ಮುಧೋಳ

ಧರ್ಮದ ಮೌಲ್ಯಗಳ ಸಂರಕ್ಷಣೆಯಿಂದ ಸಾಮರಸ್ಯ; ಡಾ.ಚನ್ನಸಿದ್ಧರಾಮಶ್ರೀ

ಧರ್ಮದ ಮೌಲ್ಯಗಳ ಸಂರಕ್ಷಣೆಯಿಂದ ಸಾಮರಸ್ಯ; ಡಾ.ಚನ್ನಸಿದ್ಧರಾಮಶ್ರೀ

     ಮುಧೋಳ; ಇಂದಿನ ದಿನಗಳಲ್ಲಿ ಮಾನವ ಧರ್ಮದ ಮೌಲ್ಯಗಳ ಸಂರಕ್ಷಣೆ ಮತ್ತು ಪರಿಪಾಲನೆಯಿಂದ ಶಾಂತಿ ಸಾಮರಸ್ಯ  ನೆಲೆಗೊಳ್ಳಲು ಸಾಧ್ಯವಾಗುವುದು. ಭಗವಂತ ನಮಗೆ ನೀಡಿದರಲ್ಲಿ ಅಲ್ಪ ಕಾಣಿಕೆಯನ್ನಾದರೂ ಧರ್ಮ ಹಾಗೂ ಸೇವೆಗಾಗಿ ಮುಡಿಪಾಗಿಡಬೇಕು ಎಂದು ಶ್ರೀಶೈಲ್ ಪೀಠದ 1008 ಜಗದ್ಗುರು  ಡಾ.ಚನ್ನಸಿದ್ಧರಾಮ ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು 

      ಗುರುವಾರ ರಾತ್ರಿ ತಾಲೂಕಿನ ಜಾಲಿಬೇರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಮಹಾರಥೋತ್ಸವ ಪ್ರವಚನ ಹಾಗೂ ಧರ್ಮಸಬೆ ಸಾಮರಸ್ಯ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  

     ಮನುಷ್ಯನಾಗಿ ಜನ್ಮವೆತ್ತಿದ ಮೇಲೆ ಮತ್ತೊಬ್ಬರ ಹಿತಕ್ಕಾಗಿ ಸಹಾಯ ಸಹಕಾರ ನೀಡಬೇಕು ,ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಸತ್ಯ. ಆದರೆ ಮನುಷ್ಯನ ಬದುಕು ಒತ್ತಡದಿಂದಾಗಿ ಸುಖ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ತಾನು ಎಲ್ಲರಿಗಾಗಿ ಎನ್ನುವ ಮನೋಭಾವ ದೂರವಾಗಿ ಎಲ್ಲರೂ ತನಗಾಗಿ ಅನ್ನುವ ಸ್ವಾರ್ಥ ಬೆಳೆಯುತ್ತಿರುವ ಕಾರಣ ಅಶಾಂತಿ, ಅತೃಪ್ತಿ ಮತ್ತು ಪರಸ್ಪರ ಸಂಘರ್ಷ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕು. ಸ್ವಧರ್ಮ ಪರಿಪಾಲನೆ ಪರಧರ್ಮ ಸಹಿಷ್ಣುತೆಯಿಂದ ಸಾಮರಸ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

    ಕಾರ್ಯಕ್ರಮದಲ್ಲಿ  ಕೊಣ್ಣೂರು ಹೊರಗಿನಮಠದ ವಿಶ್ವಪ್ರಭುದೇವ ಶೀವಾಚಾರ್ಯ ಮಹಾಸ್ವಾಮಿಗಳು, ಗವಿಉಮಠದ ನಿಜಗುಣದೇವರು ,ಜಮಖಂಡಿ ಕಲ್ಯಾನಮಠದ  ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ರೂಗಿಯ ಅಡವಿ ನಿತ್ಯಾನಂದ ಮಹಾಸ್ವಾಮಿಗಳು,ಕಸಬಾಜಂಬಗಿ ಹಿರೇಮಠದ ರಾಜಶೇಖರ ಮಹಾಸ್ವಾಮಿಗಳು, ಯಡಹಳ್ಳಿ ಅಡವಿಮಠ ಚಂದ್ರಶೇಖರ ಮಹಾಸ್ವಾಮಿಗಳು, ಉತ್ತೂರ ಹಿರೇಮಠದ ನೂರಂದಯ್ಯ ಮಹಾಸ್ವಾಮಿಗಳು, ರೇವಯ್ಯಮಹಾಸ್ವಾಮಿಗಳು, ರಾಚಯ್ಯ ಮಠಪತಿ, ಮಹಾರಾಷ್ಟ್ರದ ನೂಲ ಮಠದ ನೂಲ ಶ್ರೀಗಳು, ಸಂಗಯ್ಯ ಈರಯ್ಯ ಮಠಪತಿ, ಮಾನಿಂಗಪ್ಪ ತೇಲಿ ರಾಜು ತೇಲಿ, ಮಹಾದೇವ ಬಿಳಿಕುರಿ, ಮಾನಿಂಗ ತೇಲಿ,ಶಿವಪ್ಪ ಬಂಟನೂರ, ಅಶೋಕ ನಾವಿ, ಯಮನಪ್ಪ ತೇಲಿ,ವೆಂಕಟ ಮೆಟಗುಡ್ಡ ಇದ್ದರು. 

  ಸಂಜೆ ಪಲ್ಲಕ್ಕಿ ಉತ್ಸವ, ಮಲ್ಲಿಕಾರ್ಜುನ ಮಹಾರಥೋತ್ಸವ,ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ,50ಕೆಜಿ ಕಬಡ್ಡಿ ಪಂದ್ಯಾವಳಿಗಳು ಜರುಗಿದವು. 


ಸುದ್ದಿ ಓದಿ