಪಡಿತರ ಅಕ್ಕಿ, ಲಾರಿ ವಶಕ್ಕೆ : ಓರ್ವನ ಬಂಧನ
ಬೆಳಗಾವಿ, ಅ, 21: ಅಕ್ರಮವಾಗಿ ಲಾರಿಯಲ್ಲಿ ಪಡಿತರ ಸಾಗಿಸುತ್ತಿದ್ದ ಚಾಲಕ ಸೇರಿದಂತೆ 11 ಟನ್ ಪಡಿತರ ಅಕ್ಕಿ ಹಾಗೂ ಲಾರಿ ಸಮೇತ ವಶಪಡಿಸಿಕೊಳ್ಳುವಲ್ಲಿ ಹಾರೋಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿ. 20ರಂದು ಆರೋಪಿ (ಲಾರಿ ಚಾಲಕ ಮಾಲಕನಾಗಿರುವ ಯಮನಪ್ಪ ಭೀಮಪ್ಪ ಮಾಳ್ಯಾಗೋಳ, (47) ಸಾ- ಸಂಗನಕೇರಿ ತಾ- ಮೂಡಲಗಿ ಈತನು ತನ್ನ ಟಾಟಾ ಕಂಪನಿಯ 1109 ಗೂಡ್ಸ್ ಕ್ಯಾಂಟರ್ ನಂಬರ್ ಕೆ.ಎ- 49/1155 ಇದರಲ್ಲಿ ಸುಮಾರು 11 ಟನ್ 520 ಕೆಜಿ ಪಡಿತರ ಅಕ್ಕಿ (ಸುಮಾರು 384 ಚೀಲಗಳು (2,53,440/- ರೂ) ತುಂಬಿಕೊಂಡು ಗುರ್ಲಾಪುರ ಕ್ರಾಸ್ ಮಾರ್ಗದಿಂದ ಅಥಣಿ ಮಾರ್ಗದ ಕಡೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಹಾರೂಗೇರಿ ಠಾಣಾ ವ್ಯಾಪ್ತಿಯ ಹಿಡಕಲ್ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ *ಹಾರೂಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ. 155/2022 ಕಲಂ. 3, 7 E.C Act* ನೇದ್ದಕ್ಕೆ ಪ್ರಕರಣ ದಾಖಲಾಗಿದ್ದು ಇರುತ್ತದೆ.