ಮಹಲಿಂಗಪುರ

ಕಠಿಣ ಪರಿಶ್ರಮವೇ ಸಾಧನೆಯ ಬಾಗಿಲು: ಸೋರಗಾಂವಿ.

ಕಠಿಣ ಪರಿಶ್ರಮವೇ ಸಾಧನೆಯ ಬಾಗಿಲು: ಸೋರಗಾಂವಿ.

ಮಹಾಲಿಂಗಪುರ : ಕೆಸರಿನಲ್ಲಿ ಕಮಲ ಅರಳುವಂತೆ, ತಿಪ್ಪೆಯಲ್ಲಿ ಗುಲಾಬಿ ಬೆಳೆದಂತೆ ಬಡತನದ ನೋವಿನಲ್ಲಿಕಠಿಣ ಪರಿಶ್ರಮದ ಹಾಗೂ ಶ್ರದ್ಧೆಯ ನಿರಂತರ ಅಧ್ಯಯನದಿಂದ ಪಟ್ಟಣದ ಪೂಜಾ ಸೋರಗಾವಿ ಲೆಕ್ಕಪರಿಶೋಧಕರ ಮಹಾಮಂಡಳಿಯಿಂದ ನಡೆಸಲ್ಪಡುವ ಸಿ.ಎ ಅಂತಿಮ ಪರೀಕ್ಷೆಯಲ್ಲಿತೇರ್ಗಡೆಗೊಂಡು ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. 

ಪಟ್ಟಣದ ಬಡ ವ್ಯಾಪಾರಿ ಶಂಕರ ಸೋರಗಾಂವಿ ಹಾಗೂ ಗಾಮೆಂರ್ಟನಲ್ಲಿ ಕೆಲಸ ಮಾಡುವ ಶೋಭಾ ಶಂಕರ ಸೋರಗಾಂವಿ ಇವರ ಮಗಳಾಗಿ ಜನಿಸಿದ ಪೂಜಾ ಮಹಾಲಿಂಗಪುರದ ಸಿ ಕೆ ಚಿಂಚಲಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದು, ಬನಹಟ್ಟಿಯಎಸ್‌.ಆರ್‌.ಎಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ  ಪದವಿಪೂರ್ವ ಶಿಕ್ಷಣ ಮುಗಿಸಿ ಮುಂದೆ ಸಿಪಿಟಿ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಇಂಟರ್ಮಿಡಿಯಟ್ ನಲ್ಲಿಎರಡುಗ್ರೂಪ್ ಗಳನ್ನು ಪಾಸ್ ಮಾಡುವುದರ ಮೂಲಕ ಬೆಂಗಳೂರಿನ ಲೆಕ್ಕಪರಿಶೋಧಕರಾದರವೀಂದ್ರಕೋರೆ ಹಾಗೂ ಎನ್ ಬಿ ನೇಸೂರಕಂಪನಿಯಲ್ಲಿ ಮೂರು ವರ್ಷಗಳ ಕಾಲ ಆರ್ಟಿಕಲಸಿಪ್ ಪೂರ್ಣಗೊಳಿಸಿ ಅಂತಿಮ ಪರೀಕ್ಷೆಯನ್ನು ಬರೆದುಉತ್ತೀರ್ಣರಾಗಿಅರ್ಹತೆ ಪಡೆದು ಯಶಸ್ವಿಯಾಗಿದ್ದಾರೆ. 

ಪೂಜಾಳ ಸಾಧನೆಗೆ ನಗರದ ಲೇಕ್ಕಪರಿಶೋಧಕರಾದಎಸ್‌.ಬಿ.ನೇಸೂರ ಹಾಗೂ ಕಂಪನಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂಜಾ ಸತತ ಪ್ರಯತ್ನಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಅಧ್ಯಯನವೇಉತ್ತೀರ್ಣಕ್ಕೆರಹದಾರಿಎಂದು ಹೇಳಿದರು. ಪಾರ್ವತಿ ಶಿವಪ್ಪ ನೇಸೂರಕಾರ್ಯಕ್ರಮ ಸಂಘಟಿಸಿದ್ದರು, ಶಿಕ್ಷಕ ಎಸ್‌.ಬಿ ಮಟಗಾರ ಹಾಗೂ ಪಿ. ಡಿ ನೇಸೂರ ಮಾತನಾಡಿದರು.ಚೇತನ ಹಿರೇಮಠ,ಶಶಿ ಅಂಬಿ, ಮಲ್ಲು ಮಠಪತಿ, ಪವನ್‌ಜಮಖಂಡಿ ಇದ್ದರು.ಪ್ರೊ.ಬಿ.ಎಸ್‌.ನೇಗಿನಾಳ ಸ್ವಾಗತಿಸಿ ನಿರೂಪಿಸಿದರು,ಸಿಎ ಎಸ್‌.ಬಿ ನೇಸೂರ ವಂದಿಸಿದರು. 


ಸುದ್ದಿ ಓದಿ